ಹೋಳಿ ಹಬ್ಬದ ಪ್ರಯುಕ್ತ 3 ದಿನಗಳ ಕಾಲ ಮಧ್ಯ ಮಾರಾಟ ನಿಷೇಧ

ಹೋಳಿ ಹಬ್ಬದ ಪ್ರಯುಕ್ತ 3 ದಿನಗಳ ಕಾಲ  ಮಧ್ಯ ಮಾರಾಟ ನಿಷೇಧ

ಹೋಳಿ ಹಬ್ಬದ ಪ್ರಯುಕ್ತ 3 ದಿನಗಳ ಕಾಲ ಮಧ್ಯ ಮಾರಾಟ ನಿಷೇಧ

 : ಆಳಂದ:ಅಬಕಾರಿ ಅಧಿಕಾರಿಗಳಿಂದ ಬಾರಗಳನ್ನು ಮುಚ್ಚುವ ಕ್ರಮಜಿಲ್ಲಾಧಿಕಾರಿಯ ನಿರ್ದೇಶನದಂತೆ ಹೋಳಿ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಮಧ್ಯ ಮಾರಾಟ ನಿಷೇಧಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಆದೇಶದ ಪ್ರಕಾರ, ಪಟ್ಟಣದ ಅಬಕಾರಿ ಅಧಿಕಾರಿಗಳು ವಿವಿಧ ಬಾರ್ ಗಳಿಗೆ ತೆರಳಿ ಅವುಗಳನ್ನು ಮುಚ್ಚುವ ಕಾರ್ಯಾಚರಣೆ ನಡೆಸಿದ್ದಾರೆ. ಸಾರ್ವಜನಿಕರ ನಿರ್ವಹಣೆ ಸುಗಮಗೊಳಿಸುವ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಈ ನಿಷೇಧಾವಧಿಯಲ್ಲೂ ಯಾವುದೇ ರೀತಿಯ ಅಕ್ರಮ ಮಧ್ಯ ಮಾರಾಟ ನಡೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಪೊಲೀಸ್ ಮತ್ತು ಅಬಕಾರಿ ಇಲಾಖೆ ತಂಡಗಳು ನಿರಂತರವಾಗಿ ಪರಿಶೀಲನೆ ನಡೆಸುತ್ತಿವೆ.

ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಈ ನಿರ್ಬಂಧವನ್ನು ಗೌರವಿಸಿ ಸಹಕರಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ವರದಿ ಡಾ .ಅವಿನಾಶ S ದೇವನೂರ ಆಳಂದ