ಸಾಧನೆ ಮಾಡುವ ಛಲ ಹೊಂದಿ: ಡಾ.ಜಯದೇವಿ
ಸಾಧನೆ ಮಾಡುವ ಛಲ ಹೊಂದಿ: ಡಾ.ಜಯದೇವಿ
ವಿದ್ಯಾರ್ಥಿಗಳು ನೈತಿಕ ಶಿಕ್ಷಣ ಪಡೆಯಲು ಮುಂದಾಗಿ ಚಿಂತಕರು, ಮಹಾತ್ಮರು,ಸಂತರ ಆದರ್ಶಗಳ ಗುರಿಯ ನ್ನು ಇಟ್ಟುಕೊಂಡು ನಿಮ್ಮ ಸಾಧನೆಯನ್ನು ಹಿಂತಿರುಗಿ
ನೋಡುವ ಹಾಗೆ ಬದುಕಬೇಕು ಸಾಧನೆ ಮಾಡುವ ಛಲ ಹೊಂದಿದಾಗ ವಿದ್ಯಾರ್ಥಿಗಳು ಸಾಧನೆ ಮಾಡಿಕೊ ಳ್ಳಲು ಅವಕಾಶ ಇದೆ ಅದನ್ನು ಸಾಧಿಸಲು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಕರೆ ನೀಡಿದರು.
ಪಟ್ಟಣದ ಶ್ರೀ ಶರಣಪ್ಪ ಮುರಿಗೆಪ್ಪ ಖೇಣೇದ ಸರ ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪-೨೫ನೆಯ ಸಾಲಿನ ಸಾಂಸ್ಕೃತಿಕ, ಎನ್.ಎಸ್.ಎಸ್.,ಕ್ರೀಡಾ, ಐಕ್ಯೂಸಿ ಘಟಕಗಳ ಉದ್ಘಾಟನೆ ಮತ್ತು ಬಿ.ಎ.ಮತ್ತು ಬಿ.ಕಾಂ.ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು
ಬುದ್ದ,ಬಸವ,ಸಾವಿತ್ರಿ ಬಾಯಿ ಫುಲೆ,ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಲು ಕರೆ ನೀಡಿದರು.
ಇವತ್ತು ಉನ್ನತ ಶಿಕ್ಷಣದ ಗುಣ ಮಟ್ಟ ಹಾಗೂ ಮೂಲಭೂತ ಸೌಲಭ್ಯ ನೀಡಲಾಗುವುದು, ವಿದ್ಯಾರ್ಥಿಗಳು ಮಾನವಿಯ ಮೌಲ್ಯಗಳನ್ನು ಅಳವಡಿ ಸಿಕೊಳ್ಳುವುದರ ಮೂಲಕ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರಿ ಎಂದು ಶಾಸಕಿ ಶ್ರೀಮತಿ ಕರೆಮ್ಮ ಜಿ.ನಾಯಕ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸತ್ಕರಿಸಿದರು
ಮಾಜಿ ಸೈನಿಕರು ,ಸೈನಿಕ ಅಕಾಡೆಮಿಯ ಪಂಪಣ್ಣ ಅಕ್ಕರಕಿ,ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬು ಅಲಿ ಕರಿಗುಡ್ಡ,ಅತಿಥಿ ಉಪನ್ಯಾಸಕರ ಸಂಘದ ತಾಲೂಕಾಧ್ಯಕ್ಷ ಚಂದ್ರಶೇಖರ ಅಕ್ಕರಕಿ, ರೇಣುಕಾ ಸ್ವಾಮಿ ಇತರರು ಇದ್ದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸುಭಾಶ್ಚಂದ್ರ ವಹಿಸಿ ಮಾತನಾಡಿದರು
ಡಾ.ಅನಂತ ಬಿ.ಜಿ.ಹಾಗೂ ಉಪನ್ಯಾಸಕ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.ಮುನಿಯಪ್ಪ ನಾಗೋಲಿ ಸ್ಬಾಗತಿಸಿದರು, ಹನು ಮಂತ ಜಗಲಿ ಪ್ರಾಸ್ತಾವಿಕ ನುಡಿ ಆಡಿದರು.ದೀಪಾ ನಿರೂಪಿಸಿದರು.ಡಾ.ಮಲ್ಲಯ್ಯ ವಂದಿಸಿದರು . ಶಾಸಕ ರಿಗೆ ಪ್ರಾಂಶುಪಾಲರು ಕಾಲೇಜಿಗೆ ಮೂಲಭೂತ ಸೌಕರ್ಯ ನೀಡಲು ಮನವಿ ಪತ್ರ ಸಲ್ಲಿಸಿದರು.