ಇಂದು, ರಾಷ್ಟ್ರೀಯ ಗೀತೆ ಹಾಡಿ, 76 ನೇ ನೈಜ ಕ. ಕ. ಮರು ಸ್ವಾತಂತ್ರೋತ್ಸವ ದಿನ ಆಚರಿಸಿದ ಕರ್ನಾಟಕ ಯುವಜನ ಒಕ್ಕೂಟದ
ಇಂದು, ರಾಷ್ಟ್ರೀಯ ಗೀತೆ ಹಾಡಿ, 76 ನೇ ನೈಜ ಕ. ಕ. ಮರು ಸ್ವಾತಂತ್ರೋತ್ಸವ ದಿನ ಆಚರಿಸಿದ ಕರ್ನಾಟಕ ಯುವಜನ ಒಕ್ಕೂಟದ
ಕಲಬುರಗಿ : ಇಂದು, ಬೆಳಿಗ್ಗೆ 9 ಗಂಟೆಗೆ ರಾಷ್ಟ್ರೀಯ ಗೀತೆ ಹಾಡಿ, 76 ನೇ ನೈಜ ಕ. ಕ. ಮರು ಸ್ವಾತಂತ್ರೋತ್ಸವ ದಿನ ಆಚರಿಸಿದ ಕರ್ನಾಟಕ ಯುವಜನ ಒಕ್ಕೂಟದ .
ನಂತರ ನಿವೃತ್ತ ಶಿಕ್ಷಕರು ಹಾಗೂ ಹಿರಿಯರಾದ ಶ್ರೀ. ಎಸ್.ಎ. ಪಾಟೀಲ ನೈತ್ರುತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ನ್ಯಾಯವಾದಿಗಳಾದ ಶಿವಲಿಂಗಪ್ಪಾ ಅಷ್ಟಗಿ , 13 ತಿಂಗಳು 3 ದಿನದ ನಂತರ ನಿಜಾಮ 18 ನೇ ಸೆಪ್ಟೆಂಬರ್ ರಂದು ಜೆ. ಎನ್ ಚೌಧರಿ ಮತ್ತು ಕೇಂದ್ರ ಗೃಹ ಸಚಿವ ಸರದಾರ ವಲ್ಲಭಭಾಯಿ ಪಟೇಲರಲ್ಲಿ ತಲೆಭಾಗಿ ಶರಣಾಗಿ ತನ್ನ ಒಟ್ಟು ಮಂತ್ರಿ ಮಂಡಲವನ್ನು ಹಸ್ತಾತರಿಸಿದನು. ಅಲ್ಲದೆ ತನ್ನ ಪ್ರಜೆ ಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿದೆನೆ ಎಂದು ಹೇಳಿ, ಇನ್ನೂ ಮುಂದೆ ಭಾರತದ ಪ್ರಜೆಗಳಾಗಿದ್ದಿರಿ, ಭಾರತದ ಕಾನೂನಿಗೆ ತಲೆ ಬಾಗಬೇಕು ಎಂದು ಕೋರುತೇನೆ ಅಲ್ಲದೆ ಈ ನಿಟ್ಟಿನಲ್ಲಿ ನಾನು ಅದೇಶಿಸಿದ್ದೇನೆ ಎಂದು ತಿಳಿಸಿದರು ಎಂಭ ಲಿಖಿತ ಧಾಖಲೆ ಪರಿಗಣಿಸಿ ಸೆಪ್ಟೆಂಬರ್ 18 ರಂದು ಈ ಭಾಗ ವಿಲೀನವಾದ ಕುರಿತು "ಮರು ಸ್ವಾತಂತ್ರೋತ್ಸವ" ಆಚರಿಸಿ ಹೋರಾಟಗಾರರಿಗೆ ನಮನ ಸಲ್ಲಿಸಲಾಯಿತು ಹೇಳಿದರು.
. 371 ಜೇ. ತಿದ್ದುಪಡಿ ಮಾಡಿದಂತೆ ಕೇಂದ್ರ ಸರಕಾರ ಕೂಡಾ ಧಾಖಲೆ ಪರಿಗಣಿಸಿ ರಾಜ್ಯ ಸರ್ಕಾರದ ಮೂಲಕ 15 ಆಗಸ್ಟ್ ರಂತೆ ಈ ಭಾಗಕ್ಕೆ ರಜೆ ಘೋಷಣೆ ಮಾಡಿ ಆಚರಿಸಲು ನಿರ್ದೇಶನ ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷರಾದ ಅನಂತ ಗುಡಿ ಆಗ್ರಹಿಸಿದರು, ಮೊದಲಿಗೆ ಒಕ್ಕೂಟದ ರಾಜ್ಯ ಸಂಚಾಲಕರು ಜೆ. ವಿನೋದ ಕುಮಾರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ವಿಭಾಗೀಯ ಅಧ್ಯಕ್ಷರಾದ ಉದಯಕುಮಾರ ಜೇವರ್ಗಿ ಮಾತನಾಡಿ, ಪ್ರಸ್ತುತ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಮತಿ ಶಾಲಿನಿ ರಜನೀಶ್ ರವರು ಈ ಭಾಗದಲ್ಲಿ ಸೇವೆ ಸಲ್ಲಿಸಿ ಹೋಗಿದ್ದಾರೆ ನಮ್ಮ ಮನವಿ ಯನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಬೇಕು ಮತ್ತು ಮುಂದಿನ ವರ್ಷ ಸೆಪ್ಟೆಂಬರ್18 ನೈಜ ಮರು ಸ್ವಾತಂತ್ರೋತ್ಸವ ಎಂದು ತಿದ್ದುಪಡಿ ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನ್ಯಾಯವಾದಿ ರಾಘವೇಂದ್ರ ಕುಲಕರ್ಣಿ ಮಾತನಾಡಿ ಪ್ರಸ್ತುತ ಮುಖ್ಯಮಂತ್ರಿ ಒಬ್ಬರು ನ್ಯಾಯವಾದಿ ಯಾಗಿದ್ದು ಕಾನೂನಾತ್ಮಕವಾಗಿ ಸರಿಪಡಿಸಿ, ಹೇಗೆ ಯಡಿಯೂರಪ್ಪ ಕ.ಕ ನಾಮಕರಣ ಗೊಳಿಸಿ ಉತ್ಸವ ಆಚರಿಸಲು ಆದೇಶಿಸಿದ್ದಾರೆ ಅದೇ ರೀತಿ ತಮ್ಮ ಹೆಸರು ಕೂಡಾ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಹೇಳಿದರು.
ನಂತರ ಹಿರಿಯ ನ್ಯಾಯವಾದಿ ಭಂಡಾರಿ ರಾಜಗೋಪಾಲ ವಂದಿಸಿದರು. ಒಕ್ಕೂಟದ ಕಾರ್ಯದರ್ಶಿ ಜಗನ್ನಾಥ ಮಂಠಾಲೆ ಘೋಷಣೆಗಳು ಕೂಗಿದರು, ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.