ಹೆಲಿಕಾಪ್ಟರ್ ದುರಂತದಿಂದ ಪಾರಾದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ

ಹೆಲಿಕಾಪ್ಟರ್ ದುರಂತದಿಂದ  ಪಾರಾದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ

ಹೆಲಿಕಾಪ್ಟರ್ ದುರಂತದಿಂದ ಪಾರಾದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ

ಸಾತಾರಾ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೆಲಿಕಾಪ್ಟರ್ ಸತಾರಾದಲ್ಲಿ ನಿನ್ನೆ ಸಂಜೆ ೪ ಗಂಟೆಗೆ ತುರ್ತು ಭೂಸ್ಪರ್ಶ ಮಾಡಿದೆ. ಏಕನಾಥ್ ಶಿಂಧೆ ಅವರ ಹೆಲಿಕಾಪ್ಟರ್ ಸತಾರಾ ಜಿಲ್ಲೆಯ ಡೇರ್‌ನಿಂದ ಪುಣೆ ಕಡೆಗೆ ಹಾರುತ್ತಿರುವ ವೇಳೆ ಈ ಆತಂಕಕಾರಿ ಘಟನೆ ನಡೆದಿರುವ ಕುರಿತು ವರದಿಯಾಗಿದೆ.

ಪುಣೆ ಹಾಗೂ ಸತಾರಾದಲ್ಲಿ ಹವಾಮಾನವು ಸ್ಪಷ್ಟವಾಗಿತ್ತು ಆದರೆ ಹೆಲಿಕಾಪ್ಟರ್ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಇದ್ದಕ್ಕಿಂದ್ದಂತೆ ಕೆಲವು ಮೋಡಗಳು ರೂಪುಗೊಂಡಿವೆ ಈ ವೇಳೆ ಪೈಲೆಟ್‌ನಿಂದಲೂ ಯಾವುದೇ ಅಡಚಣೆ ಹಾಗೂ ತುರ್ತು ಕರೆ ಬಂದಿರಲಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ಭೂಸ್ಪರ್ಶ ಮಾಡಿದ್ದಾರೆ ಎಂದು ಸತಾರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಶೇಖ್ ತಿಳಿಸಿದ್ದಾರೆ.

  ಸಂಜೆ 4 ಗಂಟೆ ಸುಮಾರಿಗೆ 5 ನಿಮಿಷಗಳಲ್ಲಿ ಹೆಲಿಕಾಪ್ಟರ್ ವಾಪಸ್ ಬಂದು ಲ್ಯಾಂಡ್ ಆಗಿದೆ. ನಂತರ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಪುಣೆ ವಿಮಾನ ನಿಲ್ದಾಣಕ್ಕೆ ರಸ್ತೆ ಮೂಲಕ ತೆರಳಿದ್ದಾರೆ.

 ಬಳಿಕ ಪುಣೆಯ ಜಗದ್ಗುರು ಸಂತ ತುಕಾರಾಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದರು ಎನ್ನಲಾಗಿದೆ. 

ಶಿಂಧೆ ಅವರು ಸತಾರಾ ಜಿಲ್ಲೆಯ ಡೇರ್‌ ಗ್ರಾಮದಿಂದ ಪುಣೆಗೆ ಟೇಕಾಫ್ ಆಗುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮಳೆ ಸುರಿಯಲು ಪ್ರಾರಂಭವಾಯಿತು. 

ಈ ಗ್ರಾಮವು ಸಹ್ಯಾದ್ರಿ ಶ್ರೇಣಿಗಳ ಮಧ್ಯೆ ಕೊಯ್ನಾ ಅಣೆಕಟ್ಟಿನ ಹಿನ್ನೀರಿನ ದಡದಲ್ಲಿದೆ. ಘಟನೆಯಲ್ಲಿ ಯಾವುದೇ ಅನಾಹುತಗಳು ನಡೆದಿಲ್ಲವೆಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಮಂಗೇಶ್ ಚಿವಾಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.