ಮಾಹಿತಿ ಮತ್ತು ಜ್ಞಾನಕ್ಕೆ ಹೊಸ ಮುಖ: ಜ್ಞಾನಸಿರಿ: ನಮೋಶಿ
ಮಾಹಿತಿ ಮತ್ತು ಜ್ಞಾನಕ್ಕೆ ಹೊಸ ಮುಖ: ಜ್ಞಾನಸಿರಿ: ನಮೋಶಿ
ಕಲಬುರಗಿ: ಇಂದಿನ ಆಧುನಿಕ ಯುಗದಲ್ಲಿ ಮಾಹಿತಿ ಸಿಗುವುದು ಬಹಳ ಸರಳ ಆದರೆ ಮಾಹಿತಿ ಮತ್ತು ಜ್ಞಾನ ಒಂದೇ ಸೂರಿನಡಿಯಲ್ಲಿ ಸಿಗುವದು ಬಹಳ ಕಠಿಣ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ ಅವರು ನುಡಿದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ವಿಸ್ತೀರ್ಣ ಕಟ್ಟಡ ಮತ್ತು ಕಾಲೇಜಿನಿಂದ ಹೊರತಂದಿರುವ ಜ್ಞಾನಸಿರಿ ಮಾಸಿಕ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಮುಂದುವರೆದು ಜ್ಞಾನಸಿರಿ ಮಾಸಪತ್ರಿಕೆಯ ನಮಗೆ ನೂತನ ಮಾಹಿತಿ, ಸಂಶೋಧನೆ ಮತ್ತು ವಿದ್ಯಾರ್ಥಿ ಶಿಕ್ಷಕರ ಚಿಂತನೆಗಳನ್ನು ಪ್ರತಿಬಿಂಬಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಬಿ. ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಆಡಳಿತ ಮಂಡಳಿಯ ಸದಸ್ಯರಾದ ಡಾ. ಶರಣಬಸಪ್ಪ ಹರವಾಳ, ಡಾ. ಮಹಾದೇವಪ್ಪ ರಾಂಪುರೆ, ಸಾಯಿನಾಥ್ ಪಾಟೀಲ್, ಕಾಲೇಜಿನ ಸಂಯೋಜಕರಾದ ನಾಗಣ್ಣ ಘಂಟಿ, ನಿಶಾಂತ್ ಎಲಿ, ಡಾ. ಗುರುಲಿಂಗಪ್ಪ ಪಾಟೀಲ್ ಅವರು ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ಅವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಸಂಘದ ಸಲಹೆಗಾರರಾದ ಡಾ ಪರ್ವೀನ್ ರಾಜೇಸಾಬ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.