ಹೈ.ಕ.ಶಿ. ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಪಿಯು ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ, ಫ್ರೆಶರ್ಸ್ ಡೇ ಕಾರ್ಯಕ್ರಮ ಹಮ್ಮಿಕೆ

ಹೈ.ಕ.ಶಿ. ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಪಿಯು ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ, ಫ್ರೆಶರ್ಸ್ ಡೇ ಕಾರ್ಯಕ್ರಮ ಹಮ್ಮಿಕೆ

ಹೈ.ಕ.ಶಿ. ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಪಿಯು ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ, ಫ್ರೆಶರ್ಸ್ ಡೇ ಕಾರ್ಯಕ್ರಮ ಹಮ್ಮಿಕೆ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಸಾಧಕ ವಿದ್ಯಾರ್ಥಿನಿಯರಿಗೆ ಸನ್ಮಾನ ಹಾಗೂ ಹೊಸಬರಿಗಾಗಿ ಫ್ರೆಶರ್ಸ್ ಡೇ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಅನಿಲಕುಮಾರ ಮರಗೋಳ ಅವರು ಸರಸ್ವತಿ ಪೂಜೆ ನೆರವೇರಿಸಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರಶಂಸಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಶ್ರದ್ಧಾ ಶಕ್ತಿ, ಫಯಜಾ ಖಾನಂ, ಸಾನಿಯಾ ಖಾತುನ್, ಭಾಗ್ಯಶ್ರೀ ಮೊದಲಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ನಾಗೇಂದ್ರ ಮಸೂತಿ, "ಇಲ್ಲಿನ ಶಿಕ್ಷಣ ವ್ಯಕ್ತಿತ್ವ, ಮೌಲ್ಯ ಹಾಗೂ ಕನಸುಗಳ ಬೆಳೆಸುವ ಪ್ಲಾಟ್‌ಫಾರ್ಮ್ ಆಗಿದೆ" ಎಂದು ಅಭಿಪ್ರಾಯಪಟ್ಟರು. ಶಿಕ್ಷಣದ ಶ್ರೇಷ್ಠತೆಯ ಮಹತ್ವವನ್ನು ಬಿಂಬಿಸಿದರು.

ಸಭಾಧ್ಯಕ್ಷರಾಗಿ ಭಾಗವಹಿಸಿದ್ದ ಶ್ರೀ ನಾಗಣ್ಣ ಘಂಟಿ ಅವರು, 1970ರಲ್ಲಿ ಮಹಿಳಾ ಶಿಕ್ಷಣ ಪ್ರೋತ್ಸಾಹದ ಉದ್ದೇಶದಿಂದ ಸ್ಥಾಪಿತಗೊಂಡ ಈ ಮಹಾವಿದ್ಯಾಲಯ ನಗರದಲ್ಲಿ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಮೋಹನರಾಜ ಪತ್ತಾರ ಅವರು, ವಿದ್ಯಾರ್ಥಿನಿಯರ ಸಾಧನೆಯ ಹಿಂದೆ ಶ್ರದ್ಧೆ, ಶಿಸ್ತು, ಸಮಯಪಾಲನೆ ಮತ್ತು ಶಿಕ್ಷಕರ ಮಾರ್ಗದರ್ಶನ ಇರುವುದಾಗಿ ಅವರು ಪ್ರಸ್ತಾಪಿಸಿದರು. “ಜ್ಞಾನ, ಶಿಸ್ತು ಮತ್ತು ಶ್ರಮ — ಇವು ಜೀವನದ ಮಾರ್ಗದೀಪವಾಗಲಿ” ಎಂಬ ಸಂದೇಶವನ್ನು ನೀಡಿದರು.

ವಿದ್ಯಾರ್ಥಿ ಸಂಘದ ಸಲಹೆಗಾರರಾಗಿ ನೇಮಕಗೊಂಡ ಉಪನ್ಯಾಸಕಿ ಶ್ರೀಮತಿ ಶೈಲಜಾ ನಾಕೇದಾರ ಅವರು ವರದಿ ನೀಡಿದರು. ಉಪನ್ಯಾಸಕರಾದ ಡಾ. ಕಾಶೀಬಾಯಿ ಬೋಗಶೆಟ್ಟಿ, ಡಾ. ನಯನತಾರ ಆಸ್ಪಲ್ಲಿ, ರಷ್ಮೀ ಸ್ವಾಮಿ, ಜ್ಯೋತಿ ಪಾಟೀಲ, ಅನಿತಾ ಪಾಟೀಲ, ಮಾನಸಾ, ಸಂತೋಷಿ ಕೆ, ಪ್ರಿಯಾ ನಿಗ್ಗುಡಗಿ, ಬಸವರಾಜ ಗೋಣಿ, ಗುಲಿಂಗಯ್ಯಾ ಸ್ವಾಮಿ, ಕಿರಣಕುಮಾರ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಜಗದೇವಿ ಚಿಕ್ಕೆಗೌಡ ಅತಿಥಿಗಳನ್ನು ಪರಿಚಯಿಸಿದರು, ಶ್ರೀಮತಿ ಮಹಾನಂದಾ ಗೊಬ್ಬುರ ವಂದಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಕನ್ಯಾಕುಮಾರಿ ನಿರೂಪಿಸಿದರು.

– ಕಾಲೇಜಿನ ಪತ್ರಿಕಾ ಪ್ರಕಟಣಾ ವಿಭಾಗ