ಐಟಿ ಮತ್ತು ನೆಟ್ವರ್ಕಿಂಗ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪ್ರಮಾಣಪತ್ರ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

ಐಟಿ ಮತ್ತು ನೆಟ್ವರ್ಕಿಂಗ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪ್ರಮಾಣಪತ್ರ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

ಐಟಿ ಮತ್ತು ನೆಟ್ವರ್ಕಿಂಗ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪ್ರಮಾಣಪತ್ರ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

ಕಲಬುರಗಿ:ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ), ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಸಹಯೋಗದೊಂದಿಗೆ ಐಟಿ ಮತ್ತು ನೆಟ್ವರ್ಕಿಂಗ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪ್ರಮಾಣಪತ್ರ ಕಾರ್ಯಕ್ರಮ ವೃತ್ತಿ ತರಬೇತಿಗೆ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಎಂದು ಕೆಜಿಟಿಟಿಐ ನ ನಿರ್ದೇಶಕರು ಸ್ಯಾಮ್ಯುಯೆಲ್ ಪ್ರಶಾಂತ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು IT ಮತ್ತು ನೆಟ್‌ವರ್ಕಿಂಗ್‌ನಲ್ಲಿ ತರಬೇತಿಹೊಂದಿದವರು ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್, ನೆಟ್ ವರ್ಕ್ ಸಪೋರ್ಟ್ ಸ್ಪೆಷಲಿಸ್ಟ್, ನೆಟ್ವರ್ಕ್ ಎಂಜಿನಿಯರ್, ಸೈಬರ್ ಸೆಕ್ಯುರಿಟಿ ಸ್ಪೆಷಲಿಸ್ಟ್ ಮತ್ತು ಕೌಡ್ ಸ್ಪೆಷಲಿಸ್ಟ್ ಈ ರೀತಿಯ ವೃತ್ತಿ ಹೊಂದಲು ಸಹಾಯ ಮಾಡುತ್ತವೆ ಮತ್ತು ಇದು ಉದ್ಯಮದಲ್ಲಿ ಉತ್ತಮ ಬೇಡಿಕೆಯನ್ನು ಸಹ ಹೊಂದಿದೆ. ಎಂದರು.

ಈ ಕೋರ್ಸ್ ಸೇರಲು ವಿದ್ಯಾರ್ಹತೆ:

ಕನಿಷ್ಠ 50% ಅಂಕಗಳೊಂದಿಗೆ ವಿಜ್ಞಾನ, IT, ಎಂಜಿನಿಯರಿಂಗ್ ಮತ್ತು ಸಂಬಂಧಿತ ವಿಭಾಗಗಳಲ್ಲಿ ಪದವೀಧರರು (SC/ST/OBC ಗಾಗಿ 45%) ಅಂಕಗಳೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಸೆಪ್ಟೆಂಬರ್ 10, 2024 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9071423004, 9071423005, 08472-252111 ಸಂಪರ್ಕಿಸಬಹುದು ಅಥವಾ ಆನ್ಸೆನ್ www.kgtti.com ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಕಲಬುರಗಿ / ಕಲಬುರ್ಗಿಯ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಹತ್ತಿರ, ಬಿಇಒ ಕಚೇರಿ ಹಿಂದೆ, ರಾಜಾಪುರ ರಸ್ತೆ, -(ಕೆಜಿಟಿಟಿಐ) ಕ್ಕೆ ಭೇಟಿ ನೀಡಬಹದು ಎಂದರು