ಶ್ರೀಕಾಂತ ಸ್ವಾಮಿ ನೇತೃತ್ವದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರಿಗೆ ಮನವಿ

ಶ್ರೀಕಾಂತ ಸ್ವಾಮಿ ನೇತೃತ್ವದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರಿಗೆ ಮನವಿ
ಕಲಬುರಗಿ: ಜಿಲ್ಲೆಗೆ ಆಗಮಿಸಿದ್ದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಸ್ವಾಮಿ ನೇತೃತ್ವ ಹಾಗೂ ತಂಡದೊಂದಿಗೆ ಭೇಟಿ ಮಾಡಿ ಬೇಡಿಕೆಗಳು ಹಾಗೂ ಕುಂದುಕೊರತೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.
ಕಳೆದ 03 ತಿಂಗಳಿಂದ ಎನ್‌ಹೆಚ್‌ಎಂನ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳಿಗೆ ವೇತನ ಆಗದೇ ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಎನ್‌ಹೆಚ್‌ಎಂ ಸಿಬ್ಬಂದಿಗಳ ಹುದ್ದೆಗಳನ್ನು ಕಡಿತ ಮಾಡುತ್ತಿರುವ ಬಗ್ಗೆ, ಹೊಸ ನೇಮಕಾತಿಗೆ ವೇತನ ಹೆಚ್ಚಳ, ಹಳಬರಿಗೆ ವೇತನ ಹೆಚ್ಚಳ ಇಲ್ಲ ಎಂಬುದರ ಬಗ್ಗೆ, 15% ವೇತನ ಹೆಚ್ಚಳದ ಅನುದಾನ ಬಿಡುಗಡೆ, ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಜೊತೆಗೆ ಖಾಯಂ ಸಹಿತ ವಿವಿಧ ಬೇಡಿಕೆಗಳು ಹಾಗೂ ಕುಂದು ಕೊರತೆಗಳ ಬಗ್ಗೆ ಮನವಿ ಸಲ್ಲಿಸಿ, ಆರೋಗ್ಯ ಸಚಿವ ಹಾಗೂ ಮುಖ್ಯ ಮಂತ್ರಿಗಳಲ್ಲಿ ಚರ್ಚಿಸುವಂತೆ ಮನವಿಯಲ್ಲಿ ತಿಳಿಸಿದ್ದರು. ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಕಾಂಬಳೆ, ಆನಂದ ಸೇರಿದಂತೆ ನೌಕರರು ಹಾಜರಿದ್ದರು.