"ಸವಾಲಿಗೆ ಸವಾಲು – ಯತ್ನಾಳ್‌ಗೆ ಶಿವಾನಂದ ಪಾಟೀಲ ಟಾಂಗ್!"

"ಸವಾಲಿಗೆ ಸವಾಲು – ಯತ್ನಾಳ್‌ಗೆ ಶಿವಾನಂದ ಪಾಟೀಲ ಟಾಂಗ್!"

"ಸವಾಲಿಗೆ ಸವಾಲು – ಯತ್ನಾಳ್‌ಗೆ ಶಿವಾನಂದ ಪಾಟೀಲ ಟಾಂಗ್!"

ಶಿವಾನಂದ ಪಾಟೀಲ ರಾಜೀನಾಮೆ – ಯತ್ನಾಳ್ ಸವಾಲಿಗೆ ತಕ್ಷಣದ ಪ್ರತಿಕ್ರಿಯೆ !

ವಿಜಯಪುರ 02 ಮೇ 2025 : ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರ ಸವಾಲಿಗೆ ತಕ್ಷಣ ಸ್ಪಂದಿಸಿದ ಬಾಗೇವಾಡಿ ಕ್ಷೇತ್ರದ ಶಾಸಕ ಹಾಗೂ ಸಚಿವ ಶಿವಾನಂದ ಪಾಟೀಲ ಅವರು ತಮ್ಮ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಲ್ಲಿಸಿ, ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.

ರಾಜೀನಾಮೆ ಪತ್ರದಲ್ಲಿ, "ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ನನ್ನ ವಿರುದ್ಧ ಬಸವನ ಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧಿಸುವ ಸವಾಲು ಹಾಕಿದ್ದಾರೆ. ನಾನು ಅವರು ಹಾಕಿದ ಸವಾಲನ್ನು ಸ್ವೀಕರಿಸುತ್ತಿದ್ದೇನೆ. ಅದರಿಂದ, ನನ್ನ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಆದರೆ, ಅವರು ಕೂಡ ರಾಜೀನಾಮೆ ನೀಡಿದ ನಂತರವೇ ನನ್ನ ರಾಜೀನಾಮೆ ಅಂಗೀಕರಿಸಬೇಕು" ಎಂದು ಉಲ್ಲೇಖಿಸಿದ್ದಾರೆ.

ಈ ಬೆಳವಣಿಗೆಯ ಹಿಂದಿನ ಹಿನ್ನೆಲೆಯಾಗಿ, ಯತ್ನಾಳ್ ಅವರು ಶಿವಾನಂದ ಪಾಟೀಲ ಅವರ ಮನೆತನ, ಧರ್ಮ, ಹಾಗೂ ಹೆಸರು ಕುರಿತು ನಿಂದನಾತ್ಮಕ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ ಪಾಟೀಲ, ನಗರ ಕ್ಷೇತ್ರದಿಂದ ಯತ್ನಾಳ್ ವಿರುದ್ಧ ಸ್ಪರ್ಧಿಸಲು ಸಿದ್ಧರಾಗಿರುವುದಾಗಿ ಘೋಷಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಯತ್ನಾಳ್ ಅವರು ಇನ್ನೂ ಎರಡು ಶಾಸಕರಾದ ವಿಜಯಾನಂದ ಕಾಶಪ್ಪನವರ (ಹುನಗುಂದ) ಮತ್ತು ಯಶವಂತರಾಯಗೌಡ ಪಾಟೀಲ (ಇಂಡಿ) ವಿರೂದ್ಧವೂ ವಾಗ್ದಾಳಿ ನಡೆಸಿ, ಅವರಿಗೂ ರಾಜೀನಾಮೆ ನೀಡುವಂತೆ ಸವಾಲು ಹಾಕಿದ್ದರು. “ಪಕ್ಷೇತರರಾಗಿ ಸ್ಪರ್ಧಿಸಿ, ನಾನು ಇಬ್ಬರನ್ನೂ ಸೋಲಿಸುತ್ತೇನೆ” ಎಂಬ ಧೈರ್ಯವಂತ ಹೇಳಿಕೆಯನ್ನು ನೀಡಿದ್ದರು.

ಇಡೀ ಘಟನೆಯು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಚುನಾವಣಾ ಸಮರ ಪ್ರಾರಂಭದ ಘೋಷಣೆಯಂತಿದೆ.

KKP ನ್ಯೂಸ್