ಬಿ.ನಾಗೇಶ್ವರ ಶಿಕ್ಷಕನಿಗೆ ಬಿಳ್ಕೊಡುಗೆ
ಬಿ.ನಾಗೇಶ್ವರ ಶಿಕ್ಷಕನಿಗೆ ಬಿಳ್ಕೊಡುಗೆ
ಚಿಂಚೋಳಿ-: "ಸತತವಾಗಿ 27 ವರ್ಷಗಳ ಕಾಲ ಚಿಂಚೋಳಿ ತಾಲೂಕಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಯಾದಗಿರಿ ಜಿಲ್ಲೆಗೆ ವರ್ಗಾವಣೆಯಾಗಿ ಹೋಗುತ್ತಿರುವ ಬಿ.ನಾಗೇಶ್ವರ ಅವರು ಒಬ್ಬ ಆದರ್ಶ ಶಿಕ್ಷಕರಾಗಿದ್ದರು. ಇವರು ತಮ್ಮ ಸೇವೆಯನ್ನು ಸದಾ ಮಕ್ಕಳ ಕಲಿಕೆಗಾಗಿ ಮಿಸಲಿಟ್ಟು ತಮ್ಮ ಅಮೂಲ್ಯವಾದ ಸೇವೆಯನ್ನು ನಿರ್ವಹಿಸಿದ್ದಾರೆ. ಇವರು ಈಗ ಬೇರೆಡೆಗೆ ವರ್ಗಾವಣೆ ಆಗಿರುವುದು ನಮಗೆ ತುಂಬ ನೋವಿನ ಸಂಗತಿಯಾಗಿದೆ ' ಎಂದು ಸಿ.ಆರ್.ಪಿ. ಭೀಮರಾವ ಕುಲಕರ್ಣಿಯವರು ಮಾತನಾಡಿದರು.
ಇವರು ಇಲ್ಲಿಯ ಐನಾಪೂರ ಹೋಬಳಿಯ, ಸಲಗರ ಬಸಂತಪೂರ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಸೂರುನಾಯ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆ ಹೊಂದಿದ ಶಿಕ್ಷಕ ಬಿ.ನಾಗೇಶ್ವರ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಬಿ.ನಾಗೇಶ್ವರ ಅವರು ಈ ಶಾಲೆಯಿಂದ ಯಾದಗಿರಿಯ ಬೊಮ್ರಾಲ್ದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿರುವುದರಿಂದ ಅವರು ಸೇವೆ ಸಲ್ಲಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂರುನಾಯಕ ತಾಂಡಾ ಶಾಲೆಯಲ್ಲಿ ಈ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪಕ್ಕದ ಗೋವಿಂದ ನಾಯಕ ತಾಂಡಾದ ಮುಖ್ಯ ಗಳಾದ ದೇವರಾಜ , ರೂಪ್ಲಾ ನಾಯಕ ತಾಂಡಾದ ಗಣಪತಿ ಚೌಹಾಣ ಪತ್ತುನಾಯಕ ತಾಂಡಾದ ಮುಖ್ಯ ಗುರುಗಳಾದ ಸಿದ್ದಣ್ಣ ಮೂರ್ತಿ,
ಗೋವಿಂದತಾಯಕ ಗ್ರಾಮ.ಪಂಚಾಯತ್ ಸದಸ್ಯರಾದ ತೇಜುನಾಯಕ, ಎಸ್ ಡಿ.ಎಮ್ ಸಿ ಅಧ್ಯಕ್ಷ ಪಾಂಡು, ಅತಿಥಿ ಶಿಕ್ಷಕರಾದ,ಓಂಕಾರ ವಿಭೂತಿ, ಶಂಕರ್ ರಾಠೋಡ, ಹಾಗೂ ಸಲಗರ ಬಸಂತಪೂರದ ಮುಖ್ಯ ಗುರುಗಳಾದ ಬಾಬುರಾವ ಜಮಾದಾರ, ಬೆನಕಿಪಳ್ಳಿ ಶಾಲೆಯ ಮುಖ್ಯ ಗುರುಗಳಾದ ಧನವಂತ ಸಿಂಧೆ, ಸೂರುನಾಯಕ ತಾಂಡಾದ ಪ್ರಭಾರಿ ಮುಖ್ಯ ಗುರುಗಳಾದ ಅನೀಲಕುಮಾರ ಸೇರಿದಂತೆ ಮೊದಲಾದ ಶಾಲೆಯ ಶಿಕ್ಷಕರು ಮಾತನಾಡಿದರು .
ಈ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರೇಮಸಿಂಗ್ ರಾಠೋಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಮತ್ತು ಗೋವಿಂದ ನಾಯಕ ತಾಂಡಾದ ಎಸ್.ಡಿ.ಎಂ.ಸಿ ಅಧ್ಯಕ್ಷರು ಸೇರಿದಂತೆ ಮೊದಲಾದವರು ಮತ್ತು ಗ್ರಾಮದ ಮುಖಂಡರು ಹಾಗೂ ಯುವಕರು ಸೇರಿದಂತೆ ಗ್ರಾಮದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.