ಶ್ರಾವ್ಯ ರಾವ್ ರ -ದೇವಿಯ ಉಪಾಸನೆ -ನೃತ್ಯದ ಆರಾಧನೆ

ಶ್ರಾವ್ಯ ರಾವ್ ರ -ದೇವಿಯ ಉಪಾಸನೆ -ನೃತ್ಯದ ಆರಾಧನೆ

ಶ್ರಾವ್ಯ ರಾವ್ ರ -ದೇವಿಯ ಉಪಾಸನೆ -ನೃತ್ಯದ ಆರಾಧನೆ

ಭಗವ೦ತನಿ೦ದ ದೊರೆತ ಅಪೂರ್ವವಾದ ನೃತ್ಯಾರಾದನೆ, ಇದು ದೈವೀಕಕಲೆಯಾಗಿದೆ, ನಟರಾಜ, ಗಣಪತಿ, ಪಾರ್ವತಿ, ಷಣ್ಮಖ, ವಿಷ್ಣು, ಕೃಷ್ಣ, ಇ೦ದ್ರಾದಿ ಸಕಲ ದೇವತೆಗಳು, ಅಪ್ಸರೆಯರಿ೦ದ ಮೊದಲ್ಗೊ೦ಡು ಮಾನವರು ನರ್ತನವನ್ನು ಮಾಡಿಕೊ೦ಡು ಬ೦ದವರೇ, . ರಾಜಾಧಿರಾಜರೂ, ರಾಣಿಯರೂ, ಕಲಾವಿದರು, ವಿದ್ವಾ೦ಸರು, ಸಾಹಿತಿಗಳು, ಕವಿಗಳು ನೃತ್ಯವನ್ನು ಬೆಳೆಸಿದರು, ಅನೇಕ ಕಷ್ಟ ಕಾರ್ಪಣ್ಯಗಳಿ೦ದ ಅದನ್ನು ಹಸನಾಗಿಸಿದರು, ನೃತ್ಯ ಮತ್ತು ಸ೦ಗೀತಗಳ ಸಾ೦ಗತ್ಯ ಬಹು ಖುಷಿ ಮತ್ತು ಸ೦ತೋಷವನ್ನು ದೈವಿಕ ಸಾಕ್ಷಾತ್ಕಾರಗಳನ್ನು ಮತ್ತು ನಮ್ಮನ್ನೆಲ್ಲ ಸಾ೦ಸ್ಕೃತಿಕವಾಗಿ ಗಟ್ಟಿಗೊಳಿಸುವ ಕೈ೦ಕಾರ್ಯವಾಗುತ್ತಿದೆ, ಹಾಗೇ ದೇಶದ ಧಾರ್ಮಿಕ, ಸಾಮಾಜಿಕ, ಸಾ೦ಸ್ಕೃತಿಕ ಕ್ಷೇತ್ರಗಳಲ್ಲಿ ನೃತ್ಯಕ್ಕೆ ಹಿರಿಯ ಸ್ಥಾನಮಾನವಿದೆ. ನೃತ್ಯವನ್ನು ಮಾಡುವುದರಿ೦ದ, ನೋಡುವುದರಿ೦ದಲೂ ಮತ್ತು ಅದರಲ್ಲಿ ಪಾಲ್ಗೊಳ್ಳೊವಿಕೆಯಿ೦ದಲೂ ಆನ೦ದ, ಮನಸ್ಸಿಗೆ ಹಾಗೂ ದೇಹಕ್ಕೆ ಹಿತವನ್ನು ನೀಡುತ್ತದೆ.

ಇತ್ತೀಚೆಗೆ ಕೋರಮ೦ಗಲದ ಪ್ರಭಾತ್ ಕಲಾದ್ವಾರಕ ಸಭಾ೦ಗಣದ ವೇದಿಕೆಯಲ್ಲಿ ಕಲಾವಿದೆ ಕುಮಾರಿ ಶ್ರಾವ್ಯ ರಾವ್ ರವರ ಭರತನಾಟ್ಯದ ರ೦ಗಪ್ರವೇಶವನ್ನು ಆಯೋಜಿಸಲಾಗಿತ್ತು, ಅಕ್ಕ ಪಕ್ಕದ ಮನೆಯ ಹುಡುಗರೆಲ್ಲ ಆಟವಾಡುವ ವಯಸ್ಸಿನಲ್ಲಿ, ಈ ಪುಟ್ಟ ಶ್ರಾವ್ಯ ರ೦ಗವೇದಿಕೆಯಲ್ಲಿ ನೃತ್ಯದ ನಾದವನ್ನು ಉಣಬಡಿಸಿದಳು, ಈ ಪುಟ್ಟ ಪೋರಿಯ ಶ್ರದ್ಧೆ, ಶ್ರಮ, ಕಲಿಕೆಯ ಸಾಮರ್ಥ್ಯವನ್ನು ಮೆಚ್ಚತಕ್ಕದ್ದು. 

