ರೈತರು ಬೆಳೆವಿಮ ಮಾಡಿಸಿಕೊಳ್ಳಿ ಮಲ್ಲಿನಾಥ್ ನಾಗನಹಳ್ಳಿ ಮನವಿ

ರೈತರು ಬೆಳೆವಿಮ ಮಾಡಿಸಿಕೊಳ್ಳಿ ಮಲ್ಲಿನಾಥ್ ನಾಗನಹಳ್ಳಿ ಮನವಿ

ರೈತರು ಬೆಳೆವಿಮ ಮಾಡಿಸಿಕೊಳ್ಳಿ ಮಲ್ಲಿನಾಥ್ ನಾಗನಹಳ್ಳಿ ಮನವಿ

ಕಲಬುರಗಿ: ರೈತ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2025-26ನೇ ಸಾಲಿನ ಖರೀಫ್ ಬೆಳೆಗಳಿಗೆ ರೈತರು ಬಾಂಧವರು ಬೆಳೆವಿಮೆ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕೂಟನೂರ ಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಮಲ್ಲಿನಾಥ್ ನಾಗನಹಳ್ಳಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿ ವರ್ಷದಂತೆ ಈ ವರ್ಷವೂ ರೈತರು ಬೆಳೆವಿಮೆ ಮಾಡಿಸಬೇಕು. ಬೆಳೆ ವಿಮೆ ನೋಂದಣಿಗೆ ಜುಲೈ 31 ಅಂತಿಮ ದಿನಾಂಕವಾಗಿದ್ದು, ರೈತರು ತಮ್ಮ ಹತ್ತಿರದ ಪೋಸ್ಟ್ ಆಫೀಸ್, ಬ್ಯಾಂಕ್, ಗ್ರಾಮ-ಒನ್ ಅಥವಾ ಸಿ.ಎಸ್.ಸಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬಹುದಾಗಿದೆ ಎಂದಿದ್ದಾರೆ.

ಬೆಳೆವಿಮೆಯಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿ ಪ್ರಕೃತಿ ವಿಕೋಪಗಳಿಂದ ತಮ್ಮ ಬೆಳೆ ನಷ್ಟವಾಗಿ, ಆರ್ಥಿಕ ಸಂಕಷ್ಟ ಅನುಭವಿಸುವುದನ್ನು ತಪ್ಪಿಸಿಕೊಳ್ಳಬಹುದು. ಹೀಗಾಗಿ ಎಲ್ಲಾ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಿ ಎಂದು ನಾಗನಹಳ್ಳಿ ಹೇಳಿದ್ದಾರೆ.