ಸೆಪ್ಟೆಂಬರ 18 ರಂದು ಕ.ಕ.ವಿಮೋಚನ ದಿನಾಚರಣೆ ಆಚರಿಸಲು ಡಿ.ಸಿ.ಅವರಿಗೆ ವಿನೋದಕುಮಾರ ಜನೇವರಿ ಮನವಿ
ಸೆಪ್ಟೆಂಬರ 18 ರಂದು ಕ.ಕ.ವಿಮೋಚನ ದಿನಾಚರಣೆ ಆಚರಿಸಲು ಡಿ.ಸಿ.ಅವರಿಗೆ ವಿನೋದಕುಮಾರ ಜನೇವರಿ ಮನವಿ
ಕಲಬುರಗಿ : ದಿನಾಂಕ 18 ಸೆಪ್ಟೆಂಬರ 1948 ರಂದು ನಮ್ಮ ಕಲ್ಯಾಣ ನಾಡಿಗೆ ಹೈದ್ರಾಬಾದ ನಿಜಾಮರಿಂದ ಮುಕ್ತಿ ದೊರಕಿ ಭಾರತ ದೇಶದೊಡನೆ ವಿಲೀನವಾಗಿದೆ .ಕಲ್ಯಾಣ ಕರ್ನಾಟಕ ಸ್ವಾತಂತ್ರೋತ್ಸವ (ಮರು) ದಿನಾಚರಣೆಯನ್ನು ಪ್ರತಿ ವರ್ಷ ಸೆಪ್ಟೆಂಬರ 18 ರಂದು ಆಚರಿಸಬೇಕು ಎಂದು ವಿನೋದಕುಮಾರ ಜನೇವರಿ ತಿಳಿಸಿದರು.
ಹೈದ್ರಾಬಾದ ನಿಜಾಮ ಸರಕಾರದಿಂದ ಫರ್ಮಾನ್ (ಆದೇಶ) ಹೊರಡಿಸಿದ ಧೃಢೀಕೃತ ನಕಲು ಪ್ರತಿ ಉಲ್ಲೇಖ 04 ರಂತೆ ಸಲ್ಲಿಸಿದ್ದನ್ನು ಪರೀಗಣಿಸಬೇಕು, ಸದರಿ ದಾಖಲೆಯೊಂದೇ ದಿನಾಂಕ ಸೂಕ್ತತೆಯನ್ನು ಗುರುತಿಸಲು ಬಹುಮುಖ್ಯವಾದ ಸಾಕ್ಷಿಯಾಗಿದೆ. ಕಾರಣ, ಸದರಿ ದಾಖಲೆಯನ್ನು ಪರೀಗಣಿಸಿ ಇತಿಹಾಸದ ಹೆಜ್ಜೆ ಗುರುತನ್ನು ಸರಿಪಡಿಸಿ ಪ್ರತಿ ವರ್ಷದ ದಿನಾಂಕ 18 ಸೆಪ್ಟಂಬರನ್ನು ಕಲ್ಯಾಣ ಕರ್ನಾಟಕದ ಸ್ವಾತಂತ್ರೋತ್ಸವ (ಮರು) ದಿನಾಚರಣೆಯ ದಿನವನ್ನು ಆಚರಿಸುವ ಕುರಿತು ಅಧೀಕೃತವಾಗಿ ಗುರುತಿಸಿ ಪ್ರಕಟಣೆ ಹೊರಡಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿ ಅವರಿಗೆ ಕರ್ನಾಟಕ ಯುವಜನ ಒಕ್ಕೂಟ್(ನೊಂ) (ಕೆ.ವೈ.ಎಫ್) ರಾಜ್ಯ ಸಂಚಾಲಕರು ಮತ್ತು ಗುಲ್ಬರ್ಗ ಮಂಡಳಿ ಇಂದು ಮನವಿ ಸಲ್ಲಿಸಿದರು.
ದಾಖಲಾತಿ