ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರ ಬಹಳಷ್ಟು ಬೆಳವಣಿಗೆಯಾಗುತ್ತಿದೆ- ಶ್ರೀ ಶಶೀಲ್ ಜಿ ನಮೋಶಿ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರ ಬಹಳಷ್ಟು ಬೆಳವಣಿಗೆಯಾಗುತ್ತಿದೆ- ಶ್ರೀ ಶಶೀಲ್ ಜಿ ನಮೋಶಿ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರ ಬಹಳಷ್ಟು ಬೆಳವಣಿಗೆಯಾಗುತ್ತಿದೆ- ಶ್ರೀ ಶಶೀಲ್ ಜಿ ನಮೋಶಿ

ಕಲಬುರಗಿ -ಇತ್ತೀಚಿನ ವರ್ಷಗಳಲ್ಲಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರವು ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ, ವಿವಿಧ ಕೈಗಾರಿಕೆಗಳನ್ನು ಪರಿವರ್ತಿಸುತ್ತದೆ ಮತ್ತು ನಮ್ಮ ದೈನಂದಿನ ಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿ ಅಭಿಪ್ರಾಯ ಪಟ್ಟರು ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ನಡೆದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿ ಪರಿವರ್ತಕ ಮತ್ತು ಹೊಂದಿಕೊಳ್ಳುವ ತಂತ್ರಜ್ಞಾನಗಳ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಚಾಲನೆ ನೀಡಿ ಮಾತನಾಡುತ್ತಿದ್ದರು.

 ವೇಗವಾಗಿ ಚಲಿಸುವ ಡೇಟಾ ಚಾಲಿತ ಯುಗದಲ್ಲಿ, ಪ್ರತಿದಿನ ಹೊಸ ತಂತ್ರಜ್ಞಾನಗಳು ಹೊರಹೊಮ್ಮುತ್ತಿವೆ. ಮತ್ತು ಬಹುತೇಕ ಎಲ್ಲಾ ಕ್ಷೇತ್ರಗಳು ತಮ್ಮ ಬೆಳವಣಿಗೆಗಳಿಗಾಗಿ AI ಅನ್ನು ಬಳಸಿಕೊಳ್ಳುತ್ತಿವೆ. ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಶಿಕ್ಷಣ ಕ್ಷೇತ್ರವೂ ಈ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು ಎಂದು ಅವರು ಹೇಳಿದರು.

ನಮ್ಮ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರೀಕಲ್ ಇಂಜಿನಿಯರಿಂಗ್ ವಿಭಾಗದ ಸಿ ಎಸ್ ಇ, ಸಿ ಎಸ್ ಡಿ, ಐ ಎಸ್ ಇ,ಎ ಆಯ್ ಎಂ ಎಲ್, ಇಇಇ,ಇಸಿಇ ಮತ್ತು ಇ ಅಂಡ್ ಐಇ ಅಧ್ಯಾಪಕರು ಮತ್ತು ಸಿಬ್ಬಂದಿಗಳು ಭಾಗವಹಿಸಿ ಈ ವಿಚಾರ ಸಂಕಿರಣದ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು 

ಕಾರ್ಯಕ್ರಮದಲ್ಲಿ ಹರಿಯಾಣದ ಕೇಂದ್ರೀಯ ವಿಶ್ವವಿದ್ಯಾಲಯದ ಟ್ರೇನಿಂಗ್ ಮತ್ತು ಪ್ಲೇಸ್ಮೆಂಟ್ ನಿರ್ದೇಶಕರಾದ ಡಾ ಆಕಾಶ ಸಕ್ಸೇನಾ ಮುಖ್ಯ ಅತಿಥಿಗಳಾಗಿದ್ದರು.ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್ ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟಿ, ಡಾ ಭಾರತಿ ಹರಸೂರ ಇಲೇಕ್ಟ್ರಾನಿಕ್ಸ ಮತ್ತು ಇಲೆಕ್ಟ್ರೀಕ್ ವಿಭಾಗದ ಮುಖ್ಯಸ್ಥರಾದ ಪ್ರೊ ಮುತ್ಯಂಜಯ ಆಸ್ಪಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಪ್ರೋ ಅಕ್ಷಯ ಆಸ್ಪಲ್ಲಿ ಕಾರ್ಯಕ್ರಮ ನಿರೂಪಿಸಿದರು