ಬಲವೆ ಜೀವನದ ಗುರಿಯಾಗಬೇಕು :ಎಂ. ವೈ ಪಾಟೀಲ

ಬಲವೆ ಜೀವನದ ಗುರಿಯಾಗಬೇಕು :ಎಂ. ವೈ ಪಾಟೀಲ

ಬಲವೆ ಜೀವನದ ಗುರಿಯಾಗಬೇಕು :ಎಂ. ವೈ ಪಾಟೀಲ

 ವ್ಯಕ್ತಿ ತನ್ನ ವ್ಯಕ್ತಿತ್ವ ಬೆಳೆಸಿಕೊಳ್ಳುವಲ್ಲಿ ಗುಣ, ನಡತೆ,ವಿಚಾರಗಳು,ತುಂಬಾ ಪೂರಕವಾಗಿರಬೇಕು ಬಲವೇ ಜೀವನದ ಗುರುವಾಗಿರಬೇಕು.ಎಂದು ಅಬ್ಜಲ್ಪುರ್ ಮತಕ್ಷೇತ್ರದ ಶಾಸಕರಾದ ಎಂ.ವೈ. ಪಾಟೀಲ ಅವರು ನುಡಿದರು. ಜಯನಗರ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಹಮ್ಮಿಕೊಂಡ ಎಸ್‌.ವಿ.ಹತ್ತಿ ಅವರ ಅಭಿನಂದನ ಹಾಗೂ ಶಿವಾನಂದಾ ಗ್ರಂಥ ಬಿಡುಗಡೆಗೊಳಿಸುತ್ತಾ ಬಿಡುಗಡೆಗೊಳಿಸಿ ಮಾತನಾಡುತ್ತಾ 

 ನೈತಿಕ ಬಲ,ಜ್ಞಾನ ಬಲ, ಗುಣ ಬಲ, ಮತ್ತು ನಡತೆ ಬಲಗಳು ವ್ಯಕ್ತಿತ್ವ ಪ್ರಖರವಾಗಿ ಬೆಳೆಯಲು ಮತ್ತು ಗಟ್ಟಿಗೊಳಿಸುವಲ್ಲಿ ಪುಷ್ಠಿಯಾಗಿರುತ್ತವೆ. ಇದರೊಂದಿಗೆ ಕುತೂಹಲತೆ ತುಂಬಾ ಪರಿಣಾಮಕಾರಿಯಾಗಿ ಕಲಿಕೆಯ ದಿಶೆಯಲ್ಲಿ ಸಾಗಿಸುತ್ತದೆ ವ್ಯಕ್ತಿತ್ವರೂಪ ಗೊಳ್ಳಲು ಮತ್ತು ಬೌದ್ಧಿಕವಾಗಿ ಬೆಳೆಯಲು ಉತ್ತಮ ಗುಣಗಳಲ್ಲಿನ ಅವಶ್ಯಕತೆ ಬಿಂಬಿಸುವಂತಹ ಅಂಶ ಎಸ್.ವಿ.ಹತ್ತಿ ಅವರಲ್ಲಿ ಎದ್ದು ಕಾಣುತ್ತದೆ. ಎಸ್‌.ವಿ ಹತ್ತಿ ಅವರನ್ನು ಬಹಳ ದಿನಗಳಿಂದ ನನಗೆ ಪರಿಚಿತರು ನಮ್ಮ ಹತ್ತಿರದ ಸಂಬಂಧಿಕರಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ವಿನಮ್ರತೆ ಮತ್ತು ಸೇವಾ ಮನೋಭಾವಕ್ಕೆ ಹೆಸರಾದರು ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸರ್ಕಾರಿ ಸೇವೆಯಲ್ಲಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದು ಸಾರ್ವತ್ರಿಕ ಸತ್ಯವಾಗಿದ್ದು, ಸಾತ್ವಿಕ ಸ್ವಭಾವದವರಾಗಿದ್ದಾರೆ. ಅನೇಕ ಪ್ರಗತಿಪರ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಇಂದು ಬಿಡುಗಡೆಗೊಂಡ ಶಿವನಂದಾ ಕೃತಿಯು ಮುಂದೆ ಬರುವ ಪೀಳಿಗೆಗೆ ಆದರ್ಶ ಪ್ರಾಯವಾಗಿದ್ದು ಅವರ ಬಲ ಇನ್ನಷ್ಟು ಹೆಚ್ಚಾಗಲಿ ಎಂದು ನುಡಿದರು.

 ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪೊಲೀಸ ಮಹಾನಿರ್ದೇಶಕರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಡಾ.ಶಂಕರ ಬಿದರಿ ಅವರು ಮಾತನಾಡಿ ಸರಳ ಮತ್ತು ಸಜ್ಜನ ವ್ಯಕ್ತಿಯಾದ ಶಿವಶಂಕರ ಹತ್ತಿಯವರ ದಕ್ಷತೆ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದಿಂದ ಆರೋಗ್ಯ ಇಲಾಖೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ ನಿವೃತ್ತಿಯ ನಂತರ ಸಾಹಿತ್ಯ, ಸಂಸ್ಕೃತಿ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಒಬ್ಬ ಸ್ನೇಹ ಮಹಿ ವ್ಯಕ್ತಿಯಾಗಿ ಬೆಳೆದಿದ್ದು ಅಲ್ಲದೆ ನನ್ನ ಸಹೋದರಿಯ ಯಜಮಾನರು ಎಂಬುದು ಹೆಮ್ಮೆಪಡುವ ವಿಷಯ ಎಂದರು.

 ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಅಪ್ಪಾರಾವ ಅಕ್ಕೋಣೆಯುವರು ಆರೋಗ್ಯ ಇಲಾಖೆಯಲ್ಲಿದ್ದುಕೊಂಡು ಹತ್ತಿ ಅವರು ಸಮಾಜವನ್ನು ಅನಾರೋಗ್ಯ ಪೀಡಿತರಾಗಲು ಬಿಡಲಿಲ್ಲ ಸಮಾಜ ಸುಧಾರಣೆಯಂತಹ ವಿಷಯಗಳು ಅವರಲ್ಲಿ ಕೇಳುತ್ತಿದ್ದೆವು. ಆರೋಗ್ಯ ಪೂರ್ಣ ಬದುಕಿಗೆ ಬೇಕಾದ ಉಭಯ ಕುಶಲೊಪರಿ ಅವರಲ್ಲಿತ್ತು ದುಷ್ಟರ ಸಹವಾಸಕ್ಕೆ ಹತ್ತಿಯವರು ಹತ್ತಿರವಾಗಿರಲಿಲ್ಲ. ಹತ್ತಿಯವರ ಬದುಕು ಹತ್ತಿರದಿಂದಲೇ ಕಂಡಿದ್ದರಿಂದ ಅಭಿನಂದನಾ ಸಮಾರಂಭ ಏರ್ಪಡಿಸಲು ನಿರ್ಧಾರ ಕೈಗೊಂಡವು ಎಂದರು. 

 ಕಾರ್ಯಕ್ರಮದ ಸಾನಿಧ್ಯವನ್ನು ಜೇರಟಗಿಯ ವಿರಕ್ತ ಮಠದ ಮ.ನಿ.ಪ್ರ.ಸ್ವ. ಶ್ರೀ ಮಹಾಂತ ಸ್ವಾಮಿಗಳು ವಹಿಸಿದ್ದು ವೇದಿಕೆ ಮೇಲೆ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖುಬಾ, ಕೆ ಎಸ್ ವಾಲಿ ಕಾಶಪ್ಪ ವಾoಜರಖೆಡ, ಡಾ ಜಿ ಯು ಹತ್ತಿ, ಶಿವನಂದಾ ಸ್ಮರಣ ಸಂಪುಟದ ಸಂಪಾದಕರಾದ ಡಾ. ಶರಣಬಸಪ್ಪ ವಡ್ಡನಕೇರಿ, ಶ್ರೀ ಎಸ್. ವಿ.. ಹತ್ತಿ, ಶ್ರೀಮತಿ ಮಹಾನಂದ ಹತ್ತಿ ಉಪಸ್ಥಿತರಿದ್ದರು. ಶಿಕ್ಷಕ ಅಂಬಾರಾಯ ಮಡ್ದೆ ಕಾರ್ಯಕ್ರಮ ನಿರೂಪಿಸಿದರೆ, ಕಲ್ಯಾಣಪ್ಪ ಬಿರಾದಾರ ಪ್ರಾರ್ಥಿಸಿದರು. ಕೆ ಎಸ್ ವಾಲಿಯವರು ವಂದಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.