ಸಂಪ್ರೀತಿ (ಕವನ ಸಂಕಲನ )

ಸಂಪ್ರೀತಿ (ಕವನ ಸಂಕಲನ )

ಸಂಪ್ರೀತಿ (ಕವನ ಸಂಕಲನ )

ಪುಸ್ತಕ :-ಸಂಪ್ರೀತಿ (ಕವನ ಸಂಕಲನ )

ಲೇಖಕರು :-ಬಿ. ಎಂ. ಅಮರವಾಡಿ.(ಬಾಲಾಜಿ )

ಪ್ರಕಾಶಕರು :-ದಾಸ ಸಾಹಿತ್ಯ ಪರಿಷತ್ ಬೀದರ.

ಬೆಲೆ :-೮೦. ಎಂಬತ್ತು ರೂಪಾಯಿ 

ಬೀದರ:ಬಿ.ಎಂ.ಅಮರವಾಡಿಯವರು ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸೃಜನ ಶೀಲ ಬರಹಗಾರರಾಗುವ ಮೂಲಕ ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಗಡಿನಾಡ ರಕ್ಷಣೆ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ.

ಈ ಕವನ ಸಂಕಲನ ಕೃತಿಯಲ್ಲಿ ಬಹುಪಾಲು ಕವಿತೆಗಳು ಸಾಮಾಜಿಕ, ರಾಜಕೀಯ, ಕಾರ್ಮಿಕ, ಆರ್ಥಿಕ, ಪರಿಸರ ರಾಜಕೀಯ ನಾಡು ನುಡಿಯನ್ನು ಪ್ರತಿನಿಧಿಸುವ ಕವಿತೆಗಳ ಜೊತೆಗೆ ಅಧ್ಯಾತ್ಮ, ಪ್ರೀತಿ ಪ್ರೇಮ ಕವಿತೆಗಳನ್ನು ಒಳಗೊಂಡ ಕವನ ಸಂಕಲನವಾಗಿದೆ.

ಸಾಮಾಜಿಕವಾಗಿ ಹೇಳುವದಾದರೆ ಸಮಾಜಕ್ಕಾಗಿ ದುಡಿದ ಮಹಾತ್ಮರು ಮಹಾಚೇತನರು ಅವರ ಸಾಧನೆ ಹೋರಾಟದ ಚಿಂತನೆಗಳು ಬುದ್ಧ ಬಸವ ಗಾಂಧಿ ಕನಕ ಅಂಬೇಡ್ಕರ್ ಅಕ್ಕಮಹಾದೇವಿ ಪುರಂದರದಾಸರ ಸಂದೇಶ ತತ್ವಗಳು ಚಿಂತನೆಗಳು ಕವಿತೆಗಳ ಮೂಲಕ ಓದುಗರರಿಗೆ ಹಾಗೆಯೇ ಓದಿಸಿಕೊಂಡು ಹೋಗುತ್ತವೆ.

. ""ಭೀಮ ನಿನ್ನ ಹೆಸರಿಲ್ಲದೇನು ಶಕ್ತಿ ಅಡಗಿದೆ.

ಭಾವ ತುಂಬಿ ಹಾಡುವಂತೆ ಹೃದಯ ತುಂಬಿ ಬಂದಿದೆ.

ಅನ್ನುವ ಅಂಬೇಡ್ಕರವರ ಕುರಿತಾದ ಕವನ ಅವರ ಸ್ವಾಭಿಮಾನ ಸಮಾನತೆಯನ್ನು ಹಾಕಿಕೊಟ್ಟ ದಾರಿ ಮನುಕುಲಕ್ಕೆ ಯೋಗ್ಯವಾಗಿದೆ ಅನ್ನುವುದನ್ನು ಸಾರುತ್ತಿದೆ.

. ""ಕನ್ನಡವೆಂದರೆ ನಮ್ ರಾಜ್ಯ 

. ಕನ್ನಡವೆಂದರೆ ನಮ್ ಭೂವಿ,

ಅನ್ನುವ ಮಾತು ಹೇಳುತ್ತದೆ. ಕನ್ನಡದ ಕುರಿತು ತಮ್ಮ ಕವಿತೆಯಲ್ಲಿ ಸಮಗ್ರ ನೋಟ ಚಿತ್ರೀಸಿದ್ದಾರೆ.

