ಹಿಂದೆ ವೈದ್ಯಕೀಯ ಕ್ಷೇತ್ರದ ಸೇವೆ ಸಾರ್ವಜನಿಕ ಸೇವೆ ಆಗಿತ್ತು. ಈಗ ವ್ಯಾಪಾರವಾಗಿ ಬಿಟ್ಟಿದೆ : ಡಾ. ಜ್ಯೋತೀರ್ಲಿಂಗ್ ಸುಗೂರ
ಹಿಂದೆ ವೈದ್ಯಕೀಯ ಕ್ಷೇತ್ರದ ಸೇವೆ ಸಾರ್ವಜನಿಕ ಸೇವೆ ಆಗಿತ್ತು. ಈಗ ವ್ಯಾಪಾರವಾಗಿ ಬಿಟ್ಟಿದೆ : ಡಾ. ಜ್ಯೋತೀರ್ಲಿಂಗ್ ಸುಗೂರ
ಚಿಂಚೋಳಿ : ಚಂದಾಪೂರದ ನವಭಾರತ ಎಜುಕೇಶನ್ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ(ರಿ) ಅಡಿಯ ನವಭಾರತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಜರುಗಿತು.
ಪಟ್ಟಣದ ವೈದ್ಯರು ಹಾಗೂ ನಿವೃತ್ತ ಪತ್ರಕರ್ತ ಡಾ. ಜ್ಯೋತಿರ್ಲಿಂಗ್ ಸುಗೂರು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಶ್ಚಿಮ್ ಬಂಗಾಳ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ, ಸೇವೆ ಸಲ್ಲಿಸಿ, ಶಿಕ್ಷಣ ಸಂಸ್ಥೆಯ ಮೂಲಕ ಉಚಿತ ಆರೋಗ್ಯ ಸೇವೆ ಸಲ್ಲಿಸಿದ್ದ ಡಾ. ಪಿ.ಸಿ.ರಾಯ ಅವರ ಜನ್ಮದಿನದ ನೆನಪಿನಲ್ಲಿ ಜುಲೈ 1 ರಂದು ರಾಷ್ಟ್ರೀಯ ವೈದ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಇವರ ಸೇವೆಗೆ ಭಾರತ ಸರಕಾರ 1961ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ, ಗೌರವಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ವೈದ್ಯರಿಗೆ ಭಾರತ ಸರಕಾರ 1976 ರಿಂದ ರಾಯ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಾ ಬರಲಾಗುತ್ತಿದೆ. ವೈದ್ಯರನ್ನು ಸಾರ್ವಜನಿಕ ಕ್ಷೇತ್ರದಲ್ಲಿ ದೇವರ ಸ್ವರೂಪಿಯಾಗಿ ಕಾಣಲಾಗುತ್ತದೆ. ಅಂದಿನ ಡಾ.ಪಿ.ಸಿ ರಾಯ ಕಾಲದಲ್ಲಿ ವೈದ್ಯರ ಸೇವೆ ಸಾರ್ವಜನಿಕ ಸೇವೆಯಾಗಿರುತ್ತಿತ್ತು. ಆದರೆ ಇಂದಿನ ವೈದ್ಯಕೀಯ ಕ್ಷೇತ್ರದ ಸೇವೆ ವ್ಯಾಪಾರವಾಗಿ ಬಿಟ್ಟಿರುವುದಕ್ಕೆ ವೈದ್ಯಕೀಯ ಕ್ಷೇತ್ರದ ರಂಗ ಜಿಗುಪ್ಸೆಗೊಳುವಂತೆ ಮಾಡಿದೆ ಎಂದರು.
ನವಭಾರತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಉಡುಪಿ ಅವರು ಮಾತನಾಡಿದರು.
ವಿಶ್ವವಾಣಿ ಪತ್ರಿಕೆ ವರದಿಗಾರ ವೆಂಕಟೇಶ ದುದ್ಯಾಲ್ ಅವರು ಮುಖ್ಯಅತಿಥಿಗಳಾಗಿ ಆಗಮಿಸಿದರು.
ಶಿಕ್ಷಕಿ ಪ್ರತಿಭಾ ಸ್ವಾಗತಿಸಿದರು. ಅನುಪಮ ಪಾಟೀಲ ನಿರೂಪಿಸಿದರೇ, ಶಿಕ್ಷಕಿ ಪ್ರಜ್ಞಾ ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಅರ್ಚನಾ.ಎಂ.ಉಡುಪಿ, ಶಿಕ್ಷಕಿ ದೀಪಿಕಾ, ಜ್ಯೋತಿಶ್ರೀ, ಭಾಗ್ಯಶ್ರೀ ಅವರು ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದರು.