ದಕ್ಷ ಆಡಳಿತಗಾರ ಡಾ. ವೀರನಾಥ ರನ್ನು ಮರು ನೇಮಿಸಿ|

.|ದಕ್ಷ ಆಡಳಿತಗಾರ ಡಾ. ವೀರನಾಥ ರನ್ನು ಮರು ನೇಮಿಸಿ|ಹೊಣೆಗಾರಿಕೆ ಯಿಂದ ಹಿಂದೆ ಸರಿದ ವೈದ್ಯಾಧಿಕಾರಿ ಬೇಡ :..
ಶಹಾಬಾದ್: ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ತಾಲ್ಲೂಕ ಆರೋಗ್ಯ ವೈದ್ಯಾಧಿಕಾರಿಗಳಾಗಿ ಕೆಲವೆ ತಿಂಗಳುಗಳ ಹಿಂದೆ ಅಧಿಕಾರ ವಹಿಸಿ ಸುಮಾರು ವರ್ಷಗಳಿಂದ ಆಸ್ಪತ್ರೆಯಲ್ಲಿ ಹಲವು ಅಭಿವೃದ್ಧಿಯಾಗದ ಕಾರ್ಯಗಳನ್ನು ಮಾಡಿ ಆಸ್ಪತ್ರೆಗೆ ಹೊಸ ರೂಪ ನೀಡಿ ಮತ್ತು ಸಕಲ ಮೂಲ ಸೌಲಭ್ಯಗಳನ್ನು ನೀಡಲು ಶ್ರಮವಹಿಸಿದ ಡಾ.ವೀರನಾಥ ಕನಕ ಅವರನ್ನು ವಿನಾಕಾರಣ ಶಹಾಬಾದ ಇಂದ ಬದಲಾವಣೆ ಮಾಡಿರುವುದು ಸರಿಯಲ್ಲ, ಇದರ ಹಿಂದೆ ಕಾಂಗ್ರೆಸ್ ಪಕ್ಷದ ಮುಖಂಡರ ಕೈವಾಡ ಇದೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕ ಅಧ್ಯಕ್ಷ ಅಬ್ದುಲ್ ಗನೀ ಸಾಬಿರ್ ನೇರವಾಗಿ ಆರೋಪಿಸಿದ್ದಾರೆ.
ಡಾ. ವೀರನಾಥ 6 ತಿಂಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬರುವ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ಹಾಗೂ ಆಧುನಿಕ ತಂತ್ರಜ್ಞಾನವುಳ್ಳ ಲೆಪ್ರೊಸ್ಕೋಪಿ ಹೇರಿಗೆ ಚಿಕಿತ್ಸೆ ಮತ್ತು ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಅಭಿವೃದ್ಧಿ, ಮೂಲ ಸೌಕರ್ಯಗಳಿಗೆ ವ್ಯವಸ್ಥೆ ಮಾಡಿದ್ದು, ಜನ ಮೇಚ್ಚಿಗೆ ಪಡೆದಿದ್ದಾರೆ. ನಾಲ್ಕು ವರ್ಷದಿಂದ ಡಾ. ಅಬ್ದುಲ ರಹೀಂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾಗಿ ಇದ್ದಾಗ ಬಡ ರೋಗಿಗಳನ್ನು ಚಿಕ್ಕಪುಟ್ಟ ರೋಗಗಳಿಗೆ ಕಲಬುರ್ಗಿ ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದರು, ಔಷಧೀಗಳ ಕೊರತೆ ಕಾಣುತ್ತಿತ್ತು, ಡಾ.ರಹೀಂ ಅವದಿಯಲ್ಲಿ ಕಾಣದ ಅಭಿವೃದ್ಧಿ ಕೆಲಸಗಳು ಡಾ.ವೀರನಾಥ ರವರ ಅವದಿಯಲ್ಲಿ ಈಗ ಕಂಡಿದ್ದೇವೆ, ಆರು ತಿಂಗಳ ಹಿಂದೆಯೆ ಡಾ: ಅಬ್ದುಲ ರಹೀಂ ವೈದ್ಯಾಧಿಕಾರಿಗಳಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಅವರು ಲಿಖಿತ ರೂಪದಲ್ಲಿ ಬರೆದುಕೊಟ್ಟಿದರು, ನಂತರ ಡಾ. ವೀರನಾಥ ಇವರನ್ನು ಕರ್ತವ್ಯಕ್ಕೆ ನಿಯೋಜನೆಗೊಂಡಿರು, ಆದರೆ ಈಗ ಅವರನ್ನು ಕೇವಲ 6 ತಿಂಗಳಲ್ಲಿಯೆ ಅವರಿಂದ ಅಧಿಕಾರ ಕಸಿದಿರುವದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿಗಳು ಯಾವುದೇ ರಾಜಕೀಯದ ಒತ್ತಡಕ್ಕೆ ಒಳಗಾಗದೆ ಡಾ. ಅಬ್ದುಲ ರಹೀಂ ಎಂಬುವವರನ್ನು ಸದರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಿದ್ದು ರದ್ದುಪಡಿಸಿ ಡಾ.ವೀರನಾಥ ಅವರನ್ನು ಪುನಃ ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೇಮಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುವಂತೆ
ಮಾಡಲು ನಮ್ಮ ಕರ್ನಾಟಕ ಪ್ರದೇಶ ಜನತಾ ದಳ ಘಟಕ ಶಹಾಬಾದ ತಾಲ್ಲೂಕವು ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಒಂದು ವೇಳೆ ತಾವುಗಳು ಯಾವುದೇ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಆಸ್ಪತ್ರೆ ಮತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶಹಾಬಾದ್ ವರದಿ ನಾಗರಾಜ್ ದಂಡಾವತಿ