ಕಾಂಗ್ರೆಸ್ ಪಕ್ಷದ ಗೂಂಡಾ ವರ್ತನೆ ಖಂಡನೀಯ

ಕಾಂಗ್ರೆಸ್ ಪಕ್ಷದ ಗೂಂಡಾ ವರ್ತನೆ ಖಂಡನೀಯ
ಶಹಾಬಾದ : - ಜಿಲ್ಲೆಯ ಚಿತ್ತಾಪೂರ ಪಟ್ಟಣದಲ್ಲಿ ತಿರಂಗಾ ಯಾತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ಪಕ್ಷದ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಅವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ 5 ಗಂಟೆಗಳ ಕಾಲ ಕಾಂಗ್ರೆಸ್ ಗೂಂಡಾಗಳು ದಿಗ್ವಂದನ ಹಾಕಿದ್ದು ಖಂಡನೀಯ ಎಂದು ಬಿಜೆಪಿ ಓಬಿಸಿ ಮೋರ್ಚ ಜಿಲ್ಲಾ ಸಂಚಾಲಕ ಬಸವರಾಜ ಮದ್ರಿಕಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮಂಡಲ ಹಾಗೂ ಓಬಿಸಿ ಮೋರ್ಚದ ವತಿಯಿಂದ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಅಂಬರಾಯ ಅಷ್ಟಗಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಮೇಲೆ ಪೆನ್ನಿನ ಇಂಕ್ ಚೆಲ್ಲಿ ಅವರನ್ನು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದಂತೆ ಮಾಡಿದ ಜಿಲ್ಲಾ ಆಡಳಿತ ಮತ್ತು ಪೋಲಿಸ್ ಇಲಾಖೆ ಸೂಕ್ತ ಭದ್ರತೆ ನೀಡದೆ ಇರುವುದು ಖಂಡನೀಯ ಹಾಗೂ ಸಂವಿಧಾನ ವಿರೋದಿಯಾಗಿದೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನಾಯಿಗೆ ಹೋಲಿಸಿ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಫೋನ್ ಕರೆ ಮಾಡಿ ಎಲ್ಲಾ ತಿಳಿಸಿದ ನಂತರ ಮಾಧ್ಯಮದ ಜೊತೆಗೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಕ್ಷಮೆ ಕೇಳಿದರೂ ಕೂಡ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಒಬ್ಬ ದಲಿತ ನಾಯಕರನ್ನು ಸೂಕ್ತ ರಕ್ಷಣೆ ಇಲ್ಲದೆ ಹೋದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ವಿಪಕ್ಷ ನಾಯಕರನ್ನು ಕೂಡಿ ಹಾಕಿ ತಿರಂಗ ಯಾತ್ರೆದಲ್ಲಿ ಭಾಗಿಯಾಗದಂತೆ ಮಾಡಿರುವುದು, ತಿರಂಗಾ ಯಾತ್ರೆಗೆ ದಲಿತರಿಗೆ, ದೇಶದ ಸೈನಿಕರಿಗೆ, ದೇಶಕ್ಕೆ ಮಾಡಿದ ಅಪಮಾನ ಮಾಡಿದಂತೆ ಕಲಬುರಗಿ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದ್ದಿದ್ದು, ತುಗಲಘ ದರ್ಬಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕನಕಪ್ಪ ದಂಡಗುಲ್ಕರ್, ಬಸವರಾಜ ಬಿರಾದರ, ಮೋಹನ ಹಳ್ಳಿ, ಸಿದ್ರಾಮ ಕುಸಾಳೆ, ಬಸವರಾಜ ಹಡಪದ ಉಪಸ್ಥಿತರಿದ್ದರು.
ಶಹಾಬಾದ್ ವರದಿ ನಾಗರಾಜ್ ದಂಡಾವತಿ