ಒಳ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ರಾಜ್ಯ ಮಾದಿಗ ಸಮಾಜದ ಬೃಹತ್ ಪ್ರತಿಭಟನೆ

ಒಳ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ರಾಜ್ಯ ಮಾದಿಗ ಸಮಾಜದ ಬೃಹತ್ ಪ್ರತಿಭಟನೆ
ಕಲಬುರಗಿ : ೧೭ ನೇ ಆಗಸ್ಟ್, ಒಳ ಮೀಸಲಾತಿ ವರ್ಗೀಕರಣ ಶೀಘ್ರ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ
ಕರ್ನಾಟಕ ರಾಜ್ಯ ಮಾದಿಗ ಸಮಾಜ (ರಿ) ಕಲಬುರಗಿ ವತಿಯಿಂದ ದಿನಾಂಕ 30/08/2024 ರಂದು ಮಾದಿಗರ ಜನಾಂದೋಲನಾ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಾದಿಗರ ಸಮಾಜದ ವಿಭಾಗೀಯ ಅಧ್ಯಕ್ಷರಾದ ಚಂದ್ರಕಾಂತ ನಾಟಿಕರ್ ತಿಳಿಸಿದ್ದಾರೆ.
ದಿನಾಂಕ:01/08/2024 ರಂದು ಭಾರತದ ಸರ್ವೋಚ್ಛ ನ್ಯಾಯಾಲಯದ 7 ಜನ ನ್ಯಾಯಧೀಶರ ನ್ಯಾಯಮೂರ್ತಿಗಳ ಫೀಠವು ಒಳ ಮೀಸಲಾತಿ ವರ್ಗೀಕರಣ ಅನುಷ್ಠಾನಗೊಳಿಸಲು ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಆಯಾ ರಾಜ್ಯಗಳಿಗೆ ಒಳ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ ನೀಡಿರುವ ಆದೇಶದಂತೆ ರಾಜ್ಯ ಸರ್ಕಾರ ಶೀಘ್ರವೇ ಒಳ ಮೀಸಲಾತಿ ವರ್ಗೀಕರಣವನ್ನು ಮಾಡಬೇಕು.
ಸುಪ್ರಿಂ ಕೋರ್ಟ ಸಂವಿಧಾನಿಕವಾಗಿ' ಪೀಠವು ಪರಿಶಿಷ್ಟ ಜಾತಿಯ ಸಾಮಾಜೀಕವಾಗಿ, ಆರ್ಥಿಕವಾಗಿ ಅತಿ ಹಿಂದುಳಿದ ಉಪಜಾತಿಗಳಿಗೆ ಒಳ ಮೀಸಲಾತಿ ನೀಡುವ ಸಂವಿಧಾನಿಕ ಅಧಿಕಾರ ಆಯಾ ರಾಜ್ಯಗಳಿಗೆ ನೀಡಿರುತ್ತದೆ.
ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವು ಮಾದಿಗ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡುವಂತೆ ಹೇಳಿತ್ತು. ಇಷ್ಟೆಲ್ಲ ಆದರೂ ರಾಜ್ಯದಲ್ಲಿ ಆಳುವ ಸರ್ಕಾರಗಳು ಇಲ್ಲಿಯವರೆಗೆ ಜಾರಿ ಮಾಡಿರುವುದಿಲ್ಲ.
ಸುಮಾರು 40 ವರ್ಷಗಳ ಬೇಡಿಕೆಯಾದಂತಹ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಒಳ ಮೀಸಲಾತಿ ವರ್ಗೀಕರಣಗೊಳಿಸಲು ರಾಜ್ಯದ ಮುಖ್ಯಮಂತ್ರಿಗಳು ಸಚಿವ ಸಂಪುಟದ ವಿಶೇಷ ಸಭೆ ಕರೆದು ಶೀಘ್ರವೆ ಒಳ ಮೀಸಲಾತಿ ವರ್ಗಿಕರಣ ಅನುಷ್ಠಾನಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಮಾದಿಗ ಸಮಾಜ (ರಿ), ಕಲಬುರಗಿ ವತಿಯಿಂದ ಇದೇ ತಿಂಗಳ 30/08/2024 ರಂದು ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಿಂದ ಸರ್ದಾರ ವಲ್ಲಬಾಯಿ ಪಟೇಲ್ ವೃತ್ತದ ಮಾರ್ಗವಾಗಿ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ರವರೆಗೆ ಒಳ ಮೀಸಲಾತಿ ವರ್ಗೀಕರಣ ಶೀಘ್ರವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮಾದಿಗರ ಜನಾಂದೋಲನಾ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಾಬು ಸುಂಠಾಣ, ಜಿಲ್ಲಾಧ್ಯಕ್ಷ ಸಿದ್ದಲಿಂಗ ಸಿ. ಕಟ್ಟಿಮನಿ,ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗಮ್ಮ ಡಿ. ಕವಳೆಕರ್, ಯುವ ಘಟಕದ ಜಿಲ್ಲಾಧ್ಯಕ್ಷಪ್ರಕಾಶ ಎಸ್. ಮಾಳಗೆ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಜೈರಾಜ ಎ. ಕಿಣಗಿಕರ್, ಕಲಬುರಗಿ ತಾಲೂಕು ಅಧ್ಯಕ್ಷ ಅಶೋಕ ಜಗದಾಳೆ, ಸಮಾಜದ ಮುಖಂಡ ಮಲ್ಲಪ್ಪ ಚಿಗನೂರ, ಜಾನಪ್ಪ ಎನ್. ಶಿವನೂರ ಬಂಡೇಶ ರತ್ನಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.