ಒಬ್ಬ ಶಿಕ್ಷಕ ನಿರಂತರ ವಿದ್ಯಾರ್ಥಿ ಆಗಿರಬೇಕು ಬಸವರಾಜ ಐನೋಳಿ ಅಭಿಮತ

ಒಬ್ಬ ಶಿಕ್ಷಕ ನಿರಂತರ ವಿದ್ಯಾರ್ಥಿ ಆಗಿರಬೇಕು ಬಸವರಾಜ ಐನೋಳಿ ಅಭಿಮತ

ಒಬ್ಬ ಶಿಕ್ಷಕ ನಿರಂತರ ವಿದ್ಯಾರ್ಥಿ ಆಗಿರಬೇಕು ಬಸವರಾಜ ಐನೋಳಿ ಅಭಿಮತ 

ಶಿಕ್ಷಕರ ದಿನಾಚರಣೆ

 ಚಿಂಚೋಳಿ - ಶಿಕ್ಷಕರಾದವರು ನಿರಂತರ ಅಭ್ಯಾಸ ಮಾಡುತ್ತಿರಬೇಕು. ಜೊತೆಗೆ ಪ್ರಚಲಿತ ವಿದ್ಯಮಾನಗಳಿಗೆ ಕಣ್ಣಾಗಿರಬೇಕು. ಕಿವಿಯಾಗಿರಬೇಕು. ಶಿಕ್ಷಕರು ನೌಕರಿ ಸಿಕ್ಕ ನಂತರ, ಓದುವುದು ಬರೆಯುವುದು ಅಧ್ಯಯನ ಮಾಡುವುದನ್ನು ಬಿಡಬಾರದು. ಒಬ್ಬ ಶಿಕ್ಷಕ ನಿರಂತರ ವಿದ್ಯಾರ್ಥಿ ಆಗಿರಬೇಕು. ಅಧ್ಯಯನದಿಂದಲೇ ಆತನು ಹೆಚ್ಚು ಹೆಚ್ಚು ಜ್ಞಾನ ಸಂಪಾದನೆ ಮಾಡುತ್ತಾನೆ. ಆತನ ಜ್ಞಾನ ಸಂಪಾದನೆ ಮಕ್ಕಳ ಜ್ಞಾನ ದಾಸೋಹಕ್ಕೆ ಪೂರಕವಾಗಿರುತ್ತದೆ. ಅದಕ್ಕಾಗಿ ಶಿಕ್ಷಕರಾದವರು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ವೈಚಾರಿಕ ಕೃತಿಗಳನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕು; ಎಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಭಕ್ತಂಪಳ್ಳಿಯ ಪ್ರಭಾರಿಯ ಮುಖ್ಯ ಗುರು ಬಸವರಾಜ ಐನೋಳಿ ಹೇಳಿದರು. ಗುರುವಾರ ಅವರು ಶಾಲೆಯಲ್ಲಿ ಆಯೋಜಿಸಿದ 63ನೆಯ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ , ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ಸಾಧನೆಯನ್ನು ಮಕ್ಕಳಿಗೆ ಪರಿಚಯ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಹಾಸ್ಯ ಕಲಾವಿದ ರಾಚಯ್ಯ ಸ್ವಾಮಿ ಖಾನಾಪುರ್ ಅವರು ತಮ್ಮ ಹಾಸ್ಯದ ಮಾತುಗಳೊಂದಿಗೆ, ಅಭಿನಯದೊಂದಿಗೆ, ಮಕ್ಕಳನ್ನು ನಗೆಗಡಲಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷರು ಶ್ರೀಮತಿ ನಾಗಮ್ಮ ಶರಣರೆಡ್ಡಿ ಶೇರಿಕಾರ ಅವರು ಮುಖ್ಯ ಅತಿಥಿಗಳಾಗಿದ್ದರು. ಅತಿಥಿ ಶಿಕ್ಷಕ ಆಶಿಫ್ ಪಟೇಲ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಾಲಕರು ಪೋಷಕರು ಭಾಗವಹಿಸಿದ್ದರು.