ರಾಷ್ಟ್ರ ರಕ್ಷಣಾ ಪಡೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ರಾಷ್ಟ್ರ ರಕ್ಷಣಾ ಪಡೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಕಲಬುರಗಿ ನಗರದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕಸಾಯಖಾನೆಗಳನ್ನು ಶೀಘ್ರವಾಗಿ ತೆರವುಗೊಳಿಸಬೇಕೆಂದು ರಾಷ್ಟ್ರ ರಕ್ಷಣಾ ಪಡೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಸ್ಲಿಂ ಸಮುದಾಯದ ಹಬ್ಬವಾದ ರಮಜಾನ ಹಬ್ಬವು ಬರುತ್ತಿದ್ದು, 'ಇದರ ಸಲುವಾಗಿ ಸದರಿ ಸಮುದಾಯದವರು ಮಾಡುವ ಉಪವಾಸ, ಇತರೆ ಆಚರಣೆಗಳು ಸುರುವಾಗಿರುತ್ತದೆ. ಇಂತಹ ಸಂದರ್ಬದಲ್ಲಿ ಈಗಾಗಲೇ ಅನಧಿಕೃತವಾಗಿ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಾಂತ ಅನಧೀಕೃತವಾಗಿ ಕಸಾಯಿಖಾನೆಗಳು ನಡೆಯುತ್ತಿರುವುದು ಕಂಡು ಬಂದಿರುತ್ತದೆ. ಅದೇ ರೀತಿಯಾಗಿ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಾಂತ ಅಕ್ರಮವಾಗಿ ಎಲ್ಲೆಂದರಲ್ಲಿ ಅಂದರೇ ಬೀದಿ ಬೀದಿಗಳಲ್ಲಿ ಯಾವುದೇ ರೀತಿಯ ಪರವಾನಿಗೆ ಪಡೆಯದೇ ಬೀಪ್ ಹೋಟೆಲಗಳನ್ನು ನಡೆಸುತ್ತಿದ್ದು, ಸದರಿ ಹೋಟೆಲ / ಗೂಡಂಗಡಿಗಳನ್ನು ಯಾವುದೇ ರೀತಿಯ ಪರವಾನಿಗೆ ಪಡೆಯದೇ ಹಾಗೆಯೇ ಸದರಿ ಸ್ಥಳದಲ್ಲಿ ಯಾವುದೇ ಸ್ವಚ್ಚತೆಯನ್ನು ಕಾಪಾಡದೇ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದು, ಅದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಇಂತಹ ಅನಧಿಕೃತ / ಅಕ್ರಮ ಪರವಾನಿಗೆ ಇಲ್ಲದೇ ನಡೆಯುತ್ತಿರುವ ಹೋಟೆಲ | ಗೂಡಂಗಡಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ನಡೆಸುತ್ತಿರುವವರ ಮೇಲೆ ಕಾನೂನಿನ ಕ್ರಮ ಕೈಗೊಂಡು, ಶೀಘ್ರವಾಗಿ ಹೊಟೇಲ / ಗೂಡಂಗಡಿಗಳನ್ನು ಮುಚ್ಚಿಸಬೇಕು.
ಹಾಗೇಯೇ ಕಲಬುರಗಿ ನಗರದಲ್ಲಿ ಅನಧೀಕೃತವಾಗಿ ನಡೆಯುತ್ತಿರುವ ಕಸಾಯಿಖಾನೆಗಳಲ್ಲಿ ಹಾಗೂ ಬೀಫ್ ಹೊಟೇಲಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಇಡಿ ನಗರದ್ಯಾಂತ ಬಿಸಾಡುತ್ತಿದ್ದು, ಇದರಿಂದ ಬಿದಿ ನಾಯಿಗಳು ಹಾಗೂ ಸದರಿ ಮೌಂಸದ ತ್ಯಾಜ್ಯವನ್ನು ತಿಂದು ಜನರ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೆಯೇ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅದರಿಂದ ಇಂತಹ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸಲು ಸಂಬAಧಪಟ್ಟ ಇಲಾಖೆಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ತ್ಯಾಜ್ಯವನ್ನು ಸಂಸ್ಕರಿಸಲು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು.
ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಈಗಾಗಲೇ ಇಂತಹ ಹೋಟೆಲಗಳನ್ನು ನಡೆಸುತ್ತಿದ್ದು, ಇಂತಹ ಹೋಟೆಲಗಳಿಗೆ ಕಾನೂನಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ಬೀಫ್ ಸ್ಟಾಲ್ ಹಾಗೂ ಬೀಫ್ ಹೋಟೆಲ ಎಂದು ಹೆಸರಿಟ್ಟಿರುವುದು ಕಂಡು ಬಂದಿರುತ್ತದೆ. ಇಂತಹ ಹೆಸರಿಡಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಕೂಡಾ ಇಂತಹ ಹೆಸರುಗಳನ್ನು ಇಟ್ಟು ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಅದರಿಂದ ಇಂತಹ ಹೋಟೆಲಗಳನ್ನು ಬೀಫ್ ಸ್ಟಾಲ್ / ಬೀಫ್ ಹೋಟೆಲ್ ಎಂಬುದರ ಬದಲಾಗಿ ಬಪೆಲೋ ಸ್ಟಾಲ್ /ಬಪೆಲೋ ಹೋಟೆಲ ಎಂದು ಹೆಸರಿಡಲು ಸಂಬAಧಪಟ್ಟವರಿಗೆ ಸೂಕ್ತ ನಿರ್ದೇಶನ ನಿಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರ ರಕ್ಷಣಾ ಪಡೆ ಜಿಲ್ಲಾ ಅಧ್ಯಕ್ಷ ಮಡಿವಾಳಪ್ಪ ಅಮರಾವತಿ, ಈಶ್ವರ ಹಿಪ್ಪರಗಿ, ಕಿಶೋರ ವಾಗೃರೆ, ರಮೇಶ ಬಿದರಕರ್, ವಿಠಲ್ ಕುಲಕರ್ಣಿ, ರಾಕೇಶ ಜಮಾದಾರ, ವಿರೇಶ ಪಾಟೀಲ, ಶ್ರೀಕಾಂತ ಜಾಧವ, ಪ್ರವೀಣ ಸೂರ್ಯವಂಶಿ, ಬಾಲಾಜಿ, ಮಲ್ಲಿಕಾರ್ಜುನ, ಗುಂಡು, ಯಲ್ಲಾಲಿಂಗ ಪೂಜಾರಿ ಇದ್ದರು.