ಶ್ರೀ ಗುರು ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ- ಕಾರ್ಯಕ್ರಮ

ಶ್ರೀ ಗುರು ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ- ಕಾರ್ಯಕ್ರಮ
ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಉದ್ಘಾಟನೆ
ಕಲಬುರಗಿ: ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ದಿನಾಂಕ 05-07-2025ರಂದು ಮುಂಜಾನೆ 11 ಗಂಟೆಗೆ ಪ್ರತಿಭಾ ಪುರಸ್ಕಾರ-2025 ಸಮಾರಂಭವು ಭಾವಭರಿತ ಹಾಗೂ ಸಡಗರದ ವಾತಾವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಲಬುರಗಿ ಜಿಲ್ಲಾ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ. ಅವರು ನೆರವೇರಿಸಿದರು. ಅವರು ಮಾತೋಶ್ರೀ ಕಲ್ಯಾಣಿ ನಾಯ್ಕ ಮತ್ತು ಶ್ರೀ ಎ.ವೈ. ನಾಯ್ಕ ಸರ್‌ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳನ್ನು ಶಾಲು ಹೊದಿಸಿ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
**ಪುರಸ್ಕೃತ ಪ್ರತಿಭೆಗಳ ವಿವರ ಹೀಗಿವೆ:**
1. **ಹಮೀದಾ ಉಮೈಝಾ ತಹಸೀನ್** – ದ್ವಿತೀಯ ಪಿ.ಯು.ಸಿ.ಯಲ್ಲಿ 588/600 ಅಂಕಗಳೊಂದಿಗೆ ಜಿಲ್ಲೆಯಲ್ಲಿ ದ್ವಿತೀಯ ರ‍್ಯಾಂಕ್, NEET-514, KCET-1741, Agri-611, JEE-96.5%. ಇವರಿಗೆ ₹1 ಲಕ್ಷ ನಗದು ಪುರಸ್ಕಾರ ನೀಡಿ ಪಾಲಕರೊಂದಿಗೆ ಸನ್ಮಾನಿಸಲಾಯಿತು.
2. **ನಜೀಬುರ ರೆಹಮಾನ್** – KCET-1740, Agri-736, JEE-97.5% ಶೇಕಡಾ, PU ನಲ್ಲಿ ಉತ್ತಮ ಅಂಕಗಳ ಸಾಧನೆ. ಇವರಿಗೆ 5 ಗ್ರಾಂ ಚಿನ್ನದ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
3. **ಮಿಸಲೆರುಬಾ ಇಫಾತ** – NEET-2025 ರಲ್ಲಿ 551 ಅಂಕ ಗಳಿಸಿ ಉತ್ತಮ ಸಾಧನೆ. ಇವರಿಗೆ ₹25,000 ನಗದು ಪುರಸ್ಕಾರ ನೀಡಲಾಯಿತು.
4. **ಹರ್ಷಿತಾ ರಾಜೇಶ್ ಅಲ್ಲಿಪುರ** – ದ್ವಿತೀಯ ಪಿ.ಯು.ಸಿ.ಯಲ್ಲಿ 586/600 ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ. ₹20,000 ನಗದು ಪುರಸ್ಕಾರ ನೀಡಿ ಸನ್ಮಾನ.
5. **ಭೀಮಾಶಂಕರ** – 575/600 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ ₹15,000 ನಗದು ಪುರಸ್ಕಾರ ನೀಡಲಾಯಿತು.
6. **ಮಂಜುನಾಥ ಎಚ್.** – JEE Advanced ನಲ್ಲಿ 1418 ನೇ ಸ್ಥಾನ ಹಾಗೂ JEE Mains ನಲ್ಲಿ ಉತ್ತಮ ಸ್ಥಾನ ಪಡೆದ ವಿದ್ಯಾರ್ಥಿಗೆ ₹10,000 ನಗದು ಪುರಸ್ಕಾರ ನೀಡಲಾಯಿತು.
7. **ಅರ್ಚನಾ ಚೌಧರಿ** – ಪ್ರಥಮ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ, ₹20,000 ಪುರಸ್ಕಾರ.
8. **ರಘುವೀರ ರವಿ ಪಾಟೀಲ** – ದ್ವಿತೀಯ ಸ್ಥಾನ, ₹15,000 ನಗದು ಪುರಸ್ಕಾರ.
9. **ಚೈತ್ರಾ ಶರಣಪ್ಪ** – ತೃತೀಯ ಸ್ಥಾನ, ₹10,000 ನಗದು ಪುರಸ್ಕಾರ.
ಈ ಮೂಲಕ ಯುವ ಪ್ರತಿಭೆಗಳ ಸಾಧನೆಯನ್ನು ಗುರುತಿಸಿ ಅವರಿಗೆ ಗೌರವಿಸಿದರು