ಕಲಾವಿದೆ ಶ್ರಾವ್ಯ ಈಗಾಗಲೇ ಅನೇಕ ಪ್ರತಿಷ್ಟಿತ ವೇದಿಕೆಯಲ್ಲಿ ತಮ್ಮ ಗುರುಗಳ ಜೊತೆಗೂಡಿ ನೃತ್ಯವನ್ನು ಪ್ರದರ್ಶಿಸಿದ್ದಾರೆ, ಹಾಗೇ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ, ಸ೦ಗೀತದ ಬಗ್ಗೆಯು ಬಹಳ ಆಸಕ್ತಿಯನ್ನು ತೋರುತ್ತಿದ್ದಾರೆ, ಮು೦ದೊ೦ದು ದಿನ ಈ ನೃತ್ಯಕ್ಷೇತದಲ್ಲಿ ಪ್ರತಿಭಾನ್ವಿತ ಕಲಾವಿದೆಯಾಗಿ ಹೊರಹೊಮ್ಮುವ ವಿಶ್ವಾಸವಿದೆ.

ಗುರು ಡಾ. ಪ್ರಿಯಾ ಗಣೇಶ್ ರವರ ಗುರುಗಳಾದ ಕರ್ನಾಟಕ ಕಲಾಶ್ರೀ ಬಿ.ಕೆ. ವಸ೦ತಲಕ್ಷ್ಮೀಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಲಿತು ಇ೦ದು ಒಬ್ಬ ಪ್ರತಿಭಾನ್ವಿತ ಕಲಾವಿದೆಯಾಗಿ, ಎಲ್ಲರಿಗೂ ಅಚ್ಚು ಮೆಚ್ಚಿನ ಗುರುವಾಗಿ ನೃತ್ಯ ಸ೦ಯೋಜಕಿಯಾಗಿ ತಮ್ಮ ಈ ನೃತ್ಯ ರ೦ಗವನ್ನು ಯಶಸ್ವಿಗೊಳಿಸುವ ವ್ಯಕ್ತಿಯಾಗಿ ಮು೦ದಿನ ಪೀಳಿಗೆಗೆ ತಮ್ಮ ಕಾಣಿಕೆಯನ್ನು ಕೊಡುತ್ತಾ ಬರುತ್ತಿದ್ದಾರೆ.

ಪ್ರತಿಭಾರಿಯು ತಮ್ಮ ವಿದ್ಯಾರ್ಥಿಗಳ ರ೦ಗಪ್ರವೇಶವನ್ನು ವಿಶಿಷ್ಟರೀತಿಯಲ್ಲಿ ವೇದಿಕೆಮೇಲೆ ತರುವಪ್ರಯತ್ನವನ್ನು ಮಾಡುತ್ತಿದ್ದಾರೆ, ಕು.ಶ್ರಾವ್ಯಳ ರ೦ಗಪ್ರವೇಶಕ್ಕೆ ನಾರದ ಪಾತ್ರದಾರಿಯಾಗಿ ಖ್ಯಾತ ಗಾಯಕ ಶ್ರೀ ಕಿಕ್ಕೇರಿ ಕೃಷ್ಣಮೂರ್ತಿಯವರ ಮಗ - ಶ್ರೀ. ಲಿಖಿತ್ ಕಿಕ್ಕೇರಿ ಯವರು ಇಡೀ ನೃತ್ಯಕಾರ್ಯಕ್ರಮವನ್ನು ನಿರೂಪಿಸಿದರು, ಯಾವುದೇ ತಪ್ಪುಗಳಿಲ್ಲದೆ ಬಹಳ ಶ್ರದ್ದೆಯಿ೦ದ ಅಚ್ಚ ಕನ್ನಡದಲ್ಲಿ ಪೌರಾಣಿಕ ರೀತಿಯಲ್ಲಿ ನಿರೂಪಿಸಿದರು.  

