ಎಸ್‌ಎಸ್‌ಎಲ್‌ಸಿ ಫಲಿತಾಂಶ: ಯಾರ ಜೇಬಿಗೆ ಸೇರಿತು ಕೆಕೆಆರ್‌ಡಿಬಿಯ 652 ಕೋಟಿ ರೂ.: ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಯಾರ ಜೇಬಿಗೆ ಸೇರಿತು ಕೆಕೆಆರ್‌ಡಿಬಿಯ 652 ಕೋಟಿ ರೂ.: ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ
ಕಲಬುರಗಿ, ಮೇ. 3- ಕಲಬುರಗಿ ಜಿಲ್ಲೆಯು ವಿಭಾಗಿಯ ಕೇಂದ್ರ, ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಮೇಡಿಕಲ್ ಹಬ್ ಎಂದೇಲ್ಲ ಸಚಿವರು ಶಾಸಕರು ಜಂಬಕೊಚ್ಚಿಕೊಳ್ಳುತ್ತಿದ್ದರು. ಎಸ್‌ಎಸ್‌ಎಲ್‌ಸಿ ಅತ್ಯಂತ ಕಳಪೆ ಫಲಿತಾಂಶದಿAದಾಗ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಡಲಾದ 652.5 ಕೋಟಿ ರೂ. ಯಾರ ಜೇಬಿಗೆ ಸೇರುತ್ತಿವೆ ಎಂದು ಬಿಜೆಪಿಯ ಓಬಿಸಿ ಮೋರ್ಚಾದ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ ಹೊರಹಾಕಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಚಧಿಗಾಗಿ 371 (ಜೆ) ಅಡಿಯಲ್ಲಿ ಕೆಕೆಆರ್‌ಡಿಬಿ ವಿಲಿನ ಮಾಡಿ ಹೆಚ್ಚಿನ ಅನುದಾನವನ್ನು ಅಂದಿನ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಹೆಚ್ಚಿನ ಅನುದಾವನ್ನು ಬಿಡುಗಡೆ ಮಾಡಿ ಕಲಬುರಗಿ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾರ್ಯ ಮಾಡಿದರು. ಮುಂದುವರೆದು ಬಿಜೆಪಿಯ ಇನ್ನೊಬ್ಬ ಮಾಜಿ ಮುಖಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕೆಕೆಆರ್‌ಡಿಬಿಗೆ 3 ಸಾವಿರ ಕೋಟಿ ಅನುದಾನವನ್ನು 5 ಸಾವಿರ ಕೋಟಿಗೆ ಏರಿಕೆ ಮಾಡಿದರು. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಸುದಾರಣೆಗಳು ಕಂಡವು.
ಕಾAಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗಿನಿAದ ಕಲ್ಯಾಣ ಕರ್ನಾಟಕದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಶೈಕ್ಷಣಿಕ ಗುಣಮಟ್ಟವು ಅತ್ಯಂತ ಕೆಳಮಟ್ಟಕ್ಕೆ ಹೋಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೆಳಿ ಬರತೊಡಗಿದವು. ಹೊಸದಾಗಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರು ಈ ಭಾಗದ ಶಿಕ್ಷಣ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆಯನ್ನು ಮಾಡುವುದಾಗಿ ಎಂದು ಹೇಳಿ ಅಕ್ಷರ ಅವಿಷ್ಕಾರ ಯೋಜನೆಯನ್ನು ಜಾರಿಗೆ ತಂದರು. ಅಭಿವೃದ್ಧಿ ಅನುದಾನದಲ್ಲಿ ಸುಮಾರು ಶೇ. 25 ರಷ್ಟು ಶಿಕ್ಷಣ ಗುಣಮಟ್ಟವನ್ನು ಸುಧಾರಣೆ ಮಾಡುಲು ಹಣವನ್ನು ಮೀಸಲಿಟ್ಟರು.
