ರಾಜ್ಯಪಾಲರ ವಿರುದ್ಧ ಬಿ.ಆರ್ ,ಪಾಟೀಲ್ ಆಕ್ರೋಶ
ರಾಜ್ಯಪಾಲರ ವಿರುದ್ಧ ಬಿ.ಆರ್ ,ಪಾಟೀಲ್ ಆಕ್ರೋಶ
ಕಲಬುರಗಿ: ಕರ್ನಾಟಕ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ಪ್ರಜಾಪ್ರಭುತ್ವದಿಂದ ಅಯ್ಕೆ ಆಗಿರುವ ಸರ್ಕಾರವನ್ನು ಅಭದ್ರ ಪಡಿಸುವ ಮಾನ್ಯ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಣಯ ಷಡ್ಯಂತ್ರ ಖಂಡಿಸಿ ಕಲಬುರಗಿ ಜಗತ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಶಾಸಕ ಬಿ.ಆರ್ ಪಾಟೀಲ್ ಅವರು ಮಾತಾಡಿ ನಮ್ಮ ಸರ್ಕಾರವನ್ನು ಅಭ್ರಗೊಳಿಸುವ ದೊಡ್ಡ ಷಡ್ಯಂತ್ರವನ್ನು ಮಾಡಲಾಗಿದೆ. ಬಿಜೆಪಿ, ಜೆಡಿಎಸ್ ಕೆಲ ಮುಖಂಡರು ಈ ಷಡ್ಯಂತ್ರದ ಪಾಲುದಾರರು. ಉತ್ತರಾಖಂಡ, ಜಾರ್ಖಂಡ್, ನವದೆಹಲಿಯಲ್ಲಿ ಮಾಡಿದಂತೆ ಕರ್ನಾಟಕದಲ್ಲಿಯೂ ಷಡ್ಯಂತ್ರ ಮಾಡಿದ್ದಾರೆ.
ಮೇಲ್ನೋಟಕ್ಕೆ ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ, ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರ ಚಟುವಟಿಕೆ ಇದು ಬಿಜೆಪಿ ಏಜೆಂಟ್ ರಾಜ್ಯಪಾಲ ನಡೆ ಎಂದರು
ಶಾಸಕ ಅಲ್ಲಮಪ್ರಭು ಪಾಟೀಲ ಅವರ ಮಾತಾಡಿ ಬಿಜೆಪಿ ನಾಯಕರು ರಾಜ್ಯಪಾಲರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಅವರಿಗೆ ಸಹಿಸಲಾಗುತ್ತಿಲ್ಲ .ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯ ಹಾಗೂ ಗ್ಯಾರಂಟಿ ಯೋಜನೆಗಳ ವಿರುದ್ಧವಾಗಿದೆ . ಬಿಜೆಪಿಯವರ ಈ ನಿಲುವಿಗ ಈಗ ಜೆಡಿಎಸ್ ನವರೂ ಬೆಂಬಲ ನೀಡಿದ್ದಾರೆ.
ಮಾನ್ಯ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ಕಾಂಗ್ರೆಸ್ ಅದಿಕಾರ ಇರುವ ರಾಜ್ಯಗಳಲ್ಲಿ ಬಿಜೆಪಿಗೆ ಅದಿಕಾರ ನೀಡಲು ರಾಜ್ಯಪಾಲರ ಭವನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸುಭಾಷ ರಾಠೋಡ್ ಅವರ ಅವರು ಮಾತನಾಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣ , ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿಯವರ ವಿರುದ್ಧ ದೂರು ನೀಡಲಾಗಿದ್ದರೂ, ಇದುವರೆಗೆ ಯಾವುದೇ ಕ್ರಮವಾಗಿಲ್ಲ. ನವೆಂಬರ್ ತಿಂಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರ ಮೇಲೆ ಅನಧಿಕೃತ ಗಣಿ ಗಾರಿಕೆಗೆ ಪರವಾನಗಿ ನೀಡಿರುವ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೋರಿದ್ದರೂ ರಾಜ್ಯಪಾಲರಿಂದ ಯಾವುದೇ ಕ್ರಮವಾಗಿಲ್ಲ. ಒಟ್ಟಾರೆ ರಾಜ್ಯಪಾಲರ ಭವನ ಕೇಂದ್ರದ ಬಿಜೆಪಿಯ ಸರಕಾರದ ಕಚೇರಿ ಅರ್ಥಾತ್ ಏಜೆಂಟ್ ರಾಜ್ಯಪಾಲರಾಗಿದ್ದಾರೆ ಎಂದರು.
ಹೋರಾಟದಲ್ಲಿ ರೇವು ನಾಯಕ ಬೆಳಮಗಿ. ನೀಲಕಂಠರಾವ್ ಮೂಲಗೆ, ಅರವಿಂದ ಚವ್ಹಾಣ, ರಾಜು ಕಪನೂರ, ಲಚ್ಚಪ್ಪ ಜಮಾದಾರ್ , ಲಿಂಗರಾಜ ಕಣ್ಣಿ,ಧರ್ಮರಾಜ ಹೇರೂರ, ಸುನೀಲ ಮಾನಪಡೆ ಮಲ್ಲಿಕಾರ್ಜುನ ನೀಲೂರು , ಶಿವಕುಮಾರ ಹೊನಗುಂಟಾ, ಸಚಿನ್ ಶಿರ್ವಾಳ, ಮಲ್ಲಿಕಾರ್ಜುನ ಪೂಜಾರಿ, ಈರಣ್ಣ ಜಳಕಿ, ರೇಣುಕಾ ಸಿಂಗೇ, ಸಿದ್ರಾಮ ಪ್ಯಾಟಿ, ಸೀನು ಲಾಖೆ, ರೇಣುಕಾ ಹೊಳಕರ್, ವಿಜಯಕುಮಾರ ಕಟ್ಟಿಮನಿ, ರಾಹುಲ್ ಹೊನ್ನಳ್ಳಿ, ಶರಣಗೌಡ ಪಾಟೀಲ, ಶಪಿಕ್ ಅಹ್ಮದ್, ಪ್ರವೀಣಕುಮಾರ ಟಿ ಟಿ, ಕುಮಾರ ಯಾದವ, ಶಿವಾನಂದ ತೊರವಿ, ಚಂದು ಚಾದವ,ಸಿದ್ದು ಪೂಜಾರಿ, ಸಿದ್ದಾರ್ಥ್ ಬಸರಿಗಿಡ, ಸುರೇಶ ಪೂಜಾರಿ , ಪ್ರವೀಣ ಪೂಜಾರಿ , ಕಾಶಿ ಹಾದಿಮನಿ ಸಾಗರ ವಾಣ , ಗೀತಾ ಮುದ್ದಗಲ, ಶೋಭಾ ಬಬಲಾದ, ಸೋಮು ಒಡೆಯರ್, ಅನಿಲಕುಮಾರ ಜಮಾದಾರ, ಬಂಗಾರಪ್ಪ ಪೂಜಾರಿ, ಇತರರು ಇದ್ದರು.