ಎಡ ಸಮುದಾಯದ ಮಾದಿಗ ಸಮುದಾಯದವರು ಒಳ ಮೀಸಲಾತಿ ಸಮೀಕ್ಷೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 61 ರಲ್ಲಿ "ಮಾದಿಗ" ಎಂದು ಕಡ್ಡಾಯವಾಗಿ ನಮೂದಿಸಿ : ಆಕಾಶ ಕೊಳ್ಳೂರ್ ಮನವಿ

ಎಡ ಸಮುದಾಯದ ಮಾದಿಗ ಸಮುದಾಯದವರು ಒಳ ಮೀಸಲಾತಿ ಸಮೀಕ್ಷೆ
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 61 ರಲ್ಲಿ "ಮಾದಿಗ" ಎಂದು ಕಡ್ಡಾಯವಾಗಿ ನಮೂದಿಸಿ : ಆಕಾಶ ಕೊಳ್ಳೂರ್ ಮನವಿ
ಚಿಂಚೋಳಿ : ನ್ಯಾಯಮೂರ್ತಿ.ಎಚ್.ಎನ್ ನಾಗಮೋಹನ್ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪರಿಷ್ಟ ಜಾತಿ ಒಳಮೀಸಲಾತಿ ವರ್ಗಿಕರಣಕ್ಕೆ ಸಂಬಂಧಪಟ್ಟಂತೆ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯುತ್ತಿದ್ದು, ಅದರಲ್ಲಿ ಪರಿಶಿಷ್ಟ ಜಾತಿಯ ಎಡ ಸಮುದಾಯದ ಮಾದಿಗ ಸಮುದಾಯದವರು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಕ್ರಮ ಸಂಖ್ಯೆ 61 ರಲ್ಲಿ "ಮಾದಿಗ" ಎಂದು ಕಡ್ಡಾಯವಾಗಿ ಬರೆಸಬೇಕು. ಸಮುದಾಯದ ಮುಂದಿನ ಪೀಳಿಗೆಯ ಏಳಿಗೆಗಾಗಿ ಮತ್ತು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಶಿಕ್ಷಣಕ್ಕಾಗಿ, ಉದ್ಯೋಗಕ್ಕಾಗಿ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ "ಮಾದಿಗ" ಎಂದು ಕಡ್ಡಾಯವಾಗಿ ಬರೆಸಬೇಕು. ಒಂದು ವೇಳೆ ಬರೆಸಲು ನಿರ್ಲಕ್ಷಸಿದರೆ, ಸರಿಯಾದ ಮಾಹಿತಿ ನೀಡದೆ ಹೋದರೆ ಸರ್ಕಾರದಿಂದ ಸಮುದಾಯಕ್ಕೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಅಲ್ಲದೆ ಸಮುದಾಯದ 30 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂದು ಮಾದಿಗ ಸಮಾಜದ ಯುವ ಮುಖಂಡ ಆಕಾಶ ಕೊಳ್ಳೂರ್ ಅವರು ಪ್ರಕಟಣೆ ಹೇಳಿಕೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.