ವಾಡಿ ಬಿಜೆಪಿ ಕಛೇರಿಯಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆ

ವಾಡಿ ಬಿಜೆಪಿ ಕಛೇರಿಯಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆ
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸುವ ಮೂಲಕ ಭಗೀರಥ ಮಹರ್ಷಿ ಜಯಂತಿ ಆಚರಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಸೋಲಿನಿಂದ ಧೃತಿಗೆಡದೆ, ಸತತ ಪ್ರಯತ್ನ ಮಾಡಬೇಕು. ಪ್ರಯತ್ನಕ್ಕೆ ಇನ್ನೊಂದು ಹೆಸರೇ ಭಗೀರಥರು ಎಂದರು.
ಅವರ ಸತತ ಯತ್ನದಿಂದ, ತಪಸ್ಸಿನಿಂದ, ಭೂಲೋಕದ ಜೀವರಾಶಿಗೆ ನೀರು ದೊರೆಯುವಂತಾಯಿತು.
ಭಗೀರಥನು ಬಹುದೊಡ್ಡ ಮಹಾರಾಜ. ಅವರಿಗೆ ಸಕಲ ವೈಭವಗಳಿದ್ದರೂ ಒಂದು ಕೊರಗಿತ್ತು. ಅವನ ತಂದೆ ಮತ್ತು ತಾಯಂದರಿಗೆ ದೇವಗಂಗೆಯನ್ನು ಪಡೆಯಬೇಕು ಎಂದು ಆಸೆ ಪಡುತ್ತ ಇದ್ದರು. ಅದು ಈಡೇರದೆ ಸಾವನ್ನು ಅಪ್ಪಿದ್ದರು. ಹಿರಿಯರ ಆಸೆಯನ್ನು ಈಡೇರಿಸಲು ಛಲ ಬಿಡದ ಭಗೀರಥ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡರು. ಭಗೀರಥ ಮಹರ್ಷಿ ಛಲಗಾರ ದೇವಗಂಗೆಯನ್ನು ಕುರಿತು ಘೋರವಾದ ತಪಸ್ಸು ಕೂಡ ಮಾಡಿದರು. ಅವರ ತಪಸ್ಸಿಗೆ ಮೆಚ್ಚಿ ಗಂಗೆ ಆಕಾಶದಿಂದ ಧುಮ್ಮಿಕ್ಕಿದಳು. ಶಿವನು ಅವಳನ್ನು ಜಟೆಯಲ್ಲಿ ಧರಿಸಿದ. ಅಲ್ಲಿಂದ ಅವಳು ಭೂಮಿಗಿಳಿದು ಭಗೀರಥರ ರಥದ ಹಿಂದೆ ಹರಿಯುತ್ತಾ ಹೊರಟಳು. ಮುಟ್ಟಿದ ಜಾಗವನ್ನೆಲ್ಲಾ ಪವಿತ್ರಗೊಳಿಸುತ್ತಾ ಭಗೀರಥರ ತಂದೆ ತಾಯಂದರಿಗೆ ಸ್ವರ್ಗ ಪ್ರಾಪ್ತಿಯಾಗುವ ಹಾಗೆ ಮಾಡಿದಳು. ಭಗೀರಥ ತನ್ನ ಹಠದಿಂದ ಅಸಾಧ್ಯವಾದುದನ್ನೂ ಸಾಧಿಸಿದ ಎಂದು ಪುರಾಣ ಪುಣ್ಯಕಥೆಗಳಲ್ಲಿ ನಾವು ಕಾಣುತ್ತೇವೆ.ಕಠಿಣ ಪ್ರಯತ್ನದಿಂದ ಸಾಧನೆ ಮಾಡುವುದಕ್ಕೆ ಭಗೀರಥ ಪ್ರಯತ್ನವೆಂಬ ಹೆಸರಾದುದು ಈ ಕಾರಣದಿಂದಲೇ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಅರ್ಜುನ ಕಾಳೆಕರ,ಯಮನಪ್ಪ ನವನಳ್ಳಿ,ಪ್ರಮೋದ್ ಚೊಪಡೆ,
ನಿರ್ಮಲ ಇಂಡಿ,ಯಂಕಮ್ಮ ಗೌಡಗಾಂವ, ಶರಣಮ್ಮ ಯಾದಗಿರಿ, ಉಮಾಭಾಯಿ ಗೌಳಿ,ಆಕಾಶ ಜಾಧವ,ಉಪ್ಪಾರ ಸಮಾಜದ ಅಧ್ಯಕ್ಷ ಅನಿಲ ಕುಮಾರ ನೀರಡಗಿ, ಸಮಾಜದ ಮುಖಂಡರಾದ ದತ್ತಾತ್ರೇಯ ಗೌಡಗಾಂವ, ದೇವೇಂದಪ್ಪ ನೀರಡಗಿ,ಯಂಕಣ್ಣ ಕಪ್ಪರಿ, ಶ್ರೀನಿವಾಸ ರಾಂಪೂರ ಹಳ್ಳಿ,ಶಶಿಕಾಂತ ಮೆತ್ತನ್, ಹಣಮಂತ ಕಪ್ಪರಿ,ಪದ್ಮಾವತಿ ಕಪ್ಪರಿ, ಅಣ್ಣಮ್ಮ ನೀರಡಗಿ,ಗಂಗಮ್ಮ ಕಪ್ಪರಿ ಸೇರಿದಂತೆ ಇತರರು ಇದ್ದರು .