“ರಾಷ್ಟ್ರಭಕ್ತಿಗೆ ಬಲ, ರಾಷ್ಟ್ರದ್ರೋಹಕ್ಕೆ ದಂಡನೆ ಅಗತ್ಯ”

“ರಾಷ್ಟ್ರಭಕ್ತಿಗೆ ಬಲ, ರಾಷ್ಟ್ರದ್ರೋಹಕ್ಕೆ ದಂಡನೆ ಅಗತ್ಯ”

ರಾಷ್ಟ್ರಭಕ್ತಿಗೆ ಬಲ, ರಾಷ್ಟ್ರದ್ರೋಹಕ್ಕೆ ದಂಡನೆ ಅಗತ್ಯ”

ಭಾರತವಿರೋಧಿ ಮನಸ್ಥಿತಿಗೆ ಜಾಗವೇ ಇಲ್ಲ: ರಾಷ್ಟ್ರಭಕ್ತರಿಗೆ ರಕ್ಷಣೆ, ದೇಶದ್ರೋಹಿಗಳಿಗೆ ಶಿಸ್ತಿನ ಪಾಠ  

ಭಾರತದ ಅನ್ನ-ನೀರು ಕುಡಿದು, ಇಲ್ಲಿಯ ಹವಾಮಾನದಲ್ಲಿ ಬದುಕಿ, ಇಲ್ಲಿಯ ಸೌಲಭ್ಯಗಳನ್ನು ಬಳಸಿಕೊಂಡು ಪಾಕಿಸ್ತಾನ ಅಥವಾ ಇತರ ರಾಷ್ಟ್ರಗಳ ಪರವಾಗಿ ಮಾತನಾಡುವವರು ಈ ನಾಡಿನ ನಿಜವಾದ ಮೌಲ್ಯವನ್ನು ತಿಳಿದುಕೊಳ್ಳಲೇಬೇಕು. ಈ ದೇಶದಲ್ಲಿ ಹುಟ್ಟಿ, ಸರ್ಕಾರದ ಉಚಿತ ಸೌಲಭ್ಯಗಳನ್ನು ಪಡೆದು, ಬಡರಿಗೆ ಮೀಸಲಾಗಿರುವ ಆಹಾರ, ವೈದ್ಯಕೀಯ ಹಾಗೂ ಪೌರತ್ವದ ಹಕ್ಕುಗಳನ್ನು ಉಪಯೋಗಿಸಿ, ತಾವು ಭಾರತಕ್ಕೆ ದ್ರೋಹ ಮಾಡುತ್ತಿರುವುದು ಕ್ಷಮೆಯಯೋಗ್ಯವಲ್ಲ.

ಇಂತಹ ವಿರೋಧಿ ಮನೋಭಾವನೆಗಳಿಗೆ ತಕ್ಷಣವೇ ಕಡಿವಾಣ ಹಾಕುವುದು ಇಂದು ತೀವ್ರವಾಗಿ ಅಗತ್ಯವಾಗಿದೆ. ದೇಶದ ವಿರೋಧಿ ಚಟುವಟಿಕೆಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವವರ ವಿರುದ್ಧ ಸರ್ಕಾರವು ಸಡಿಲತೆವಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹವರನ್ನು ಸರ್ಕಾರದ ಎಲ್ಲ ಸೌಲತ್ಯಗಳಿಂದ ವಂಚಿಸಬೇಕು, ಪ್ರತಿದಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಕಾನೂನು ಕ್ರಮ ಜಾರಿಗೆ ತರುವ ಜೊತೆಗೆ, ವಿಶೇಷ ಕಾನೂನು ರೂಪಿಸುವ ಅಗತ್ಯವಿದೆ.

ಯಾರಿಗಾದರೂ ಪಾಕಿಸ್ತಾನ ಅಥವಾ ಇತರ ರಾಷ್ಟ್ರಗಳ ಪರ ಜೀವಿಸುವ ಇಚ್ಛೆ ಇದ್ದರೆ, ಅವರಿಗೆ ಆ ದಿಕ್ಕಿಗೆ ತೆರಳುವ ಅವಕಾಶ ನೀಡಬಹುದು. ಆದರೆ ಭಾರತೀಯ ಭೂಮಿಯಲ್ಲಿ ನಿಂತು ಭಾರತವನ್ನು ನಿಂದಿಸಲು ಅವಕಾಶ ನೀಡಬಾರದು. ಇಂತಹ ವ್ಯಕ್ತಿಗಳನ್ನು ಬೆಂಬಲಿಸುವ ಕುಟುಂಬಗಳು, ಸಂಘಟನೆಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ದೇಶದ ಒಳಾಂಗಣ ಭದ್ರತೆಯೇ ಮುಖ್ಯ.