ಶಾಸಕರ ನೇತೃತ್ವದಲ್ಲಿ ತಮ್ಮ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಹೊಂದಿರುವ 50 ಶಾಲೆಗಳನ್ನು ಆಯ್ಕೆ ಮಾಡಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಮಿತಿಗಳನ್ನು ಮಾಡಿದರು. ಕ್ರಿಯಾ ಯೋಜನೆಗಳನ್ನು ರೂಪಿಸಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಘೋಷಣೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳು, ಗ್ರಂಥಾಲಯ ಡಿಜಿಟಲ್ ಅಭಿವೃದ್ಧಿ, ಪಿಠೋಪಕರಣಗಳು, ಶಾಲೆಯಲ್ಲಿ ಶೌಚಾಲಯಗಳು, ಶಾಲಾ ಕಟ್ಟಡಗಳು, ಆಟದ ಮೈದಾನ ಹೀಗೆ ಹತ್ತು ಹಲವಾರು ಕ್ರಿಯಾ ಯೋಜನೆಗಳನ್ನು ಮಾಡಲು ಹಣ ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಉತ್ತಮ ಶಿಕ್ಷಣ ನೀಡಲು ಡಾ. ಅಜಯಸಿಂಗ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕರಿಗೆ ಎಲ್ಲಾ ಸೌಕರ್ಯಗಳು ಒದಗಿಸಿದರೂ ಉತ್ತಮ ಬೋಧನೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಅನೇಕ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲು ಶಿಕ್ಷಕರು ಮನಸ್ಸು ಮಾಡುತ್ತಿಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುವ ಮಾತಾಗಿದೆ. ಕೆಲವು ಶಿಕ್ಷಕರು ರಾಜಕೀಯ ವ್ಯಕ್ತಿಗಳಂತೆ ಶಾಲೆಗೆ ಬಂದು ಹಾಜರಾತಿ ಹಾಕಿ ಶಾಸಕರ ಮನೆಯ ಮುಂದೆ ನಿಲ್ಲುವುದು ಸರ್ವೆ ಸಾಮನ್ಯವಾಗಿ ಕಾಣುತ್ತೇವೆ. ಇನ್ನೂ ಕೆಲವರು ಬಡ್ಡಿ ವ್ಯವಹಾರದಲ್ಲಿ ತೊಡಗಿಕೊಂಡವರು ಇದ್ದಾರೆ. ಬಹುತೇಕ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಓದಲು ಹಾಕುತ್ತಾರೆ. ಇದರಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್ಲಂದರಲ್ಲಿ ತಲೆಎತ್ತುತ್ತಿವೆ. ಅನೇಕ ಶಾಸಕರ, ರಾಜಕೀಯ ಮುಖಂಡರ ಶಾಲೆಗಳೇ ಇರುವುದು ಮತ್ತು ತಮ್ಮ ಶಾಲೆಗಳ ಅಭಿವೃದ್ದಿಗಾಗಿ ಶ್ರಮಿಸುವುದು ಕಾಣುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿ ಶೈಕ್ಷಣಿಕ ಗುಣಮಟ್ಟ ಹೇಗೆ ಸುಧಾರಣೆ ಕಾಣಬಹುದು? ಎನ್ನುವ ಪ್ರಶ್ನೆ. ಇನ್ನೂ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕಂಡು ಕಲಬುರಗಿ ಜನತೆ ತಮ್ಮನ್ನೆ ತಾವು ಬೈದುಕೊಳ್ಳುವಂತಾಗಿದೆ.
ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಇಂದು ಶಿಕ್ಷಣದಲ್ಲಿ ಸಂಪೂರ್ಣವಾಗಿ ನೆಲಕ್ಕಚ್ಚರಿವುದು ನಾಚಿಗೆಡಿನ ಮಾತಾಗಿದೆ ಎಂದರೆ ತಪ್ಪಾಗಲಾರದು. ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸ್ಥಳಿಯ ಶಾಕರು ಹಾಗೂ ಕೆಕೆಆರ್‌ಡಿಯ ಅಧ್ಯಕ್ಷರೇ ನೇರವಾಗಿ ಹೊಣೆಯಾಗುವುದಿಲ್ಲವೇ? ಕೆಕೆಆರ್‌ಡಿಬಿಯ ಹಣ ಯಾರ ಜೇಬಿಗೆ ಸೇರಿತ್ತಿದೆ ಎನ್ನು ಸಂಶಯ ಬರುದಿಲ್ಲವೇ?. ಶಾಸಕರೊಬ್ಬರ ಪುತ್ರನು ಅಭಿವೃದ್ಧಿಗಾಗಿ ಮೀಸಲಾದ ಹಣವನ್ನು ಶಾಲಾ ಸುಧಾರಣಗೆ ಎಂದು ವರ್ಗಾಯಿಸಿ ಅದನ್ನು ಮತ್ತಾವುದೋ ಅಭಿವೃದ್ದಿಗೆ ವರ್ಗಾವಣೆ ಯನ್ನು ಮಾಡಿಕೊಂಡು ಹಣ ಲೂಟಿ ಮಾಡಿದ್ದಾರೆ ಎನ್ನುವ ಮಾತುಗಳು ಈಗ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಕೂಡಲೆ ಶಿಕ್ಷಕರಾದವರು ತಮ್ಮ ಜವಬ್ದಾರಿಯನ್ನು ಅರಿತು ವಿದ್ಯಾರ್ಥಿಗಳು ಭವಿಷ್ಯಕ್ಕಾಗಿ ಮತ್ತು ಕಲಬುರಗಿಯ ಮಾನ ಮರ್ಯಾದೆಯನ್ನು ಕಾಪಡಾಲು ಮುಂದಾಗಬೇಕು. ಶಾಸಕರ ಮನೆಯ ಮುಂದೆ ನಿಲ್ಲುವಂತ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಾರ್ವಜನಿಕರು ಮುಂದೆ ಬರವಂತೆ ಆಗಬೇಕು. ಇನ್ನೂ ಕೆಕೆ ಆರ್‌ಡಿಬಿ ಅಧ್ಯಕ್ಷರು ಹಾಗೂ ಶಾಸಕರಾದ ಡಾ. ಅಜಯಸಿಂಗ್ ಅವರು ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಶ್ರಮಿಸಲಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ತಕ್ಕ ಪಾಠ ಮಾಡುವಂತೆ ಆಗುತ್ತದೆ ಎಂದು ಬಿಜೆಪಿಯ ಓಬಿಸಿ ಮೋರ್ಚಾದ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಒತ್ತಾಯಿಸಿದ್ದಾರೆ.