ನವೆಂಬರ್ 2 ರಿಂದ ಪುರಾಣ ಪ್ರಾರಂಭ

ನವೆಂಬರ್ 2 ರಿಂದ ಪುರಾಣ ಪ್ರಾರಂಭ

ನವೆಂಬರ್ 2 ರಿಂದ ಪುರಾಣ ಪ್ರಾರಂಭ

ಶಹಾಪುರ : ತಾಲೂಕಿನ ಸಗರ ಗ್ರಾಮದ,ನಾಗಠಾಣ ಹಿರೇಮಠದಲ್ಲಿ ನವಂಬರ್ 2 ರಿಂದ 20 ರವರೆಗೆ ಪ್ರತಿನಿತ್ಯ ಸಾಯಂಕಾಲ 7:00 ಗಂಟೆಗೆ ಮಹಾದಾಸೋಹಿ ಕಲಬುರಗಿ ಶರಣಬಸವೇಶ್ವರರ ಮಹಾಪುರಾಣ ಪ್ರಾರಂಭಗೊಳ್ಳಲಿದೆ ಎಂದು ಮಠದ ಪೀಠಾಧಿಪತಿಗಳಾದ ಶ್ರೀ ಸೋಮೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ.

ಜೇರಟಗಿ - ಗದಗದ ಪುರಾಣ ಪ್ರವಚನಕಾರರಾದ ಶ್ರೀ ವೇದಮೂರ್ತಿ ಮಡಿವಾಳಯ್ಯ ಶಾಸ್ತ್ರಿಗಳು ನಡೆಸಿಕೊಡಲಿದ್ದು,ಗಾನ ಚತುರ ವೀರಭದ್ರಯ್ಯ ಹಿರೇಮಠ ಕಟ್ಟಿಸಂಗಾವಿ ಸಂಗೀತ ಪ್ರಸ್ತುತಪಡಿಸಲಿದ್ದಾರೆ,ಜೊತೆಗೆ ತಬಲವಾದನವನ್ನು ರಾಜಶೇಖರ ಕಟ್ಟಿಸಂಗಾವಿ ಸಾಥ್ ನೀಡಲಿದ್ದಾರೆ.

ಶ್ರೀಮಠದ ಧಾರ್ಮಿಕ ವಿಶೇಷ ಕಾರ್ಯಕ್ರಮಗಳಲ್ಲಿ ಸಗರ ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು ಮನದಿಂದ ಸೇವೆ ಸಲ್ಲಿಸಿ ದರ್ಶನ ಪಡೆದು ಪುನೀತರಾಗಬೇಕೆಂದು ತಿಳಿಸಿದರು.