ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿ ಹಾಗೂ ಖರೀದಿ ಕೇಂದ್ರ ಆರಂಭಿಸಲು : ದಯಾನಂದ ಪಾಟೀಲ್ ಆಗ್ರಹ

ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿ ಹಾಗೂ ಖರೀದಿ ಕೇಂದ್ರ ಆರಂಭಿಸಲು : ದಯಾನಂದ ಪಾಟೀಲ್ ಆಗ್ರಹ

ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿ ಹಾಗೂ ಖರೀದಿ ಕೇಂದ್ರ ಆರಂಭಿಸಲು : ದಯಾನಂದ ಪಾಟೀಲ್ ಆಗ್ರಹ 

ಕಲಬುರ್ಗಿ : ೧೭ ನೇ ಆಗಸ್ಟ್ ರೈತರು ಬೆಳೆಯುವ ಹೆಸರು, ಉದ್ದು ಮತ್ತು ತೊಗರಿ ಸೇರಿ ಎಲ್ಲಾ ಬೆಳೆಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ನೀಡಲು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈಗಿರುವ ಬೆಂಬಲ ಬೆಲೆ ಅವೈಜ್ಞಾನಿಕವಾಗಿ ದ್ದು ಬೀಜ ಗೊಬ್ಬರ ಔಷಧ ಬೆಲೆ ಗಣನಿಯವಾಗಿ ಪ್ರತಿ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು ಇದರ ಜೊತೆಗೆ ಕೂಲಿ ಕಾರ್ಮಿಕರ ಅಭಾವ ಮತ್ತು ಕೂಲಿ ಹಣ ಕೂಡ ಹೆಚ್ಚಾಗಿದ್ದು ಲಾಭವಿಲ್ಲದ ಕೃಷಿಯಲ್ಲಿ ಕಾರ್ಮಿಕರ ಸಮಸ್ಯೆ ಕೂಡ ಕಾಡುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಪಂಡಿತರು ಚಿಂತಕರು ರೈತ ಹೋರಾಟಗಾರರನ್ನು ಒಳಗೊಂಡ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಲು ಸಮಿತಿ ರಚಿಸಬೇಕು ರೈತರು ಬೆಳೆದ ಬೆಳೆಗೆ ತಗಲುವ ಖರ್ಚಿನ ಎರಡು ಪಟ್ಟು ಬೆಂಬಲ ಬೆಲೆ ಹೆಚ್ಚಿಗೆ ಮಾಡಬೇಕು.

 ಆಳುವ ಸರ್ಕಾರಗಳು ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ಬರಿ ಮಾತಿನಲ್ಲಿ ಹೇಳಿದರೆ ಸಾಲದು ಈ ಕೂಡಲೇ ಕಾರ್ಯರೂಪಕ್ಕೆ ತರಲು ಒತ್ತಾಯ ಮಾಡುತ್ತೇನೆ ಎಂದರು. 

ಈಗ ಹೆಸರು ಬೇಳೆ ಮಾರುಕಟ್ಟೆಗೆ ಬಂದಿದ್ದು ಬೆಂಬಲ ಬೆಲೆಗಿಂತಲೂ ಸುಮಾರು 1880 ರೂಪಾಯಿ ಕಡಿಮೆ ಬೆಲೆಗೆ ರೈತರು ಮಾರಾಟ ಮಾಡುತ್ತಿದ್ದಾರೆ ಈ ಕೂಡಲೇ ಜಿಲ್ಲಾಡಳಿತ ಕರ್ನಾಟಕ ಮಾರಾಟ ಮಹಾಮಂಡಳಿ ವತಿಯಿಂದ ಖರೀದಿ ಕೇಂದ್ರ ಪ್ರಾರಂಭಿಸಿ ಹೆಸರು ಉದ್ದು ಮತ್ತು ತೊಗರಿ ಸೇರಿ ರೈತರು ಬೆಳೆಯುವ ಎಲ್ಲಾ ದವಸ ಧಾನ್ಯಗಳನ್ನು ಖರೀದಿ ಮಾಡಬೇಕು ಮತ್ತು ಹೆಸರಿಗೆ ಈಗಿರುವ ಬೆಂಬಲ ಬೆಲೆ 10 ಸಾವಿರಕ್ಕೆ ಹೆಚ್ಚಿಸಬೇಕು ರಾಜ್ಯ ಸರ್ಕಾರ ತೊಗರಿ ಖರೀದಿಗೆ ಪ್ರೋತ್ಸಾಹಧನ ನೀಡಿದಂತೆ ಹೆಸರಿಗೂ ಕ್ವಿಂಟಾಲ್ ಗೆ 1 ಸಾವಿರ ನೀಡಬೇಕು ಎಂದು ಹೇಳಿದರು.

ಖರೀದಿ ಕೇಂದ್ರಗಳಿಗೆ ದಿನಾಂಕ ನಿಗದಿಪಡಿಸದೆ ವರ್ಷಪೂರ್ತಿ ಖರೀದಿ ಕೇಂದ್ರ ತೆರೆದು ರೈತ ಬೆಳೆದ ಎಲ್ಲಾ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು.