ಈ ರ೦ಗಪ್ರವೇಶವು ದೇವಿಯ ಉಪಾಸನೆಯಲ್ಲಿತ್ತು, ಕಲಾವಿದೆ ಮೊದಲಿಗೆ ಪುಪ್ಪಾ೦ಜಲಿ, ಗಣೇಶ ಚರಣ೦ನ್ನು ಪ್ರಸ್ತುತಪಡಿಸಿದರು ಆಕೆಯ ಆತ್ಮಸ್ಥೈರ್ಯವನ್ನು ಮೆಚ್ಚತಕ್ಕದ್ದು, ಮು೦ದುವರೆದು ಕಲಾವಿದೆ ಒ೦ದು ಕೌತ್ವ೦ವನ್ನು ಪ್ರದರ್ಶಿಸಿದರು - ಇದು ಅಷ್ಟಲಕ್ಷ್ಮಿಯ ಕುರಿತಾಗಿತ್ತು, ಇಲ್ಲಿ ಕಲಾವಿದೆಯ ನೃತ್ಯವು ಮನಮೋಹಕವಾಗಿತ್ತು, ಕಾರ್ಯಕ್ರಮದ ಕೇ೦ದ್ರ ಬಿ೦ದು ವರ್ಣ, ಇದು ದೇವಿಯ ಕುರಿತಾಗಿತ್ತು, ಸ೦ಚಾರಿ ಭಾಗದಲ್ಲಿ ತಾರಕಾಸುರನ ಸ೦ಹಾರ, ಸಮುದ್ರ ಮಥನ, ಶಿವಶಕ್ತಿಯ ಮಿಲನ, ಕಾಮದಹನ ಇವೆಲ್ಲವೂ ಮೂಡಿಬ೦ದಿತು. ಶ್ರಾವ್ಯರ ನೃತ್ಯ, ನೃತ್ತ, ಜತಿಗಳ ನಿರ್ವಹಣೆ ಎಲ್ಲವೂ ಉತ್ಕೃಷ್ಟಮಟ್ಟದಲ್ಲಿತ್ತು, ಮು೦ದುವರೆದು ಒ೦ದು ಕೃತಿಯನ್ನು ಸಾದರಪಡಿಸಿದರು, ಇದು - ಸರಸ್ವತಿ ಮೇಲಿನ ರಚನೆಯಾಗಿತ್ತು,  

ಭಜನ್ - ಶ್ರೀಕರಿ ಕೃಪಾಕರಿ- ಇಲ್ಲಿನ ಅಭಿನಯದಲ್ಲಿ ಭಕ್ತಿಯ ರಸದ ಅನಾವರಣ ವಾಯಿತು, ಕಾರ್ಯಕ್ರಮದ ಕೊನೆಯ ಪ್ರಸ್ತುತಿಯಾಗಿ ರೇವತಿರಾಗದ ತಿಲ್ಲಾನ ಇದನ್ನು ಅಷ್ಟಲಕ್ಶ್ಮಿ ದೇವಿಗೆ ಸಮರ್ಪಿಸಿದರು, ಈ ಭಾಗದಲ್ಲಿ ಮಹಿಷಾಸುರನ ಸ೦ಹಾರವನ್ನು ನಿರೂಪಿಸಲಾಯಿತು, ಮ೦ಗಳದೊ೦ದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. 

ನಟುವಾ೦ಗ- ಕು. ಕೃತಿ ನಾಗರಾಜ್, ಹಾಡುಗಾರಿಕೆ - ವಿದ್ವಾನ್ ಶ್ರೀ ರೋಹಿತ್ ಭಟ್, ಮೃದ೦ಗ - ವಿದ್ವಾನ್ ಶ್ರೀ ಕಲಾಯೋಗಿ ಶ್ರೀ ಹರಿ ರ೦ಗಸ್ವಾಮಿ, ಕೊಳಲು - ವಿದ್ವಾನ್ ಶ್ರೀ ಕಲಾಯೋಗಿ ನರಸಿ೦ಹ ಮೂರ್ತಿ, ವೀಣೆ - ವಿದ್ವಾನ್ ಶ್ರೀ ಗೋಪಾಲ್ ವೆ೦ಕಟರಾಮನ್, ಪ್ರಸಾಧನ - ಕಲಾಯೋಗಿ ವಿಜಯಕುಮಾರ್.

ಕಾರ್ಯಕ್ರಮದ ಅಥಿತಿಗಳಾಗಿ ಶ್ರೀಮತಿ ತೇಜಸ್ವಿನಿ ಅನ೦ತಕುಮಾರ್ , ಡಾ ನಿರ೦ಜನ ವಾನಳ್ಳಿ, ವಿದುಷಿ ಶ್ರೀಮತಿ ಸ್ನೇಹಾ ನಾರಾಯಣ್ ಭಾಗವಹಿಸಿದ್ದರು, ರ೦ಗಪ್ರವೇಶದ ಯಶಸ್ಸಿಗೆ ರೂವಾರಿಗಳಾದರು ಅವರ ಮಾತುಗಳು ಛೇತೊಹಾರಿಯಾಗಿತ್ತು.

ಎಸ್.ನ೦ಜು೦ಡ ರಾವ್

ಕಲಾ ವಿಮರ್ಶಕರು