ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ - ಶಂಕರಗೌಡ ಕನ್ನೊಳ್ಳಿ ಆಗ್ರಹ..
ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ - ಶಂಕರಗೌಡ ಕನ್ನೊಳ್ಳಿ ಆಗ್ರಹ..
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ.ವಿರುದ್ಧ ರಾಜ್ಯಪಾಲರು ಕೊಟ್ಟ ಪ್ರಾಸುಕ್ಯೂಷನ್ ಕುರಿತು ನ್ಯಾಯಾಲಯದಲ್ಲಿ ಹಲವು ದಿನಗಳಿಂದ ವಾದವಿವಾದಗಳು ನಡೆದಿದ್ದವು ಆದರೆ ಇವಾಗ ಕರ್ನಾಟಕ ಉಚ್ಚನ್ಯಾಯಾಲಯವು ರಾಜ್ಯಪಾಲರ ಪ್ರಾಸುಕ್ಯೂಷನ್ ವಿಚಾರವನ್ನೂ ಎತ್ತಿ ಹಿಡಿದಿದೆ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕೆ ಕೂಡಲೇ ರಾಜೀನಾಮೆ ಕೊಟ್ಟು ಕಾನೂನಿನ ತನಿಖೆಯನ್ನು ಎದುರಿಸಬೇಕು ಎಂದು ಸುಂಬಡ ಗ್ರಾಮದ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಧ ಶಂಕರಗೌಡ ಕನ್ನೊಳ್ಳಿ ಅವರು ಆಗ್ರಹಿಸಿದ್ದಾರೆ.
ಹಿಂದೂ ವಿರೋದಿ ಸಿದ್ದರಾಮಯ್ಯ ಅವರು ಯಾವತ್ತೂ ಭಕ್ತಿಯಿಂದ ದೇವಾಲಯಕ್ಕೆ ಹೋಗಲ್ಲ ಹಣೆಯ ಮೇಲೆ ತಿಲಕ ಇಡಲ್ಲ, ಇವಾಗ ಸಮಸ್ಯೆ ಬಂದಿದೆ ಎಂದು ಹನುಮಾನ್ ದೇವಾಲಯಕ್ಕೆ ಹೋದರೆ ಎಲ್ಲಿ ಒಳ್ಳೇಯದು ಆಗುತ್ತೆ , ಅದು ಕೂಡ ಶಾಪವಾಗಿದೆ ಅವರು ಒಂದು ಘನತೆ ಸ್ಥಾನದಲ್ಲಿ ಇರುವವರು ಮೊದಲು ರಾಜೀನಾಮೆ ಕೊಡಲಿ ಇದರಲ್ಲಿ ಅವರದು ಏನು ತಪ್ಪಿಲ್ಲ ಅಂತ ತೀರ್ಪು ಬಂದ ಮೇಲೆ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಈ ಸಂದರ್ಭದಲ್ಲಿ ಶಂಕರ್ ಗೌಡ ಕನ್ನೊಳ್ಳಿ ಅವರು ಸಿದ್ದರಾಮಯ್ಯ ನವರ ರಾಜೀನಾಮೆಗೆ ಆಗ್ರಹಿಸಿದ್ದಾರೆ
ವರದಿ ಜೆಟ್ಟೆಪ್ಪ ಎಸ್ ಪೂಜಾರಿ