ಸಕಾಲಕ್ಕೆ ನೇತ್ರ ತಪಾಸಣೆ ಕೈಗೊಳ್ಳಲು ಡಾ. ದೆರೆದ ಕರೆ

ಸಕಾಲಕ್ಕೆ ನೇತ್ರ ತಪಾಸಣೆ ಕೈಗೊಳ್ಳಲು ಡಾ. ದೆರೆದ ಕರೆ

ಸಕಾಲಕ್ಕೆ ನೇತ್ರ ತಪಾಸಣೆ ಕೈಗೊಳ್ಳಲು ಡಾ. ದೆರೆದ ಕರೆ

ಆಳಂದ: ಪ್ರತಿಯೊಬ್ಬರ ಜೀವನಕ್ಕೆ ಕಣ್ಣು ಅತಿ ಮುಖ್ಯವಾದ ಅಂಗವಾಗಿದ್ದು, ನಿರ್ಲಕ್ಷಿಸದೇ ಸಕಾಲಕ್ಕೆ ತಪಾಸಣೆ ಮಾಡಿಕೊಂಡು ಮುಂಜಾಗೃತೆ ವಹಿಸಬೇಕು ಎಂದು ಕಲಬುರಗಿ ಅನುಗ್ರಹ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಟಿ.ಎಸ್. ದೆರೆದ ಅವರು ಹೇಳಿದರು. 

ತಾಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ಕಲಬುರಗಿಯ ಹಾಗೂ ಸಿಯುಕೆಯ ಆರೋಗ್ಯ ಕೇಂದ್ರ ಜಂಟಿಯಾಗಿ ಹಮ್ಮಿಕೊಂಮಡ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಬದುಕಿನ ಒತ್ತಡ ಮೊಬೈಲ ಟಿ.ವಿ. ಲ್ಯಾಪಟಾಪ, ಕಂಪ್ಯೂಟರ್ ಬಳಕೆಯಿಂದ ಕಣ್ಣಿಗೆ ಒತ್ತಡ ಹೆಚ್ಚುತ್ತಿದ್ದು, ಆರೋಗ್ಯವಂತ ಕಣ್ಣಿದ್ದರು ತಪಾಸಣೆ ಕೈಗೊಂಡು ಅಗತ್ಯವಿದ್ದರೆ ವೈದ್ಯರು ಸೂಚಿಸದ ಬಳಿಕ ಮುಂದಿನ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಇದರಿಂದ ಮುಂದಾಗುವ ದೊಡ್ಡ ಪ್ರಮಾಣದ ಹಾನಿಯನ್ನು ತಡೆಯಲು ಸಾಧ್ಯವಾಗಲಿದೆ ಎಂದು ಅವರು ಸಲಹೆ ನೀಡಿದರು.  

 

ಶಿಬಿರವನ್ನು ಉದ್ಘಾಟಿಸಿದ ಸಿಯುಕೆಯ ಕುಲಸಚಿವ ಪ್ರೊ. ಚನ್ನವೀರ ಆರ್ ಎಮ್. ಅವರು ಮಾನಾಡಿ, ಸಿಯುಕೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಅನುಕೂಲ ಕಲ್ಪಿಸಲು ನೇತ್ರತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.  

ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದ್ಧಿ ಸೇರಿ ೧೭೪ ಮಂದಿ ತಪಾಸಣೆ ಕೈಗೊಂಡು ಅಗತ್ಯ ಸಲಹೆ ಸೂಚನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಸಿಯುಕೆಯ ಆರೋಗ್ಯ ಅಧಿಕಾರಿ ಡಾ. ಜ್ಯೋತಿ ತೆಗನೂರ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ. ನೇಹಾ, ಆಡಳಿತಾಧಿಕಾರಿ ಟಿ ಎಸ್ ದೆರೆದ ಮತ್ತು ಸಿಯುಕೆಯ ಪ್ರೊ. ಜಿ ಆರ್ ಅಂಗಡಿ, ಸಿಯುಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಗಣಪತಿ ಬಿ ಸಿನ್ನೂರ ಮತ್ತು ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಹಾಜರಿದ್ದರು.

ವರದಿಗಾರರು ಡಾ ಅವಿನಾಶ ಎಸ್ ದೇವನೂರ