ಕನಕ ಚಿಂತನೆ ಸಾಮಾಜಿಕ ಪ್ರಜ್ಞೆಯ ಬೋಧನೆ ಡಾ. ಸದಾನಂದ ಪೆರ್ಲ

ಕನಕ ಚಿಂತನೆ ಸಾಮಾಜಿಕ ಪ್ರಜ್ಞೆಯ ಬೋಧನೆ ಡಾ. ಸದಾನಂದ ಪೆರ್ಲ

ಕನಕ ಚಿಂತನೆ ಸಾಮಾಜಿಕ ಪ್ರಜ್ಞೆಯ ಬೋಧನೆ ಡಾ. ಸದಾನಂದ ಪೆರ್ಲ

ಕಲಬುರ್ಗಿ: ಕನಕದಾಸರು ಕೀರ್ತನೆಗಳ ಮೂಲಕ ಸಾಮಾಜಿಕ ಜಾಗೃತಿಯನ್ನು ಮಾಡಿ ಮನುಕುಲದ ಉದ್ಧಾರ ವೆಸಗಿದರು ಹಾಗೆ ಜನಪದರು ಭಾವೈಕ್ಯತೆಯ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಸಾರುವುದರ ಮೂಲಕ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯವಾಗಿದೆ ಎಂದು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಅಭಿಪ್ರಾಯ ಪಟ್ಟರು.

ಕರ್ನಾಟಕ ಜಾನಪದ ಪರಿಷತ್ ಕಲ್ಬುರ್ಗಿ ಜಿಲ್ಲಾ ಘಟಕ ಹಾಗೂ ಶ್ರೀ ಗುರುಪಾದೇಶ್ವರ ವಿಜ್ಞಾನ ಪದವಿ ಪೂರ್ವ ವಿದ್ಯಾಲಯದ ಆಶ್ರಯದಲ್ಲಿ ನವೆಂಬರ್ 18ರಂದು ನಡೆದ ಕನಕ ಜಯಂತಿ ಹಾಗೂ ಜಾನಪದ ವಿದ್ವಾಂಸರಾದ ಡಾ. ಮ ಗು ಬಿರಾದಾರ್ ಅವರ ಬದುಕು ಬರಹ ಸರಣಿಯ ಉದ್ಘಾಟನಾ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕನಕದಾಸರು ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜಾಗೃತ ಸಮಾಜವನ್ನು ನಿರ್ಮಾಣ ಮಾಡಲು ಪಣತೊಟ್ಟರು. ಸಂಪತ್ತು ಮತ್ತು ಅಧಿಕಾರ ವಿದ್ದರೂ ಅವುಗಳನ್ನೆಲ್ಲ ತ್ಯಾಗ ಮಾಡಿ ದಾಸ ಶ್ರೇಷ್ಠ ವ್ಯಾಸರಾಜರ ಪರಮಭಕ್ತನಾಗಿ ಭಕ್ತಿ ಪಂಥದ ಮಹಾನ್ ದಾಸರಾಗಿ ಸಮಾಜವನ್ನು ಉದ್ದರಿಸಿದ ಕನಕದಾಸರ ಸಾಮಾಜಿಕ ಚಿಂತನೆ ಇಂದಿನ ಸಮಾಜಕ್ಕೆ ಪ್ರೇರಣೆಯಾಗಿದೆ. ಕನಕ ದಾಸರ ಚಿಂತನೆ ಸಾಮಾಜಿಕ ಪ್ರಜ್ಞೆಯನ್ನು ಸದಾ ಜಾಗೃತಗೊಳಿಸುತ್ತಿದೆ.ಜಾನಪದವು ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಬದುಕಿನಲ್ಲಿ ಬೆಸೆದುಕೊಂಡಿದೆ. ಜನಪದರು ತಮ್ಮ ಬದುಕಿನಲ್ಲಿ ಬೋಧಿಸಿದ ಸಂಸ್ಕೃತಿ - ಸಂಸ್ಕಾರಗಳು, ಮಾನವೀಯ ಮೌಲ್ಯಗಳು ಸುಂದರ ಸಮಾಜ ನಿರ್ಮಾಣಕ್ಕೆ ಕಾರಣವಾಗಿದ್ದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಅವೆಲ್ಲ ಈಗ ನಶಿಸುತ್ತಿರುವುದು ಖೇದಕರ ವಿಷಯ. ಇದರ ಬಗ್ಗೆ ಯುವ ಜನಾಂಗವು ಜಾಗೃತರಾಗಬೇಕು ಎಂದು ಡಾ.ಪೆರ್ಲ ಹೇಳಿದರು. ಸಾಹಿತಿ ಮತ್ತು ನಿವೃತ್ತ ಪ್ರಾಚಾರ್ಯ ಡಾ. ಶ್ರೀಶೈಲ ನಾಗರಾಳ ಅವರು ಜಾನಪದ ವಿದ್ವಾಂಸ ಡಾ. ಮ.ಗು ಬಿರಾದಾರ್ ಅವರ ಬದುಕು ಬರಹದ ಕುರಿತಾಗಿ ವಿಶೇಷ ಉಪನ್ಯಾಸ ನೀಡುತ್ತಾ ಜಾನಪದವು ಮನುಜನ ಉಗಮದೊಂದಿಗೆ ಬದುಕಿನಲ್ಲಿ ಬೆಸೆದುಕೊಂಡ ವಿಷಯವಾಗಿದೆ. ಜನಪದರು ಕಟ್ಟಿಕೊಟ್ಟ ಬದುಕು ಜಗತ್ತಿಗೆ ಮಾದರಿಯಾಗಿದ್ದು ಅದು ದೇಶ ವಿದೇಶ ಎಲ್ಲದರಲ್ಲೂ ಕೂಡ ವೈಶಿಷ್ಟ್ಯ ಪೂರ್ಣವಾಗಿದೆ. ಜನಪದ ಬದುಕು ನಮಗೆ ಆದರ್ಶವಾಗಲಿ ಎಂದರು . ಗುಲಬರ್ಗಾ ವಿಶ್ವವಿದ್ಯಾಲ ಯದ ಪ್ರಾಧ್ಯಾಪಕರಾಗಿ ಒ ಬ್ಬ ಜಾನಪದ ವಿದ್ವಾಂಸರಾ ಗಿ ಹಳ್ಳಿ ಹಳ್ಳಿಗಳಿಗೆ ಹೋಗಿ ಜನಪದರನ್ನು ಭೇಟಿ ಮಾಡಿ ಜಾನಪದ ಹಾಡುಗಳನ್ನು ಅವರಿಂದ ಹಾಡಿಸಿ ಅವುಗಳನ್ನು ಹನಿ ಮುದ್ರಿಸಿಕೊಂಡು ದೊಡ್ಡ ಸಂಗ್ರಹ ಮಾಡಿದ ಕೀರ್ತಿ ಡಾ.ಮ.ಗು.ಬಿರಾದಾರ ಗೆ ಸಲ್ಲುತ್ತದೆ ಎಂದು ಬಣ್ಣಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಮತ್ತು ಶ್ರೀ ಗುರುಪಾದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಾದಿರಾಜ ವ್ಯಾ ಸಮುದ್ರ ಮಾತನಾಡಿ ಈ ಕಾರ್ಯಕ್ರಮ ಹಮ್ಮಿಕೊಂಡ ಸಿ.ಎಸ್.ಮಾಲಿಪಾಟೀಲರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ವಿದ್ಯಾರ್ಥಿಗಳಿಗೆ ಜಾನಪದದ ವಿಷಯ ಕುರಿತು ವಿಶೇಷವಾದ ಒಳನೋಟ ತಿಳಿಯುವಂತಾಯಿತು ಎಂದು ಹೇಳಿದರು.

