ಕೆಕೆ : ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದ ಪ್ರಗತಿಯಲ್ಲಿ ಹಿಂದುಳಿದ ಪ್ರದೇಶವಾಗಿದೆ : ಸಚಿವ ಈಶ್ವರ್ ಖಂಡ್ರೆ

ಚಿಂಚೋಳಿ : ಅರಣ್ಯ ವನ್ಯಧಾಮ ಚಂದ್ರಂಪಳ್ಳಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸರಕಾರ ಬದ್ದವಾಗಿದೆ,

ಕೆಕೆ : ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದ ಪ್ರಗತಿಯಲ್ಲಿ ಹಿಂದುಳಿದ ಪ್ರದೇಶವಾಗಿದೆ : ಸಚಿವ ಈಶ್ವರ್ ಖಂಡ್ರೆ 

ಚಿಂಚೋಳಿ : ಕಲ್ಯಾಣ ಕರ್ನಾಟಕ ಭಾಗ ಸಾಂಸ್ಕೃತಿಕ ಹಾಗೂ ಅಧ್ಯಾತ್ಮಿಕವಾಗಿ ಬಹಳ ಮುಂದುವರೆದ ಭಾಗ ಆಗಿದ್ದರೂ ಅನೇಕ ಕಾರಣಗಳಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದ ಪ್ರಗತಿಯಲ್ಲಿ ಹಿಂದುಳಿದ ಪ್ರದೇಶವಾಗಿದೆ ಎಂದು ಅರಣ್ಯ ಮತ್ತು ಪರಿಸರ ಮಾಲಿನ್ಯ ಸಚಿವ ಈಶ್ವರ ಖಂಡ್ರೆ ಅವರು ಹೇಳಿದರು.

ಪಟ್ಟಣದ ವೀರೇಂದ್ರ ಪಾಟೀಲ್ ಶಿಕ್ಷಣ ಸಂಸ್ಥೆಯ 24ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಹಿಂದೆ ಯಾವುದೇ ಶಾಲಾ-ಕಾಲೇಜು, ತರಬೇತಿ ಕೇಂದ್ರಗಳು ಇರಲಿಲ್ಲ. ವಿದ್ಯಾಭ್ಯಾಸಕ್ಕಾಗಿ ತೆಲಂಗಾಣ ರಾಜ್ಯದ ಹೈದ್ರಾಬಾದನ ಉಸ್ಮಾನಿ ವಿಶ್ವ ವಿದ್ಯಾಲಯಕ್ಕೆ ಹೋಗುವ ಪರಿಸ್ಥಿತಿ ಇತ್ತು. ಇಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ, ಸರಕಾರ ಮಾಡದ ಕೆಲಸ ವೀರೇಂದ್ರ ಪಾಟೀಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೈಲಾಸ ನಾಥ ವೀರೇಂದ್ರ ಪಾಟೀಲ್ ಅವರು ಕಳೆದ 24 ವರ್ಷಗಳಿಂದ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದೊಂದಿಗೆ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವುದು ಶ್ಲಾಘನಿಯ.

ಭೂನಾದಿ ಶಿಕ್ಷಣ ಜೊತೆಗೆ ಪ್ರೌಢ ಶಿಕ್ಷಣ ಬೋಧನೆ ಗುಣಮಟ್ಟ ಗಟ್ಟಿಯಾಗಿದರೆ ಮಕ್ಕಳು ಒಳ್ಳೆಯ ನಾಗರೀಕರಾಗಲು ಸಾಧ್ಯ. ಒಳ್ಳೆಯ ಶಿಕ್ಷಕರ ಉತ್ತಮ ನಡತೆಯಿಂದ ಶಾಲೆ ಅಭಿವೃದ್ಧಿ ಬೆಳವಣಿಗೆಗೆ ಕಡೆಗೆ ಸಾಗಲಿದ್ದು, ಪ್ರತಿಭೆವುಳ್ಳ ಉತ್ತಮ ಶಿಕ್ಷಕರ ನೇಮಕ ಅಗತ್ಯ ಎಂದರು. ಶಿಕ್ಷಣದ ಜೊತೆಗೆ ಮನೆಯ ಮೊದಲ ಗುರು ಆಗಿರುವ ಪಾಲಕರು ಮಕ್ಕಳಿಗೆ ಬೆಳೆಸುವ ವಿಧಾನದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಮತ್ತು ಮಕ್ಕಳ ಒಳಗಿನ ಪ್ರತಿಭೆ ಗುರುತಿಸಿ, ತಂದೆ- ತಾಯಿಯೆಂದರು ಪ್ರೋತ್ಸಾಹಿಸಬೇಕು ಎಂದರು.

ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಶಾರದಾದೇವಿ.ಎಸ್. ರಾಠೋಡ್ ಮಾತನಾಡಿ, ಶಿಕ್ಷಣವು ಓದುವಿನಿಂದ ಮಾತ್ರವಲ್ಲದೆ, ಬಲ್ಲವರಿಂದ, ಅನುಭವದಿಂದ ಪಡೆಯಬೇಕು. ಎಲ್ಲಾ ರೀತಿಯಿಂದ ಜ್ಞಾನವನ್ನು ಪಡೆದಾಗ ವ್ಯಕ್ತಿತ್ವ ರೂಪಾಗೋಳಲು ಸಾಧ್ಯ. ಮಕ್ಕಳು ಜ್ಞಾವನ್ನು ಸಂಪಾದಿಸಲು ಎಲ್ಲಾ ಆಯಾಮಗಳಿಂದ ಪ್ರಯತ್ನಗಳು ನಡೆಸಬೇಕು ಎಂದರು. 

ಮುಗಳನಾಗಾವಿ ಸಂಸ್ಥಾನ ಕಟ್ಟಿಮನಿ ಹಿರೇಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಮಾತನಾಡಿದರು.

• ಚಂದ್ರಂಪಳ್ಳಿ ಪ್ರವಾಸಿ ಕೇಂದ್ರದ ಅಭಿವೃದ್ಧಿಗೆ ಸರಕಾರ ಬದ್ದವಾಗಿದೆ : 

ಕುಂಚಾವರಂ ಮತ್ತು ಚಂದ್ರಂಪಳ್ಳಿ ಅರಣ್ಯ ವನ್ಯಧಾಮ ದಲ್ಲಿ 20 ಸಾವಿರ ಹೆಕ್ಟರ್ ಅರಣ್ಯ ಭೂಮಿ ಹೊಂದಿದೆ. ಪ್ರಕೃತಿ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಜಗತ್ತಿನ ಎದುರಿಗೆ ಹವಾಮಾನ ಬದಲಾವಣೆ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಸಿರು ಮಟ್ಟ ಕಡಿಮೆ ಇದ್ದು, ಅದು ಹೆಚ್ಚಿಸುವ ಕೆಲಸ ಆಗಬೇಕಿದೆ. ಪರಿಸರ ಪ್ರಕೃತಿ ಉಳಿದರೆ ಜೀವ ಸಂಕೂಲಗಳು ಉಳಿಯಲು ಸಾಧ್ಯ. ಉಸಿರಾಡಲು ಉತ್ತಮ ಗಾಳಿ ಸವಿಯಲು ಮಕ್ಕಳು ಮತ್ತು ಪಾಲಕರು ಗಿಡ ಮರಗಳನ್ನು ಬೆಳೆಸಿ, ಪರಿಸರ ಪ್ರಕೃತಿ ಸಂರಕ್ಷಣೆ ಬೆಳೆವಣಿಗೆಗೆ ಪಣತೊಟ್ಟು ಹವ್ಯಾಸಿ ಪ್ರೇಮಿಗಳಾಗಬೇಕು. ಎಲ್ಲರ ಸಲಹೆ ಪಡೆದುಕೊಂಡು ಕುಂಚಾವರಂ ಮತ್ತು ಚಂದ್ರಂಪಳ್ಳಿ ಅರಣ್ಯ ವನ್ಯ ಧಾಮವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಕೆಲಸ ಆದಷ್ಟು ಬೇಗ ಸರಕಾರ ಮಾಡಲಿದೆ - ಅರಣ್ಯ ಮತ್ತು ಪರಿಸರ ಮಾಲಿನ್ಯ ಸಚಿವ ಈಶ್ವರ್ ಖಂಡ್ರೆ  

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ಮಲಿ, ಸಂಸ್ಥೆಯ ನಿರ್ದೇಶಕ ಧೂಳಪ್ಪ ಹೊಡೆಬಿರನಳ್ಳಿ, ಶಿವಪುತ್ರಪ್ಪ ಸಿಳ್ಳಿನ, ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಶಾರದಾದೇವಿ ಸುಭಾಶ ರಾಠೋಡ್, ರವಿ ಸಾಹುಕಾರ ತಂಬಾಕೆ, ಅಭಿನಂದನ ಪಾಟೀಲ್, ಶಿಕ್ಷಣ ಅಧಿಕಾರಿ ವಿ. ಲಕ್ಷ್ಮಯ್ಯ, ಶಾಲೆಯ ಮುಖ್ಯಗುರು ವಿಶ್ವನಾಥ ನಾಯನೂರ್, ಶಿವಾನಂದ ಪಾಟೀಲ್, ಮಹೇಮೂದ್ ಪಟೇಲ್ ಸಾಸರಗಾಂವ್, ಅಬ್ದುಲ್ ಬಾಶೀದ್, ಆನಂದಕುಮಾರ ಟೈಗರ್, ಸುರೇಶ ಭಂಟ, ನಾಗೇಶ ಗುಣಾಜಿ ಅವರು ಇದ್ದರು.