ಸಗರ ವಿ.ಎಸ್.ಎಸ್.ಎನ್,ಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಸಗರ ವಿ.ಎಸ್.ಎಸ್.ಎನ್,ಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಶಹಪುರ : ತಾಲೂಕಿನ ಸಗರ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ವಿರುಪಾಪುರ ಉಪಾಧ್ಯಕ್ಷರಾಗಿ ಗಿರಿಯಮ್ಮ ಜೋಳದಡಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ,
ಚುನಾವಣಾ ಅಧಿಕಾರಿ ಪ್ರಶಾಂತ್, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿ ಜವಾಬ್ದಾರಿ ಹಾಗೂ ಮುತುವರ್ಜಿ ವಹಿಸಿ ನಮ್ಮ ವಿ.ಎಸ್.ಎಸ್.ಎನ್,ಗೆ ಒಳ್ಳೆ ರೀತಿಯಿಂದ ಹೆಸರು ತರುವಂತೆ ಕೆಲಸ ಮಾಡಬೇಕೆಂದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಾಗನಗೌಡ ಸುಭೇದಾರ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದಣ್ಣ ಸೇರಿ, ಹಿರಿಯರಾದ ನಿಂಗಣ್ಣ ಮುದ್ದಾ, ಸಾಯಬಣ್ಣ ಸಿದ್ರಾ,ತಿಪ್ಪಣ್ಣ ಪ್ಯಾಟಿ, ಯುವ ಮುಖಂಡರಾದ ಸಂತೋಷಗೌಡ ಸುಬೇದಾರ,ನಿಂಗನಗೌಡ ಮಾಲಿ ಪಾಟೀಲ್,ಮಾನಪ್ಪ ವಠಾರ, ಮಹಾದೇವಪ್ಪ ಗುಡಳ್ಳಿ ಸೇರಿದಂತೆ ಇತರರು ಹಾಜರಿದ್ದರು.