 ಪ್ರಾಸ್ತಾವಿಕವಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಧ್ಯಕ್ಷರಾದ ಸಿ.ಎಸ್.ಮಾ ಲಿ ಪಾಟೀಲ ಮಾತನಾಡಿ ಜಾನಪದ ಪರಿಷತ್ ಜಿಲ್ಲೆಯಲ್ಲಿ ಈ ವರೆಗೆ 25 ನೇ ಕಾರ್ಯಕ್ರಮ ಹಮ್ಮಿಕೊಂಡು ಯುವಜನರಲ್ಲಿ ಜನಪದ ಕ್ಷೇತ್ರದ ಬಗ್ಗೆ ಒಲವು ಮೂಡಿಸಲು ಪ್ರಯತ್ನಿಸುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕು ಸಾರಿಕಾ, ಕು.ಸೌಮ್ಯ ಪ್ರಾರ್ಥಿಸಿದರು. ಡಾ.ಹಣಮಂತ್ರಾಯ ರಾಂಪೂರೆ ಸ್ವಾಗತಿಸಿದರು. ಕು.ಅಂಕಿತಾ ನಿರೂಪಣೆ ಮಾಡಿದರು. ಸಂಸ್ಥೆಯ ನಿರ್ದೇಶ ಕರಾದ ಚನ್ನಬಸ್ಸಯ್ಯ ಗುರೂವಿನ್ ಹಾಗೂ ಉಪನ್ಯಾಸ ಕರಾದ ಭಾಗ್ಯಾ ಎಲಗಾರ, ಡಾ. ಶರಣ ಬಸಮ್ಮ ಅಂಬಲಗಿ, ಸವಿತಾ ಬಿರಾದಾರ, ನಿಶಿತಾ ಮತ್ತು ಸಿ.ಎಸ್.ಆನಂದ ಹಾಗೂ ವಿದ್ಯಾರ್ಥಿಗಳು ಇದ್ದರು.