ಕಲ್ಯಾಣ ಪುರ" ನಾಟಕ

ವಿಕ್ರಮ ವಿಸಾಜಿ ಅವರ ಹೊಸ ನಾಟಕ "ಕಲ್ಯಾಣ ಪುರ"
ಬೆಲೆ : 120 ರೂ.
ಅಂಚೆವೆಚ್ಚ 20 ರೂ.
ಒಟ್ಟು 140 ರೂ.
ಸಂಪರ್ಕಿಸಿ :- 9071294244
ಈ ನಾಟಕ ನಡೆಯುವುದು ಬಸವಣ್ಣನವರ ಮಹಾಮನೆಯಲ್ಲಿ, ಕಲ್ಯಾಣದ ಕ್ರಾಂತಿಯ ದಿನಗಳಲ್ಲಿ, ಕ್ಷಣಕ್ಷಣಕ್ಕೂ ಬಂದು ಅಪ್ಪಳಿಸುತ್ತಿರುವ ದುರಂತಮಯ ಸುದ್ದಿಗಳು ಉಂಟುಮಾಡುತ್ತಿರುವ ಸಂಕಟಗಳಲ್ಲಿ, ಮನುಷ್ಯರ ಅಂತರ್ದ್ವಂದ್ವ, ಅಸ್ಥಿರತೆ ಮತ್ತು ಅನಿಶ್ಚಿತತೆಯಲ್ಲಿ. ಇಂಥ ಹೊತ್ತಿನಲ್ಲಿ ಬಸವಣ್ಣನವರ ಮನೆ ಮತ್ತು ಮನದಲ್ಲಿ ಏನು ನಡೆಯುತ್ತಿರಬಹುದು? ಹಾಗೆಯೇ ಅಕ್ಕನಾಗಮ್ಮ, ಗಂಗಾಂಬಿಕೆ ಮತ್ತು ನೀಲಾಂಬಿಕೆಯ ಮನಸ್ಸಿನಲ್ಲಿ ಕೂಡ. ಪ್ರಭುತ್ವ, ಧರ್ಮ, ವ್ಯವಸ್ಥೆಯೊಂದಿಗೆ ಏಗುವುದು ಎಂಥ ಸೂಕ್ಷ್ಮಜ್ಞರಿಗೂ ಸವಾಲಿನ ಸಂಗತಿಯೇ ಸರಿ. ಇವೆಲ್ಲವುಗಳ ನಡುವೆ ಒಂದು ಕನಸನ್ನು ಮುನ್ನಡೆಸುವುದು ಅಷ್ಟು ಸುಲಭವಲ್ಲ. ಅಂಥ ಕನಸಿಗೆ ಬಲಿಯಾದವರು ನೂರಾರು ಜನ. ಬಸವಣ್ಣನವರ ಕುಟುಂಬ ಇದೆಲ್ಲಾ ಸಂಕಟವನ್ನು ಹೊಟ್ಟೆಯೊಳಗಿಟ್ಟುಕೊಂಡು ಮುನ್ನಡೆದಿದೆ. ಮಾನಸಿಕ ಆಘಾತಗಳಿಗೆ ಒಳಗಾಗಿದೆ. ಊರಿನ ಜೊತೆ, ಶರಣರ ಜೊತೆ. ಅರಮನೆಯ ಜೊತೆ ಸಂಬಂಧ ಹೊಂದಿದ್ದ ಮಹಾಮನೆಯ ಕುಟುಂಬದ ಸದಸ್ಯರು ಎದುರಿಸಿದ ಆತಂಕ, ತಳಮಳವೇ ಈ ನಾಟಕದ ಭಿತ್ತಿ ಮತ್ತು ಚಿತ್ರ ಹೊರಗಿನ ಲೋಕಕ್ಕಿಂತ ವ್ಯಕ್ತಿಗಳ ಒಳಗಿನ ಲೋಕ ಹೆಚ್ಚು ವಿಸ್ತಾರವಾದದ್ದು ಹಾಗು ಜಟಿಲವಾದದ್ದು. ಅದರ ಅಸ್ಥಿರತೆಯಲ್ಲಿ ಸಂಗೀತದ ಹಲವು ರಾಗಗಳಿವೆ ಮತ್ತು ನಮ್ಮ ಕಾಲಕ್ಕೆ ಬೇಕಾದ ಬೆಳಕಿದೆ. ಇದು ಚರಿತ್ರೆ, ಕಲ್ಪನೆ ಮತ್ತು ವರ್ತಮಾನದ ಕೂಡಲಸಂಗಮ. ಪಾತ್ರಗಳಷ್ಟೇ ಚಾರಿತ್ರಿಕ, ಉಳಿದದ್ದೆಲ್ಲ ಕಾಲದ ಕಲ್ಪನೆ.