ಜ್ಞಾನ, ಭಕ್ತಿ, ಮುಕ್ತಿ – ಜಗದ್ಗುರುವರಿಂದ ಸತ್ಯದ ನುಡಿ"

ಸತ್ಯವನ್ನು ತಿಳಿಯುವದು ಜ್ಞಾನ ಮಾರ್ಗವಾದರೆ, ಸತ್ಯವನ್ನು ನಂಬುವದು ಭಕ್ತಿಮಾರ್ಗ, ಸತ್ಯದ ಪಥದಲ್ಲಿ ಸಾಗುವದೇ ಮುಕ್ತಿಮರ್ಗ ಎಂದು ರಂಭಾಪುರಿ ಜಗದ್ಗುರು ಪೂಜ್ಯ ಡಾ.ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರೂ ನುಡಿದರು.
ಕಲಬುರಗಿ ತಾಲ್ಲೂಕಿನ ತಾಜ ಸುಲ್ತಾನಪುರ ಗ್ರಾಮದ ಚಿನ್ನದಕಂತಿ ಚಿಕ್ಕವೀರೇಶ್ವರ ಹಿರೇಮಠದಲ್ಲಿ ಶ್ರೀ ಚಿನ್ನದಕಂತಿ
ಸಾಂಸ್ಕೃತಿಕ ಭವನ ಲೋಕಾರ್ಪಣೆ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಧರ್ಮ ಪೀಠಗಳು ಗ್ರಾಮೀಣ ಭಾಗದ ಜನರಿಗೆ ಧರ್ಮ ಜಾಗೃತಿ ಮೂಡಿಸಿ ಮಾನವೀಯ ಸಂಭಂದ ಗಟ್ಟಿಗೊಳಿಸುತ್ತಿರುವ ಸರಡಗಿ ಪೂಜ್ಯರು ಮುಂಚೂಣಿಯಲ್ಲಿರುವ ಕಾರ್ಯ ಶ್ಲಾಘನೀಯ.ಇಂತಹ ಕಾರ್ಯ ನಿರಂತರವಾಗಿ ಸಾಗಲಿ ಎಂದು ನುಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಮಾತನಾಡುತ್ತ ಧಾರ್ಮಿಕ ಸಮಾರಂಭ ಗ್ರಾಮೀಣ ಭಾಗದ ಜನರ ಮನಸ್ಸು ಶುಚಿಗೊಳಿಸಿ, ಮಾನವೀಯ ಸಂಭಂದ ಗಟ್ಟಿಗೊಳಿಸುತ್ತವೆ. ಶ್ರೀ ಮಠದ ಅಭಿವೃದ್ಫಿಗೆ ಪ್ರಾಮಾಣಿಕವಾಗಿ ಸೇವೆಗೈಯುತ್ತೇನೆ ಎಂದು ಹೇಳಿದರು. ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮುಡ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ನೇತೃತ್ವ ಶ್ರೀ ಮಠದ ಪೀಠಧಿಪತಿಗಳಾದ ಪೂಜ್ಯ ಡಾ. ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ ನಮ್ಮ ಮಠಕ್ಕೆ ಭಕ್ತರೆ ಆಸ್ತಿಯಾಗಿ ಅವರ ಸಹಕಾರದಿಂದ ಹಾಗೂ ಜಗದ್ಗುರುಗಳ ಆಶೀರ್ವಾದದಿಂದ ಕತ್ತಲಲ್ಲಿದ ಮಠ ಸರ್ವರ ಮನದಲ್ಲಿ ಬೆಳಕಾಗಿ ಬೆಳಗುತ್ತ, ಕಷ್ಟದಲ್ಲಿರುವ ಭಕ್ತರಿಗೆ ಆಸರೆ ಆಗುತ್ತಿದೆ ಎಂದು ನುಡಿದರು.