. ""ನೆಲ ಜಲ ಒಂದೇ ಎಲ್ಲರಿಗಿಲ್ಲಿ 

. ಸರ್ವಸಮಾನತೆಯ ಮೋಹರು,

. ಕನ್ನಡ ತಾಯಿಯ ಪಾದಕೆ ಅರ್ಪಣ

. ಭಕ್ತ ಭಾವ ತವರೂರು,

ನೆಲ ಜಲ ಒಂದಾಗಿರಲು ಜನ ಮನಗಳಲ್ಲಿ ಭೇದ ತರವಲ್ಲ. ನಾವೆಲ್ಲ ನಮಗೆಲ್ಲ ಕನ್ನಡ ತಾಯಿ ಭೂಮಿ ತವರೂರು ಅನ್ನುವುದನ್ನು ತಮ್ಮ ಕವಿತೆ ಮೂಲಕ ಹೇಳಿದ್ದಾರೆ.

. ತಂಗಾಳಿಯ ಈ ಸ್ಪರ್ಶಕೆ 

. ನನ್ನ ಮನ ತೇಲಿ ಉಯ್ಯಾಲೆಯಾಗಿದೆ.

. ನಿನ್ನ ಹೃದಯಕೆ ಸವಿಗಾನದ ಗಾನ ಹಾಡಿದಂತಾಗಿದೆ.

ಸಹಜವಾಗಿ ಕವಿಗಳು ತಮ್ಮ ಹರೆಯದ ದಿನಗಳನ್ನು ನೆನಪಿಸಿಕೊಂಡು ಕವಿತೆ ಮೂಲಕ ತನ್ನ ಮನದಾಳದಲ್ಲಿ ಹುದುಗಿರುವ ಮಾತನ್ನು ಹೊರಹಾಕಿರುವರು.

. ಸಂಭ್ರಮದ ಬದುಕಿಗೆ 

. ಮುನ್ನುಡಿ ಬರೆಯುವುದು 

. ಭೋಗದ ಮುಖವಾಡ ತೋರದಿರು ಮುಂದೇನು 

ಅನ್ನುವ ಮೂಲಕ ಪ್ರೇಮ ಪ್ರೀತಿ ಭಾವ ಅರಳಬೇಕು. ಆದರೆ ಅದು ಕೇವಲ ಭೋಗದ ಮುಖವಾಡವಾಗದೆ ನಿಜವಾದ ಪ್ರೀತಿ ಅರುಳವಂತಾಗಿರಬೇಕು. ಅನ್ನುವ ಸಂದೇಶವನ್ನು ಉಲ್ಲೆಖಿಸಿದ್ದಾರೆ.

ಹೀಗೆ ನನ್ನ ಭೂಮಿ,ಭಾರತಮಾತೇ, ರೈತಮುಗ್ದತೆ, ವಿಸ್ಮಯತೆ,ಪ್ರೇಮಬಂಧ,ನನ್ನವಳಲ್ಲಿ,ಒಲವಿನ ಬಳ್ಳಿ, ಹೃದಯದರಿಸಿ ಸೇರಿದಂತೆ ಒಟ್ಟು ೭೫ ಕವನಗಳು ಒಳಗೊಂಡಿರುವ ಕೃತಿ ಸಂಪ್ರೀತಿ ಕವನ ಸಂಕಲನವಾಗಿದ್ದು ಒಟ್ಟಾರೆಯಾಗಿ ಈ ಕವನ ಸಂಕಲನವು ಮಾನವೀಯ ಪ್ರಜ್ಞೆ ಪ್ರೀತಿ, ಪ್ರೇಮ ಹೃದಯವಿಶಾಲತೆ ಎಲ್ಲರು ಒಂದೇ ಎಂಬ ಭಾವನೆ ಸಂಪ್ರೀತಿ ಕವನ ಸಂಕಲನ ಕೃತಿಯು ಮೂಡಿಸುವಂತಿದೆ.

ಕೃತಿ ವಿಮರ್ಶಕ :- ಓಂಕಾರ ಪಾಟೀಲ