ಮಾಲಿಕಯ್ಯ ಗುತ್ತೇದಾರ ಹೆಸರಿಗೆ ಕಳಂಕ ತರುವ ಹುನ್ನಾರ : ಭೀಮಾಶಂಕರ
ಮಾಲಿಕಯ್ಯ ಗುತ್ತೇದಾರ ಹೆಸರಿಗೆ ಕಳಂಕ ತರುವ ಹುನ್ನಾರ : ಭೀಮಾಶಂಕರ
ಕಲಬುರಗಿ 29. ಕಲ್ಯಾಣ ಕರ್ನಾಟಕದ ಜನನಾಯಕ, ಡೈನಾಮಿಕ ಮಾಸ ಲೀಡರ, ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ ಅವರು. ರಾಜಕೀಯದಲ್ಲಿ ಎಂದಿಗೂ ಒಂದೆ ಒಂದು ಕಪ್ಪು ಚಿಕ್ಕೆ ಇಲ್ಲದ ಧೀಮಂತ ನಾಯಕ. ಅವರ ನೇರ ನುಡಿಯ ವ್ಯಕ್ತಿತ್ವದ ನಾಯಕರು.ರಾಜಕೀಯ ಜೀವನದಲ್ಲಿ ಅವರಿಗೆ ಕೆಟ್ಟ ಹೆಸರು ತರಬೇಕು ಎನ್ನುವ ಕೆಲವು ಸಹಿಸದ ಕುತಂತ್ರಗಳು ಇಂತಹ ಚರಿತ್ರೆ ಹರಣ ಮಹಿಳೆಯನ್ನು ಮುಂದೆ ಇಟ್ಟುಕೊಂಡು ಇಂತಹ ನೀಚ ಕೃತ್ಯ ಎಸಗಿರುವುದು ಖಂಡನೀಯ ಎಂದರು ಸಮಾಜ ಹೋರಾಟಗಾರ ಭೀಮಾಶಂಕರ.ಎನ್.ಯಳಮೇಲಿ ಹೇಳಿದ್ದಾರೆ.
ಮಾಲಿಕಯ್ಯ ಗುತ್ತೆದಾರ ಅವರು ತಮ್ಮ ಜೀವನದಲ್ಲಿ ಯಾವುದೇ ಕೆಟ್ಟ ಕೆಲಸ ಮಾಡಿದವರಲ್ಲ, ಪ್ರತಿಯೊಬ್ಬ ಮಹಿಳೆಯರಿಗೆ ತುಂಬಾ ಗೌರವಿಸುವ ವ್ಯಕ್ತಿ ಇವರ ಹೆಸರಿಗೆ ಕಪ್ಪು ಮಸಿ ಬಳೆಯುವ ಮೇಲ್ನೋಟದ ಪ್ರಯತ್ನ ಇದಾಗಿದೆ. ಈ ಮಧ್ಯೆ ಇಂತಹ ನೀಚ ಮಹಿಳೆಯ ನಾಗಾಲೋಟಕ್ಕೆ ಬ್ರೇಕ್ ಹಾಕಲು ಮುತ್ಸದ್ದಿ ಯುವ ನಾಯಕ ರೀತೇಶ ಗುತ್ತೇದಾರ ಅವರು ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ಮಹಿಳೆಗೆ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ.
ಹಿನ್ನೆಲೆಯಲ್ಲಿ ಇದೀಗ ಇಂತಹ ನೀಚ ಕೃತ್ಯಕ್ಕೆ ಕಡಿವಾಣ ಹಾಕುವ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದ್ದಾರೆ. ಏನೆ ಇರಲಿ ಕಲ್ಯಾಣ ಕರ್ನಾಟಕ ಜನ ಮಾಲಿಕಯ್ಯ.ವಿ.ಗುತ್ತೆದಾರಜೀ ಅವರ ಜೊತೆ ಇರೋತ್ತೆ ಇದರಲ್ಲಿ ಯಾವುದೆ ಸಂಶಯ ಬೇಡ ಎಂದು ಮಾಲೀಕಯ್ಯ.ವಿ.ಗುತ್ತೆದಾರ ಕಟ್ಟಾ ಅಭಿಮಾನಿ ಯಳಿಮೇಲಿ ಪತ್ರಿಕೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.