ಪಸ್ತಪುರಕ್ಕೆ ನೂತನ ಬಸ್ : ಚಾಲಕ ನಿರ್ವಾಹಕರಿಗೆ ಸನ್ಮಾನ
ಪಸ್ತಪುರಕ್ಕೆ ನೂತನ ಬಸ್ : ಚಾಲಕ ನಿರ್ವಾಹಕರಿಗೆ ಸನ್ಮಾನ
ಕಾಳಗಿ: ತಾಲ್ಲೂಕಿನ ಪಸ್ತಪುರ ಗ್ರಾಮಕ್ಕೆ ನೂತನ ಬಸ್ ಸೇವೆ ಆರಂಭವಾಗಿದ್ದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಪಸ್ತಪುರ ಗ್ರಾಮಕ್ಕೆ 8ಗಂಟೆಗೆ ಬರುವ ಬಸ್ ಗ್ರಾಮದಲ್ಲಿ ವಸತಿ ಮಾಡಿ ಮರುದಿನ ಬೆಳಿಗ್ಗೆ 6 ಗಂಟೆಗೆ ಗ್ರಾಮದಿಂದ ತೆರಳಿ ದೋಟಿಕೊಳ ಮಾರ್ಗವಾಗಿ ಮನ್ನಾಎಖ್ಖೆಳ್ಳಿ ತಲುಪುತ್ತದೆ. ಇದರಿಂದ ಗ್ರಾಮದಿಮನದ ಚಿಮ್ಮನಚೋಡ, ಮನ್ನಾಎಖ್ಖೆಳ್ಳಿ, ಬೀದರ, ಜಹೀರಾಬಾದ ತೆರಳುವ ಜನರಿಗೆ ಅನುಕೂಲವಾಗಲಿದೆ ಎಂದು ಗ್ರಾಮದ ವಿಶ್ವನಾಥ ದೇಸಾಯಿ ತಿಳಿಸಿದರು. ಗ್ರಾಮಕ್ಕೆ ಬಸ್ಸಿನೊಂದಿಗೆ ಬಂದ ಚಾಲಕ ಮತ್ತು ನಿರ್ವಾಹಕರಿಗೆ ಸನ್ಮಾನಿಸಿ ಸಮನತಸ ವ್ಯಕ್ತಪಡಿಸಿದರು. ಶಿವಶರಣಯ್ಯ ಮಠಪತಿ ಪೂಜೆ ಸಲ್ಲಿಸಿದರು. ಮುಖಂಡರಾದ ಮಾಣಿಕರಾವ್ ಪಾಟೀಲ, ಸಿದ್ದಪ್ಪ ಕಮಲಾಪುರ, ಅಜೀಜ ಮುತ್ತಂಗಿ,ಸುಭಾಷ ಹೂವಿನಭಾವಿ, ನಾಗೇಶ ಪಂಚಾಳ, ವೀರೇಶ ಭಾಲಿ, ಗಣಪತಿ ಹರಕಂಚಿ, ನಾಗಪ್ಪ ಮಂದಕನಳ್ಳಿ ಸೇರಿದಂತೆ ಹಲವರು ಇದ್ದರು.