ಕೆ ಕೆ ಆರ್ ಟಿಸಿ ನೌಕರರಿಂದ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆ

ಕೆ ಕೆ ಆರ್ ಟಿಸಿ ನೌಕರರಿಂದ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆ

ಕೆ ಕೆ ಆರ್ ಟಿಸಿ ನೌಕರರಿಂದ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆ

ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಕುರಿಯತಾಗಿ ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೆ ಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಕಲಬುರಗಿಯಲ್ಲಿ ಕೆ ಕೆ ಆರ್ ಟಿಸಿ ನೌಕರರಿಂದ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗ 1 ಮತ್ತು 2 ರ ಘಟಕದ ಕಲಬುರ್ಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘಟನೆಗಳ ಜಂಟಿ ಸಮನ್ವಯ ಸಮಿತಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ನೌಕರರು, ಅಮಿಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು. ಅಮಿತ್ ಶಾ ಅವರು ಈ ದೇಶ ಗೃಹ ಮಂತ್ರಿಯಾಗಿ ಅಧಿಕಾರ ಪಡೆಯಲು ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಕಾರಣ, ಅವರಿಂದ ಅಧಿಕಾರ ಪಡೆದು ಅವರ ಬಗ್ಗೆಯೇ ಹಗುರವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ,.? ಕಾಂಗ್ರೆಸ್ ಅವರ ವಿರುದ್ಧ ರಾಜಕೀಯ ಮಾಡಲು ಈ ರೀತಿ ಹೇಳಿಕೆ ನೀಡಿದ್ದಾರೆ. ರಾಜಕೀಯ ಮಾಡಿ ಅದರೆ ಮಹಾನ್ ನಾಯಕರ ಹೆಸರು ದುರ್ಬಳಕೆ ಮಾಡಿಕೊಂಡರೆ ಈ ದೇಶದ ಜನ ಸುಮ್ಮನಿರುವುದಿಲ್ಲ ಎಂದು ಕಿಡಿಕಾರಿದರು. 

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರ್ಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರಾದ. ರಾಮಚಂದ್ರ ಬಿ ಹೈಯಾಳಕರ್. ಸಂಗಣ್ಣಾ ಶಾಸ್ತ್ರಿ. ಸುರೇಶ್ ಬಿಲ್ಲಾಡ್. ವಸಂತ ಗೋಡಬೋಲೆ. ಅಮೃತ ಪಿರಂಗಿ. ವಿಠ್ಠಲ ಭೀಮನ. ಶಿವಶರಣಪ್ಪ ಡಬರಾಬಾದಿ. ದಯಾನಂದ ಮಾಶ್ಯಾಳಕರ್. ಸುನೀಲ್ ರಾಜೆ. ನಾಗಭೂಷಣ. ಗುಂಡುರಾಯ್ ದೊಡ್ಡಮನಿ. ಭೀಮಣ್ಣ ದಂಡಗೂಲಕರ್. ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.