ವೇದಿಕೆಯ ಮೇಲೆ
ಶಹಾಬಜಾರ ಚವದಾಪುರಿ ಪೂಜ್ಯರಾದ ಡಾ. ರಾಜಶೇಖರ ಶಿವಾಚಾರ್ಯರು, ದೇವಪುರ ಪೂಜ್ಯರಾದ ಶಿವಮೂರ್ತಿ ಶಿವಾಚಾರ್ಯರು, ತೋನಸಳ್ಳಿ ಪೂಜ್ಯರಾದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ಆಲಮೇಲ ಪೂಜ್ಯರಾದ ಚಂದ್ರಶೇಖರ ಶಿವಾಚಾರ್ಯರು, ಮಾಜಿ ಶಾಸಕರಾದ ದತ್ತಾತ್ರಾಯ ಸಿ. ಪಾಟೀಲ, ರಾಜಕೀಯ ಮುಖಂಡರಾದ ಚಂದು ಪಾಟೀಲ, ನೀಲಕಂಠ ರಾವ ಮೂಲಗೆ, ಸಂತೋಷ ಪಾಟೀಲ, ಮಲ್ಲಿಕಾರ್ಜುನ ಖೇಮಜಿ, ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶಿವಕುಮಾರ ಪಸಾರ,ಬಸವರಾಜ ಮುನ್ನಳ್ಳಿ, ಶಾಂತಕುಮಾರ ದುಧನಿ, ಪೊಲೀಸ ಅಧಿಕಾರಿ ಪುಂಡಲೀಕ,ಸಂತೋಷ ಆಡೆ, ಶರಣಗೌಡ ಪಾಟೀಲ,ಜಗನ್ನಾಥ ಮಲಿಪಾಟೀಲ, ಚಂದ್ರಶೇಖರ ಪಾಟೀಲ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು. ಶ್ರೀ ಮಠದ ಉತ್ತರಾಧಿಕಾರಿ ಚಿನ್ನವೀರ ದೇವರು ಆಶೀರ್ವಚನ ನೀಡುತ್ತಾ ನೆರೆದವರ ಮನದಲ್ಲಿ ಭಕ್ತಿಯ ಜ್ಯೋತಿ ಹಚ್ಚಿದರು.ಇದೆ ಸಂಧರ್ಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಗದ್ಗುರುಗಳ ಹಲವಾರು ವಾಧ್ಯಗಳೊಂದಿಗೆ ನಿರಂತರವಾದ ಮಳೆಯಲ್ಲಿಯೇ ಭವ್ಯವಾದ ಮೆರವಣಿಗೆ ಜರುಗಿರುವದು ವಿಶೇಷ.ನ್ಯಾಯವಾದಿ ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ರವಿಕುಮಾರ ಶಹಾಪುರಕರ್ ನಿರೂಪಿಸಿದರು, ವಿನೋದ ಮಾಳಾ ವಂದಿಸಿದರು. ಕಾರ್ಯಕ್ರಮದಲ್ಲಿ ಗುರುಶಾಂತ ಓಗಿ, ಶಿವಲಿಂಗಪ್ಪ ಮಾಳಾ,ಸುಭಾಷ ಓಗಿ, ಶಿವಶರಣಪ್ಪ ಹಿರೇಮನಿ, ಸೂರ್ಯಕಾಂತ ಚನ್ನಬಟ್ಟಿ,ಬಸವರಾಜ ಕುರಕೋಟಿ, ಗುರು ಹಾಂವಾ, ಶರಣು ಹಂಗರಗಿ, ಮಹೇಶ ಬೀರನಳ್ಳಿ, ಅರ್ಜುನ ಗೊಬ್ಬುರಕರ, ಶರಣಬಸಪ್ಪ ಮಚೆಟ್ಟಿ, ನಾಗಿಂದ್ರಪ್ಪ ದೇಗಲಮಡ್ಡಿ, ನಾಗಣ್ಣ ಚವಡಾಪುರ್, ಮಹಾಂತಯ್ಯ್ ಬಾಳ್ಳಿ, ರಾಜಶೇಖರ ಪಾಟೀಲ,ರಾಜಶೇಖರ ಕಲಕೋರಿ, ಶರಣಯ್ಯ ಬೇಲೂರ, ಶ್ರೀಶೈಲ ಕಲಕೋರಿ, ಚಿನ್ನು ಮಾಮನಿ, ಸುರೇಶ ಪಡಶೆಟ್ಟಿ,ಆನಂದ ಖೇಳಗಿ, ಶಿವಕುಮಾರ ಮಗಿ, ಸಂಗಣ್ಣ ಚಿಡಗುಂಪಿ, ಮಹಾಂತೇಶ ಹರಸೂರ್, ಸಂಗಯ್ಯ ಹಿರೇಮಠ, ಮಹಾದೇವ ನಾಗೂರ, ಶರಣಬಸಪ್ಪ ಕುದರಿ,ಚಂದ್ರಶೇಖರ ಅಂಬಲಗಿ, ಶಿವಶರಣಪ್ಪಾ ಮುದ್ದಾಳ ಸೇರಿದಂತೆ ಗ್ರಾಮದ ಅನೇಕ ಜನ, ಮಹಿಳೆಯರು, ಯುವಕರು, ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನ ಭಾವಹಿಸಿದರು.