ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಸ್ಮಾರ್ಟ್ ಆಗಿರಲಿ
ಕಲಬುರಗಿಯಲ್ಲಿ ಶನಿವಾರ ನಡೆದ ಎಂ.ಎನ್. ದೇಸಾಯಿ ಕಾಲೇಜಿನ ಪದವಿ ವಿದ್ಯಾರ್ಥಿಗಳ ಸಮಾರಂಭನವನ್ನು ಐಪಿಎಸ್ ಅಧಿಕಾರಿ ಕು. ಬಿಂದುಮಣ ಉದ್ಘಾಟಿಸಿದರು.
ಎಂ.ಎನ್. ದೇಸಾಯಿ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಸ್ಮಾರ್ಟ್ ಆಗಿರಲಿ
ಕಲಬುರಗಿ: ವಿದ್ಯಾರ್ಥಿಗಳು ಪಿಯುಸಿ ಹಂತದಿಂದಲೇ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯಾರಿ ನಡೆಸಬೇಕು. ಸ್ಮಾರ್ಟ್ ಆಗಿ ಸಿದ್ಧತೆ ಕೈಗೊಂಡಾಗ ಮಾತ್ರ ಉನ್ನತ ಸಾಧನೆಯೊಂದಿಗೆ ಉನ್ನತ ಹುದ್ದೆಗೇರಲು ಸಾಧ್ಯ ಎಂದು ಕಲಬುರಗಿ ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ, ಐಪಿಎಸ್ ಅಧಿಕಾರಿ ಕು. ಬಿಂದುಮಣ ಆರ್.ಎನ್ ಹೇಳಿದರು.
ನಗರದ ಕನ್ನಡ ಭವನದ ಸುವರ್ಣಾ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದ ಬಿ.ಎ. ಮತ್ತು ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯುಪಿಎಸ್‌ಸಿ ಪರೀಕ್ಷೆಗೆ ಯಾವುದೇ ನಿರ್ದಿಷ್ಟ ಪಠ್ಯಕ್ರಮ ಇರುವುದಿಲ್ಲ, ನಮ್ಮ ಸುತ್ತಮುತ್ತ ನಡೆಯುವ ಎಲ್ಲ ಸಂಗತಿಗಳನ್ನು ಕರಗತ ಮಾಡಿಕೊಂಡಿರಬೇಕು. ಸಮಯದ ಪ್ರಜ್ಞೆಯೊಂದಿಗೆ ಸದೃಢ ಮನಸ್ಸು, ಸಧೃಢ ಆರೋಗ್ಯ ಕಾಪಾಡಿಕೊಂಡು ನಿರಂತರ ಅಧ್ಯಯನಶೀಲರಾಗಬೇಕು ಎಂದ ಅವರು, ಇಡೀ ದೇಶದಲ್ಲಿ ಅತಿ ಹೆಚ್ಚು ಪಾರದರ್ಶಕ ನಡೆಯುವ ಪರೀಕ್ಷೆ ಇದಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ತಪ್ಪು ಕಲ್ಪನೆ, ಅಡ್ಡ ಮಾರ್ಗ ಇಟ್ಟುಕೊಳ್ಳದೆ ನೇರವಾಗಿ ಅಭ್ಯಸಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸಲಹೆ ನೀಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಹೂವಿನಹಳ್ಳಿಯ ಗೋಣ ರುದ್ರೇಶ್ವರ ಹಿರೇಮಠದ ಪೂಜ್ಯ ಡಾ. ಗುರುಲಿಂಗಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಭೀಮಾಶಂಕರ ಫಿರೋಜಾಬಾದ್, ದತ್ತಾತ್ರೇಯ ಪಾಟೀಲ್ , ಸಾಮಾಜಿಕ ಚಿಂತಕ ಚಂದ್ರಕಾಂತ ಸಿರಗಾಪುರ, ಗುಲಬರ್ಗಾ ವಿವಿ ಸಿಂಡಿಕೇಟ್ ಸದಸ್ಯರಾದ ಉದಯ ಪಾಟೀಲ್, ನಿವೃತ್ತ ಶಿಕ್ಷಕ ಸಿದ್ಧಣ್ಣ ಚಂದ್ರಶೇಖರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಕಾಶ ರಾಠೋಡ, ಸಂಸ್ಥೆಯ ಸಂಸ್ಥೆಯ ಅಧ್ಯಕ್ಷ ಸಂದೀಪ ದೇಸಾಯಿ, ಕಾರ್ಯದರ್ಶಿ ಜಗನ್ನಾಥ ಪೂಜಾರಿ, ಕಸಾಪ ತಾಲೂಕು ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಯಲ್ಲಾಲಿಂಗ ಪೂಜಾರಿ ಮತ್ತಿತರರಿದ್ದರು. ಸಂಸ್ಥೆಯ ಗೌರವ ಅಧ್ಯಕ್ಷ ಚಂದ್ರಕಾಂತ ದೇಸಾಯಿ ಅಧ್ಯಕ್ಷತೆವಹಿಸಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಮಂಜುನಾಥ ಬನ್ನೂರ್, ಉಪನ್ಯಾಸಕರಾದ ನಾಗರಾಜ್ ಪಟ್ಟಣಕರ್, ಶಿವಶರಣಪ್ಪ ಪೂಜಾರಿ, ಕಾರ್ತಿಕ ಹಳಿಮನಿ, ಸಂತೋಷ ಹೂಗಾರ, ನೀಲಕಂಠ ಅಣಕಲ್, ರಾಧಿಕಾ ಗುತ್ತೇದಾರ್, ಡಾ. ನಾಗವೇಣ , ರೇಷ್ಮಾ ಬಿ. ಚವ್ಹಾಣ, ಸುಜಾತಾ ಕುಲಕಣ ð, ನೀಲಮ್ಮ ಜೀವಣಗಿ, ಶ್ರೀದೇವಿ ಹಿರೇಮಠ, ಅಶ್ವಿನಿ ಪಾಟೀಲ್, ರಶ್ಮಿ ಪಾಟೀಲ್, ಶಿಲ್ಪಾ ಚಟ್ಟಿ, ಗೀತಾ, ಪ್ರಿಯಾಂಕ್ ಮಡಿವಾಳ, ಮೇಘಾ, ಕಾಶೀನಾಥ ಮರತೂರ್ ಮತ್ತಿತರರಿದ್ದರು. ಮಾಯದೇವಿ ನಿರೂಪಿಸಿದರು. ಆಫ್ರೀನ್ ಬೇಗಂ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಗತಿ ಪರ ರೈತ ಬಸವರಾಜ ಹಚ್ಚಡ, ಮಹಿಳಾ ಸಾಧಕಿ ಮಹಾದೇವಿ ನಂದಿಕೋಲಮಠ, ಕುಮಸಿವಾಡಿಯ ಪ್ರೌಢಶಾಲೆ ಮುಖ್ಯಗುರು ಭೀಮಶಾ ಮೂಲಗೆ, ಶಿಕ್ಷಕ ಸುಧೀರ ಜಗತಿ, ದೃಶ್ಯ ಛಾಯಾಗ್ರಾಹಕ ಶರಣಬಸಪ್ಪ ಬನ್ನೂರ್ ಅವರನ್ನು ಸನ್ಮಾನಿಸಲಾಯಿತು.