ಮೋಹರಂ ಹಬ್ಬ : ಬ್ಯಾಂಜೋ ತಂಡಗಳ ಸ್ಪರ್ಧೆ :..

ಮೋಹರಂ ಹಬ್ಬ : ಬ್ಯಾಂಜೋ ತಂಡಗಳ ಸ್ಪರ್ಧೆ :..

ಮೋಹರಂ ಹಬ್ಬ : ಬ್ಯಾಂಜೋ ತಂಡಗಳ ಸ್ಪರ್ಧೆ :..

ಶಹಾಬಾದ : - ಮೋಹರಂ ಹಬ್ಬದ ಪ್ರಯುಕ್ತ ನಗರದ ರೈಲ್ವೆ ಗೇಟ್ ಬಡವಾಣೆಯಲ್ಲಿ ತಾಲ್ಲೂಕಿನ ಬ್ಯಾಂಜೋ ತಂಡಗಳ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬ್ಯಾಂಜೋ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ಬೆಳ್ಳಿಯ ಕಡ ವನ್ನು ನಗರ ಸಭೆಯ ಮಾಜಿ ಸದಸ್ಯ ಕಾಶೀನಾಥ ಜೋಗಿ ಯವರು ವಿತರಿಸಿದರು.

ವಿಜೇತರಾಗಿ ಪ್ರಥಮ ಬಹುಮಾನ ಪಡೆದ ಕದ್ದರಗಿ ತಂಡ ೫ ತೊಲಿ ಬೆಳ್ಳಿ ಖಡ ಪಡೆದುಕೊಂಡರು, ದ್ವೀತಿಯ ಸ್ಥಾನ ಪಡೆದ ಶಹಾಬಾದ ತಂಡ ೨.೫ ತೊಲಿ ಬೆಳ್ಳಿಯ ಖಡ ಮತ್ತು ತೃತಿಯ ಸ್ಥಾನ ರಾಮಘಡ್ ದ ತಂಡ ತೃತಿಯ ಸ್ಥಾನಕ್ಕೆ ತೃಪ್ತಿಪಟ್ಟು ೨ ತೊಲಿ ಬೆಳ್ಳಿಯ ಖಡ ವನ್ನು ಪಡೆದು ಖುಷಿ ಪಟ್ಟರು.

ಬ್ಯಾಜೋ ಸ್ಪರ್ಧೆಯನ್ನು ನೋಡಲು ತಾಲ್ಲೂಕಿನ ವಿವಿಧ ಗ್ರಾಮದ ಮತ್ತು ನಗರದ ಸಾರ್ವಜನಿಕರು ಆಗಮಿಸಿ ಸಂಗೀತದ ಕೇಳಿ, ಸ್ಪರ್ಧೆ ನೋಡಿ ಆನಂದಿಸಿದರು.

ಶಹಾಬಾದ್ ಸುದ್ದಿ :- ನಾಗರಾಜ್ ದಂಡಾವತಿ