ನಾಯಕ ಧೋನಿ ನಿನ್ಹಾಂಗ

ನಾಯಕ ಧೋನಿ ನಿನ್ಹಾಂಗ

ನಾಯಕ ಧೋನಿ ನಿನ್ಹಾಂಗ

ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ಸರದಾರ

ಟಿ- 20 ವಿಶ್ವ ಕಪ್ ಟ್ರೋಫಿ ಗೆದ್ದ ಬಹಾದ್ದೂರ

IPL ಟ್ರೋಫಿ ಗೆದ್ದ ರಣಧೀರ

ಇದ್ದರ ಇರಬೇಕು ನಾಯಕ ಧೋನಿ ನಿನ್ಹಾಂಗ

ತನ್ನ ತಂಡದ ಬಾಲರ್ ರನ್ ಹೆಚ್ಚು ಕೊಟ್ರ ಕೈಸನ್ನೆ ಮಾಡಿ Cool mind ದಿಂದ ಹೇಳುವ Captain cool ಇದ್ದರ ಇರಬೇಕು ನಾಯಕ ಧೋನಿ ನಿನ್ಹಾಂಗ

ಯಾವುದೇ ಒತ್ತಡವಿದ್ದರೂ ಎದೆಗುಂದದೆ ತಂಡದ ಆಟಗಾರರಿಗೆ ಪ್ರೋತ್ಸಾಹಿಸಿ ಧೈರ್ಯದಿಂದ ಸವಾಲು ಎದುರಿಸಿ ಯಶಸ್ವಿಯಾಗುವ ನಾಯಕ ಇದ್ದರ ಇರಬೇಕು ಧೋನಿ ನಿನ್ಹಾಂಗ

ಕೂದಲು ಹಾರಿಸಿ ಹ್ಯಾಂಡ್ ಗ್ಲೌಸ್ ಬಿಚ್ಚಿ ಕಟ್ಟಿದರ ತಿಳಿಬೇಕು ಬಿದ್ದಂಗ ಸಿಕ್ಸರ ನಾಯಕ ಇದ್ದರ ಇರಬೇಕು ಧೋನಿ ನಿನ್ಹಾಂಗ 

ಬ್ಯಾಟ್ ಹಿಡಿದು ಗ್ರೌಂಡಿಗ ಬಂದರ ಧೋನಿ ಧೋನಿ ಮಾಹಿ ಮಾಹಿ ಎಂಬ ಪ್ರೇಕ್ಷಕರ ಗಘರ್ಜನೆ ನಡುಗಿಸತೈತಿ ಗ್ರೌಂಡ ಇದ್ದರ ಇರಬೇಕು ನಾಯಕ ಧೋನಿ ನಿನ್ಹಾಂಗ

ಬ್ಯಾಟ್ ಹಿಡಿದು ಕ್ರಿಸ್ನಲ್ಲಿ ನಿಂತರ ಎದುರಾಳಿ ಬಾಲರ್ ಗಳ ಎದೆ ಅಂತದ ಝುಲ್ ಝಲ್ ಇದ್ದರ ಇರಬೇಕು ನಾಯಕ ಧೋನಿ ನಿನ್ಹಾಂಗ

ಹೆಲಿಕ್ಯಾಪ್ಟರ್‌ ಶ್ಯಾಟ್ ಹೊಡೆಯುವ ಸರದಾರ 

ದೊಡ್ಡ ದೊಡ್ಡ ಸಿಕ್ಸರ್ ಬಾರಿಸಿ ಆಗಿರಿ ಮ್ಯಾಚ್ ಫಿನಿಶರ್ ನಾಯಕ ಇದ್ದರ ಇರಬೇಕು ನಾಯಕ ಧೋನಿ ನಿನ್ಹಾಂಗ 

42 ರ ವಯಸ್ಸಿನಲ್ಲೂ ಬಾರಿಸ್ತಿರಿ ಹ್ಯಾಟ್ರಿಕ್ ಸಿಕ್ಸರ್ ಪ್ರೇಕ್ಷಕರು ನೋಡಿ ಹಾಕ್ಯಾರ ಜೈಕಾರ ಇದ್ದರ ಇರಬೇಕು ನಾಯಕ ಧೋನಿ ನಿನ್ಹಾಂಗ

ನೀವು Review ತೆಗೆದುಕೊಂಡ್ರೆ ಔಟ್ ಆದ್ಹಂಗ್ ಅದೆಂತಹ ನಿಮ್ಮ confidence ಇದ್ದರ ಇರಬೇಕು ನಾಯಕ ಧೋನಿ ನಿನ್ಹಾಂಗ

ಈ ನನ್ನ ಪುಟ್ಟ ಕವನ ಧೋನಿಯ ಅಭಿಮಾನಿ ಬಳಗಕ್ಕೆ ಅರ್ಪಣೆ  

ಮಹೇಂದ್ರ ಸಿಂಗ್ ಧೋನಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ಡಾ.ಅವಿನಾಶ ದೇವನೂರ