ಕಂಬಾಳಿಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

ಕಂಬಾಳಿಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ
ತೆಕ್ಕಲಕೋಟೆ (ಬಳ್ಳಾರಿ): ತೆಕ್ಕಲಕೋಟೆಯ ಪ್ರಸಿದ್ಧ ಕಂಬಾಳಿಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ (69) ಅವರು ಬುಧವಾರ ಲಿಂಗೈಕ್ಯರಾದರು.
1971ರಲ್ಲಿ ಕೇವಲ 16 ನೇ ವಯಸ್ಸಿನಲ್ಲಿ, ಉಜ್ಜಯಿನಿ ಸದ್ಧರ್ಮ ಪೀಠದ ಲಿಂಗೈಕ್ಯ ಸಿದ್ದೇಶ್ವರ ಭಗವತ್ಪಾದ ಸ್ವಾಮೀಜಿಗಳಿಂದ ಶಿವಾಚಾರ್ಯ ದೀಕ್ಷೆ ಹಾಗೂ ಗುರು ಪಟ್ಟಾಧಿಕಾರವನ್ನು ಪಡೆದಿದ್ದ ಅವರು, ಆ ಬಳಿಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ್ದರು.
ಸ್ವಾಮೀಜಿಯವರ ಅಂತಿಮ ಸಂಸ್ಕಾರವನ್ನು ತೆಕ್ಕಲಕೋಟೆ ಪಟ್ಟಣದ ಶ್ರೀ ಸದ್ಧರ್ಮ ಜ್ಞಾನ ಚೇತನ ಆವರಣದ ಹೊಸಮಠದಲ್ಲಿ ಇಂದು (ಬುಧವಾರ) ಸಂಜೆ 5 ಗಂಟೆಗೆ ವೀರಶೈವ ಧರ್ಮ ವಿಧಿ ಪ್ರಕಾರ ನೆರವೇರಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.
ಅಂತಿಮ ಸಂಸ್ಕಾರದಲ್ಲಿ ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಪೀಠಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.
ಕಲ್ಯಾಣ ಕರ್ನಾಟಕ ಶಿವಾಚಾರ್ಯರು ಹಾಗೂ ಶ್ರೀನಿವಾಸ ಸರಡಗಿ ,ಚಿಕ್ಕ ವೀರೇಶ್ವರ ಹಿರೇಮಠದ ಪೀಠಾಧಿಪತಿಗಳಾದ ಷ.ಬ್ರ. ರೇವಣಸಿದ್ದ ಶಿವಾಚಾರ್ಯರು ಸಂತಾಪ ಸೂಚಿಸಿದ್ದಾರೆ.