“ತಾಯಿ ದೇವರಾಗಬಹುದು, ದೇವರು ತಾಯಿಯಾಗಲ್ಲ” - ಶಿವರಾಜ ಅಂಡಗಿ

“ತಾಯಿ ದೇವರಾಗಬಹುದು, ದೇವರು ತಾಯಿಯಾಗಲ್ಲ” - ಶಿವರಾಜ ಅಂಡಗಿ
ನಮ್ಮ ಕಣ್ಣಿಗೆ ಕಾಣುವ ದೇವರೆಂದರೇ ಅದು ತಾಯಿ, ತನಗಾಗಿ ಏನನ್ನು ಬಯಸದವಳು, ತನ್ನಾಗಿ ಕೂಡಿಡದವಳು ತನಗಿಲ್ಲವೆಂದು ಕೊರಗದವಲು, ಯಾರಾದರು ಇದ್ದರೆ ಅವಳು ಮಾತ್ರ ತಾಯಿ, ಹಾಗಾಗಿ ತಾಯಿ ದೇವರಾಗಬಹುದು, ದೇವರು ತಾಯಿಯಾಗಲ್ಲ ಎಂದು ಕಲಬುರಗಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷರಾದ ಶಿವರಾಜ ಅಂಡಗಿ ರವರು ತಾಯಿ ಹಿರಿಮೆ ಕುರಿತು ಮಾತನಾಡಿದರು.
ದಿನಾಂಕ: ೧೧.೦೫.೨೦೨೫ರಂದು ಬೆಂಗಳೂರು ನಗರದ ಕೆಂಗೇರಿ ಕೂಡಿಪಾಳ್ಯದಲ್ಲಿ ಹಮ್ಮಿಕೊಂಡ “ವಿಶ್ವ ತಾಯಿಂದಿರ ದಿನಾಚರಣೆ” ನಿಮ್ಮಿತ ಮಾತನಾಡುವಾಗ ನಾವು ಸೋತ್ತಾಗ ಸದಾ ನಮ್ಮ ಜೊತೆಗೆ ನಿಲ್ಲುವಂತಹ ನಮ್ಮ ನಗುವಿನಲ್ಲಿಯೇ ತನ್ನ ಕುಷಿ ಕಂಡವಳು ನಮಗಾಗಿಯೇ ಇಡೀ ಜೀವನ ಮೀಸಲಿಟ್ಟವಳೆ ‘ತಾಯಿ’. ಪ್ರತಿದಿನವೂ ನಾವು ತಾಯಂದರಿಗೆ ಸ್ವಲ್ಪ ಸಮಯ ಕೊಟ್ಟು ಸೇವೆ ಸಲ್ಲಿಸಿದರೆ ಮಾತ್ರ ನಮ್ಮ ಜೀವನ ಸಾರ್ಥಕ ಎಂದರು.
ಸಿ.ಎ.ವೀರಶೆಟ್ಟಿ ಪೊಲೀಸ್ ಪಾಟೀಲ್, ದಾನಪ್ಪ ಪೊಲೀಸ್ ಪಾಟೀಲ್, ಸೇಡಂ, ಶಂಕರಗೌಡ ಪಾಟೀಲ್, ಬಿಜನಳ್ಳಿ ಬಾಪುಗೌಡ ಪಾಟೀಲ್, ಕಲಬುರಗಿ, ಶ್ರೀಮತಿ.ಅಂಬಿಕಾ ಪಾಟೀಲ್ ರವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ತಾಯಂದಿರಾದ ಶ್ರೀಮತಿ.ಶಾರದಾಬಾಯಿ ಪೊಲೀಸ್ ಪಾಟೀಲ್, ಗುಣವಂತಿ ಬಿರಾದಾರ್, ಕಮಲಾಬಾಯಿ ಹಿಪ್ಪರಗಿ, ಶಾಂತಾಬಾಯಿ ಪಾಟೀಲ್, ಶಾರದಾಬಾಯಿ ನಿರಂಜಿ, ರವರಿಗೆ ಸಾಂಕೇತಿವಾಗಿ ಸನ್ಮಾನಿಸಾಲಾಯಿತು.
ನಾಗರಾಜ ನಿರಂಜಿ ಸ್ವಾಗತಿಸಿದರು, ಗೌತಮ ನಿರಂಜಿ ರವರು ವಂದಿಸಿದರು ಪದ್ಮಾವತಿ ನಿರಂಜಿ ನಿರೂಪಿಸಿದರು. ದೇವಿಂದ್ರಪ್ಪ ಪಾಟೀಲ್ ಬಿಜನಳ್ಳಿ, ರೇಖಾ ಅಂಡಗಿ, ಸಿದ್ದಾರ್ಥ ಬಿರಾದಾರ ಪ್ರೀತಿ ನಿರಂಜಿ ಅಚಲರಾಜ ಅಂಡಗಿ, ಕುಮಾರ ಅರ್ಯನ್, ಆದಿತ್ಯ, ಅಪ್ಪು ಇತರರು ಉಪಸ್ಥಿತರಿದ್ದರು.