ದೀರ್ಘ ಕಾಲದ ತೊಗರಿ ಬೇಳೆಗೆ ಈಗ ನಿಗದಿಪಡಿಸಿದ ಬೆಂಬಲ ಬೆಲೆ ಸಂಪೂರ್ಣ ಅವೈಜ್ಞಾನಿಕವಾಗಿದ್ದೂ ಇದರಿಂದ ತೊಗರಿ ಬೆಳೆಯುವ ರೈತ ದಿವಾಳಿ ಅಂಚಿನಲ್ಲಿದ್ದಾನೆ ಎರಡು ತಿಂಗಳ ಹೆಸರಿಗೆ ನಿಗದಿಪಡಿಸಿದ ದರಕ್ಕಿಂತಲೂ ತೊಗರಿಗೆ ಕಡಿಮೆ ಬೆಂಬಲ ಬೆಲೆ ನಿಗದಿಪಡಿಸಿದ್ದು ಈ ಕೂಡಲೇ ಪುನ‌ರ ಪರಿಶೀಲಿಸಿ ಕನಿಷ್ಠ 12,000 ಕ್ಕೆ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ರಾಜ್ಯ ಸರಕಾರ ಕೂಡ ಪ್ರತಿ ಕ್ವಿಂಟಾಲ್ ಗೆ 2000 ರೂಪಾಯಿ ಪ್ರೋತ್ಸಾಹಧನ ತಕ್ಷಣ ಘೋಷಣೆ ಮಾಡಬೇಕು.

ಪ್ರಸ್ತುತ ಸಾಲಿನಲ್ಲಿ ಹೆಸರು ಬಿತ್ತನೆ ಮಾಡಿದ ಕೆಲವು ಕಂಪನಿಯ ಬೀಜಗಳು ಕಾಯಿಕಟ್ಟದೆ ಇರುವುದರಿಂದ ರೈತರು ಕಂಗಲಾಗಿದ್ದಾರೆ, ಕಳಪೆ ಬೀಜದ ಕಂಪನಿಯವರು ಬಿಲ್ಲು ಹೊಂದಿರುವ ರೈತರಿಗೆ ಮಾತ್ರ ಪಾಕೆಟ್ ಗೆ 5000 ಸಾವಿರ ರಿಂದ 10000 ಸಾವಿರ ರೂಪಾಯಿಗಳನ್ನು ಕೊಟ್ಟು ತಮ್ಮ ತಪ್ಪನ್ನು ಮುಚ್ಚಿಕೊಳ್ಳುತ್ತಿದ್ದಾರೆ.

 ಕಲಬುರ್ಗಿ ಜಿಲ್ಲೆಯಲ್ಲಿ ಒಂದು ಪಾಕೆಟ್ ಹೆಸರು ಬೀಜಕ್ಕೆ 8 ರಿಂದ 10 ಕ್ವಿಂಟಾಲ್ ಇಳುವರಿ ಬರುತ್ತದೆ. ಕಳಪೆ ಬೀಜ ನೀಡಿದ ಕಂಪನಿಯವರು ಕನಿಷ್ಠ ಒಂದು ಪಾಕೆಟ್ ಕನಿಷ್ಠ 60 ಸಾವಿರದಂತೆ ಬಿಲ್ಲು ಇರಲಿ ಬಿಡಲಿ ಆಗ್ರೋ ಕೇಂದ್ರದಿಂದ ಮಾಹಿತಿ ಪಡೆದು ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಕೃಷಿ ಅಧಿಕಾರಿಗಳು ಕೂಡ ಹೆಸರು ಬೆಳೆ ಹಾಳಾದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಕಳಪೆ ಬೀಜದಿಂದ ಹಾನಿಗೊಳಗಾದ ರೈತರಿಗೆ ಕಂಪನಿಯಿಂದ ಸೂಕ್ತ ಪರಿಹಾರ ಕುಡಿಸಲು ಮುಂದಾಗಬೇಕು ಹಾಗೂ ಕಳಪೆ ಬೀಜ ಮಾರಾಟ ಮಾಡಿದ ಕಂಪೆನಿಯ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ರೈತರ ನೆರವಿಗೆ ಕೃಷಿ ಇಲಾಖೆ ಮತ್ತು ಜಿಲ್ಲಾಡಳಿತ ಬರಬೇಕೇಂದು ಈ ಮೂಲಕ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ .

ಇಲ್ಲದೆ ಹೋದರೆ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ದಯಾನಂದ ಪಾಟೀಲ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ್ ಪಾಟೀಲ್ ಗೌನಳ್ಳಿ, ಸಿದ್ರಾಮಪ್ಪ ಪಾಟೀಲ್, ದೇವಿಂದ್ರ ರೆಡ್ಡಿ, ರಾಜಶೇಖರ ಕಲಬುರಗಿ ಉಪಸ್ಥಿತರಿದ್ದರು.