ಛಲವಾದಿ ಮಹಾಸಭಾ ಘಟಕಗಳಿಗೆ ಪದಾಧಿಕಾರಿ ಆಯ್ಕೆ

ಛಲವಾದಿ ಮಹಾಸಭಾ ಘಟಕಗಳಿಗೆ ಪದಾಧಿಕಾರಿ ಆಯ್ಕೆ
ಆಳಂದ: ರಾಜ್ಯ ಛಲವಾದಿ ಮಹಾಸಭಾ ತಾಲೂಕು ಘಟಕ ಹಾಗೂ ಗ್ರಾಮ ಘಟಕದ ಆಯ್ದ ನೂತನ ಪದಾಧಿಕಾರಿಗಳನ್ನು ತಾಲೂಕು ಅಧ್ಯಕ್ಷ ಚಂದ್ರಕಾಂತ ಜಂಗಲೆ ನೇತೃತ್ವದಲ್ಲಿ ಸೋಮವಾರ ಆಯ್ಕೆ ನಡೆಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷ ಮಹಾದೇವ ಮೋಘಾ ನಿದೇರ್ಶನದ ಮೆರೆಗೆ ಸಭೆ ಸೇರಿದ ಕಾರ್ಯಕರ್ತರು, ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಅಧ್ಯಕ್ಷ ಚಂದ್ರಕಾಂತ ಜಂಗಲೆ ಅವರು ಅಧಿಕಾರ ವಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಹಾದೇ ಮೋಘಾ, ಜಿಲ್ಲಾ ಉಪಾಧ್ಯಕ್ಷ ಸಂಪತಕುಮಾರ ವಳಕೇರಿ, ಚಂದ್ರಕಾಂತ ವಾಲಿ, ಕಲಬುರಗಿ ನಗರಾಧ್ಯಕ್ಷ ಗೌತಮ ಬುರ್ಲೆ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿ, ಮಹಾಸಭಾ ಮೂಲಕ ಜನಪರ ಹೋರಾಟ ನಡೆಸಲು ಮುಂದಾಗಬೇಕು ಎಂದು ಅವರು ಹೇಳಿದರು.
ಪದಾಧಿಕಾರಿಗಳಿಗೆ ಗೌರವ:
ತಾಲೂಕು ಘಟಕಕ್ಕೆ ಪ್ರವೀಣ ಮೊದಲೆ (ಉಪಾಧ್ಯಕ್ಷ), ಅಜಯ ನಡಗೇರಿ (ಖಜಾಂಚಿ), ಮಹೇಶ ಮುಕನೂರ (ಸ, ಕಾರ್ಯದರ್ಶಿ), ಆಳಂದ ಘಟಕ್ಕೆಕ್ಕೆ ಭರತ ಸಜ್ಜನ್ (ವಿದ್ಯಾರ್ಥಿ ಘಟಕ ಅಧ್ಯಕ್ಷ), ಶಶಿಕುಮಾರ ನಡಗೇರಿ (ಉಪಾಧ್ಯಕ್ಷ), ಸುಧಾಕರ ಮೊದಲೆ (ಸ.ಕಾರ್ಯದರ್ಶಿ), ಮಿಲಿಂದ ಮೋಘಾ(ಸಂಘಟನಾ ಕಾರ್ಯದರ್ಶಿ) ದತ್ತಾ ಮೇಲಿನಕೇರಿ (ಖಜಾಂಚಿ), ಮಲ್ಲಿಕಾರ್ಜುನ ಶ್ರೀಂಗೇರಿ (ನಗರ ಅಧ್ಯಕ್ಷ) ಆಯ್ಕೆಮಾಡಲಾಗಿದೆ.
ಅಲ್ಲದೆ, ಮಾದನಹಿಪ್ಪರಗಾ ಗ್ರಮ ಘಟಕಕ್ಕೆ ಅಂಬರೇಶ ನಾಗೂರೆ (ಅಧ್ಯಕ್ಷ), ನಾಗಪ್ಪ ದಗಾಶಿರೂರ (ಉಪಾಧ್ಯಕ್ಷ), ಗೌತಮ ಸೋನ ಕಾಂಬಳೆ (ಪ್ರ. ಕಾರ್ಯದರ್ಶಿ), ಪ್ರದೀಪ ಅನಿಗೊಳ ( ಸಹ ಕಾರ್ಯದರ್ಶಿ), ಕಡಗಂಚಿ ಗ್ರಾಮ ಘಟಕಕ್ಕೆ ಪಂಡಿತ ದೊಡ್ಡಮನಿ(ಅಧ್ಯಕ್ಷ), ಕಿಣ್ಣಿಸುಲ್ತಾನ ಗ್ರಾಮ ಘಟಕದ ಗೌತಮ (ಅಧ್ಯಕ್ಷ), ರತಿಕಾಂತ (ಉಪಾಧ್ಯಕ್ಷ)ರನ್ನಾಗಿ ಆಯ್ಮೆ ಮಾಡಲಾಗಿದೆ ಎಂದು ಮಹಾಸಭಾ ತಾಲೂಕು ಅಧ್ಯಕ್ಷ ಜಂಗಲೆ ತಿಳಿಸಿದ್ದಾರೆ.