ಸರಕಾರಿ ಅಧಿಸೂಚನೆಯ ಆದೇಶ ಉಲ್ಲಂಘಹಿಸಿ, ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಅಗೌರವ ತೋರಿದ ಚಿಂಚೋಳಿ ತಾಲೂಕ ಆಡಳಿತದ ಅಧಿಕಾರಿಗಳು

ಸರಕಾರಿ ಅಧಿಸೂಚನೆಯ ಆದೇಶ ಉಲ್ಲಂಘಹಿಸಿ, ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಅಗೌರವ ತೋರಿದ ಚಿಂಚೋಳಿ ತಾಲೂಕ ಆಡಳಿತದ ಅಧಿಕಾರಿಗಳು 

ಚಿಂಚೋಳಿ : 

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ (ಮನರೇಗಾ), ಮಾಹಿತಿ ಹಕ್ಕು ಕಾಯ್ದೆ, ಯು ಐ ಡಿ ಆಧಾರ ಗುರುತಿನ ಕಾರ್ಡ್, ಭ್ರಷ್ಟಚಾರ ತಡೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಜಾರಿಗೆ ತಂದು ದೇಶಕ್ಕೆ ಪಾರದರ್ಶಕ ಜನಸೇವೆ ಆಡಳಿತ ನೀಡಿದ ಭಾರತದ ಮಾಜಿ ಪ್ರಧಾನಿ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಡಿ. 26 ರ ರಾತ್ರಿ 10.15 ನಿಮಿಷಕ್ಕೆ ನಿಧನ ಹೊಂದಿದರು. ಮಹಾಪುರುಷರ ಅಗಲಿಕೆಗೆ ಗೌರವರ್ಥವಾಗಿ ರಾಜ್ಯ ಸರಕಾರ ತೀವ್ರ ಸಂತಾಪ ಸೂಚಿಸಿ, ಡಿ. 27 ರಂದು ಒಂದು ದಿನದ ರಜೆ ಘೋಷಿಸಿ, 7 ದಿನಗಳವರೆಗೆ ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳ ಹಾಗೂ ಅರೆ ಸರಕಾರಿ, ಖಾಸಗಿ ಶಾಲೆ ಕಾಲೇಜುಗಳ, ಅಧೀನದ ಸಂಘ ಸಂಸ್ಥೆಯ ಕಚೇರಿಗಳ ಮೇಲೆ ರಾಷ್ಟ್ರ ಧ್ವಜ ಅರ್ಧ ಭಾಗಕ್ಕೆ ಇಳಿಸಿ ಶೋಕಾಚಾರಣೆ ಮಾಡುವಂತೆ ರಾಜ್ಯ ಸರಕಾರ ಆದೇಶದೊಂದಿಗೆ ಅಧಿಸೂಚನೆ ಹೊರಡಿಸಿದರು. 

ಸರಕಾರದ ಅಧಿಸೂಚನೆಯ ಆದೇಶ ಪಾಲನೆ ಮಾಡದ ಅಧಿಕಾರಿಗಳು : ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ನಿಧನದ ಡಿ. 27ರಂದು ರಜೆ ಘೋಷಿಸಿ, 7 ದಿನ ರಾಷ್ಟ್ರ ಧ್ವಜವನ್ನು ಅರ್ಧ ಭಾಗಕ್ಕೆ ಇಳಿಸಿ ಶೋಕಾಚಾರಣೆ ಮಾಡಲು ಸರಕಾರ ಡಿ 26 ರಂದು ಹೊರಡಿಸಿದ ಅಧಿಸೂಚನೆಯ ಆದೇಶ ಪಾಲನೆ ಮಾಡದೆ ತಾಲೂಕ ಆಡಳಿತ ಅಧಿಕಾರಿಗಳು ಆದೇಶ ಉಲ್ಲಂಘಿಸಿ, ದೇಶಕ್ಕೆ ಕಡ್ಡಾಯ ಶಿಕ್ಷಣದ ಹಕ್ಕು, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ (ಮನರೇಗಾ) ಮಾಹಿತಿ ಹಕ್ಕು ಕಾಯ್ದೆ, ಯು ಐ ಡಿ ಆಧಾರ ಕಾರ್ಡ್, ಭ್ರಷ್ಟಚಾರ ತಡೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಜಾರಿಗೆ ತಂದು ದೇಶದಲ್ಲಿ ಪಾರದರ್ಶಕ ಆಡಳಿತ ಸೇವೆ ನೀಡಿದ ಡಾ. ಮನಮೋಹನ ಸಿಂಗ್ ಅವರಿಗೆ ಗೌರವ ಸಲ್ಲಿಸದೆ ಶಾಸಕರ ಕಾರ್ಯಾಲಯ ಸೇರಿ,ಚಿಂಚೋಳಿ ತಹಸೀಲ್ ಕಾರ್ಯಾಲಯ ಆಡಳಿತ ಸೌಧ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೀನುಗಾರಿಕೆ ಇಲಾಖೆ ಕೃಷಿ ಇಲಾಖೆ, ಅಬಕಾರಿ, ಅರಣ್ಯ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ಪಬ್ಲಿಕ್ ಶಾಲೆ, ರೈತ ಸಂಪರ್ಕ ಕೇಂದ್ರ, ಪೋಲಕಪಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿಗಳು ಅಗೌರವ ತೋರಿದ್ದರು.