ಜಾತಿ, ಮತ, ಪಂಥ, ಧರ್ಮ ಎಲ್ಲವನ್ನೂ ಮೀರಿದಂತೆ 'ನಾವು ಭಾರತೀಯರು' ಎಂಬ ಭಾವನೆ ಮನೆ ಮನೆಗೂ, ರಾಜ್ಯ ರಾಜ್ಯಕ್ಕೂ ಹರಡಬೇಕು. ದೇಶದ ವಿರೋಧದ ಯಾವುದೇ ಹೇಳಿಕೆ ಅಥವಾ ಅಕ್ರಮ ಚಟುವಟಿಕೆಗಳು ಕಾಣಿಸಿಕೊಂಡ ತಕ್ಷಣವೇ ‘ಗುಂಡಾಗಿರಿ ಕಾಯ್ದೆ’ ಅಡಿಯಲ್ಲಿ ಬಂಧಿಸಿ, ಪ್ರತ್ಯೇಕ ಕಾನೂನುಗಳಡಿ ಕಠಿಣ ಕ್ರಮ ಜಾರಿಯಾಗಬೇಕು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ದೇಶಗಳಿಂದ ಅಕ್ರಮವಾಗಿ ವಲಸೆ ಬಂದವರು ತಕ್ಷಣವೇ ತಮ್ಮ ದೇಶಗಳಿಗೆ ಹಿಂದಿರುಗಬೇಕು. ಇಂತಹ ವಲಸೆಗೆ ಶಾಶ್ವತ ತಡೆ ನೀಡಬೇಕಾಗಿದೆ. ಭಾರತೀಯರ ಹೊರತು ಯಾರಿಗೂ ಇಲ್ಲಿಗೆ ಪ್ರವೇಶ ನೀಡಬಾರದು. ಆಧಾರ್ ಕಾರ್ಡ್ ಹಾಗೂ ಇತರ ಸೌಲಭ್ಯಗಳನ್ನು ನಕಲಿ ದಾಖಲೆಗಳ ಮೂಲಕ ಕೊಡಿಸುತ್ತಿರುವ ಏಜೆಂಟ್‌ಗಳ ಪಟ್ಟಿಯನ್ನು ತಯಾರಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ಪಂಜಾಬ್, ರಾಜಸ್ಥಾನ್ ಹಾಗೂ ಉತ್ತರ ಪ್ರದೇಶ ಬಾರ್ಡರ್‌ಗಳಲ್ಲಿ ಶಾಂತಿ ಇದ್ದರೂ, ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಇನ್ನೂ ಕೂಡ ಮುಂದುವರಿದಿವೆ. ಪುಲ್ವಾಮಾ, ಫುಲ್ಗಾಮ್ ಭಾಗಗಳಲ್ಲಿ ನಡೆದ ಉಗ್ರ ದಾಳಿಗಳು ಈ ಮಾತಿಗೆ ಸಾಕ್ಷಿಯಾಗಿವೆ. ಅಲ್ಲಿನ ಕೆಲವರು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಾ, ಉಗ್ರರಿಗೆ ಬೆಂಬಲ ನೀಡುತ್ತಿರುವ ಶಂಕೆ ಕೇಳಿಬರುತ್ತಿದೆ. ಇದು ದೇಶದ ಶಾಂತಿ ಮತ್ತು ಪ್ರಜೆಗಳ ಭದ್ರತೆಗೆ ಅಪಾಯವಾಗಿದೆ.

ಉಗ್ರತೆಯನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮವನ್ನೇ ಅಲ್ಲ, ಅವರನ್ನು ಪರೋಕ್ಷವಾಗಿ ಬೆಂಬಲಿಸುವ ರಾಜಕೀಯ ಪಕ್ಷಗಳು ಕೂಡ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ದೇಶದ ಪರ ನಿಲ್ಲಬೇಕು. ರಾಜಕೀಯ ಲಾಭಕ್ಕಿಂತ ದೇಶದ ಭದ್ರತೆ ಮೊದಲ ಆದ್ಯತೆ ಎನ್ನುವ ಸಂದೇಶ ಜನತೆಗೆ ತಲುಪಬೇಕು.

ದೇಶದ ಶಾಂತಿ, ಭದ್ರತೆ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುವ ಯಾವುದೇ ಮನಸ್ಥಿತಿಯ ವಿರುದ್ಧ ಉಗ್ರ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ನಮ್ಮ ಸಂವಿಧಾನ, ಸಂಸ್ಕೃತಿ ಹಾಗೂ ದೇಶಭಕ್ತಿಯ ನಿಜವಾದ ಪರಿಭಾಷೆಯಾಗಿರಬೇಕು.

ಸಂಪಾದಕೀಯ -ಶರಣಗೌಡ ಪಾಟೀಲ ಪಾಳಾ