ಗುರುವಿನ ಮಹಿಮೆ ಸಾರಿದ ಬಿಜೆಪಿ ಒಬಿಸಿ ಮೋರ್ಚಾ ನಾಯಕ ಬಿ. ಜೈ ಸಿಂಗ್

ಗುರುವಿನ ಮಹಿಮೆ ಸಾರಿದ ಬಿಜೆಪಿ ಒಬಿಸಿ ಮೋರ್ಚಾ ನಾಯಕ ಬಿ. ಜೈ ಸಿಂಗ್
ಗುರು ಪೂರ್ಣಿಮೆಯ ಅಂಗವಾಗಿ ಬಿಜೆಪಿ ವತಿಯಿಂದ ಗುರು ವಂದನಾ ಕಾರ್ಯಕ್ರಮ
ಕಲಬುರ್ಗಿ, ಜುಲೈ 10:ಭಾರತೀಯ ಜನತಾ ಪಾರ್ಟಿ ಉತ್ತರ ಮಂಡಲದ ವಾರ್ಡ್ ಸಂಖ್ಯೆ 07 ರ ವತಿಯಿಂದ ಗುರು ಪೂರ್ಣಿಮೆಯ ಪ್ರಯುಕ್ತ ದುಬೈ ಕಾಲೋನಿ ಬಡಾವಣೆಯಲ್ಲಿ ನಿವೃತ್ತ ಶಾಲಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಅನನ್ಯ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರಾದ ಶ್ರೀ ಬಸವರಾಜ್ ನಾಟಿಕಾರ್ ಹಾಗೂ ಶ್ರೀ ಜಗನಾಥ್ ಪೋದ್ದಾರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಕಲಬುರ್ಗಿ ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 07 ರ ಸದಸ್ಯರಾದ ಶ್ರೀ ಕೃಷ್ಣ ನಾಯಕ , ವಾರ್ಡ್ 07 ರ ಗುರು ವಂದನಾ ಕಾರ್ಯಕ್ರಮದ ಪ್ರಭಾರಿ ಹಾಗೂ ಬಿಜೆಪಿ ಮಹಾನಗರ ಜಿಲ್ಲಾ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ಜೈ ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಶ್ರೀ ಬಿ. ಜೈ ಸಿಂಗ್ ಅವರು ಮಾತನಾಡಿ, “ಗುರು ಎಂದರೆ ನಮ್ಮ ಜೀವನಕ್ಕೆ ದಿಕ್ಕು ತೋರಿಸುವ ಮಾರ್ಗದರ್ಶಕರು. ಗುರುಗಳ ತ್ಯಾಗ, ಶ್ರಮ ಹಾಗೂ ಸಂಸ್ಕಾರಗಳಿಂದಲೇ ಇಂದು ನಾವು ಸಮಾಜದಲ್ಲಿ ನಿಂತಿದ್ದೇವೆ. ಅವರು ಮಾತ್ರವಲ್ಲದೆ, ನಮ್ಮನ್ನು ರೂಪಿಸಿದ ಪ್ರತಿಯೊಬ್ಬ ಶಿಕ್ಷಕರಿಗೂ ನಮೋನಮಃ”* ಎಂದು ಗುರು ಮಹಿಮೆಯನ್ನು ಕೊಂಡಾಡಿದರು.
ಈ ಕಾರ್ಯಕ್ರಮದಲ್ಲಿ ಬಡಾವಣೆಯ ಪ್ರಮುಖ ಮುಖಂಡರಾದ ಮಲ್ಲಿನಾಥ್ ಕೊಡಳಿ, ಸಿದ್ದಾರೂಢ ಕಲ್ಲೂರ್, ಶಂಭುಲ್ಲಿಂಗ್ ಧರ್ಮಪುರ, ಬಸವರಾಜ್ ಕೊಳಕುರ್, ಶರಣಪ್ಪಾ ಹಾದಿಮನಿ, ಶೇಖರ್ ಜಮಾದಾರ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು. ಗುರುಗಳ ಸ್ಮರಣೆ ,ಅವರ ಕೊಡುಗೆ ಸಮಾಜದಲ್ಲಿ ಸಕಾರಾತ್ಮಕತೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.