ಯೋಗದಿಂದ ಆರೋಗ್ಯ ಭಾಗ್ಯ ಐ ಕೆ ಪಾಟೀಲ್

ಯೋಗದಿಂದ ಆರೋಗ್ಯ ಭಾಗ್ಯ ಐ ಕೆ ಪಾಟೀಲ್

ಯೋಗದಿಂದ ಆರೋಗ್ಯ ಭಾಗ್ಯ ಐ ಕೆ ಪಾಟೀಲ್ 

ಕಲಬುರ್ಗಿ: ಯೋಗವು ಭಾರತೀಯ ಸಂಸ್ಕ್ರತಿಯ ಮೂಲ ಬೇರ.ಇಡಿ ವಿಶ್ವಕ್ಕೆ ನಮ್ಮ ದೇಶದ ಪರಿಚಯ ಆಗಿರುವುದೇ ಯೋಗ ಮತ್ತು ಅಧ್ಯಾತ್ಮಿಕತೆಯಿಂದ ಯೋಗವು ಆರೋಗ್ಯ ವೃದ್ಧಿಸುವ ಸಾಧನವೆಂದರೆ ಯೋಗ ಮಾತ್ರ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ನಡೆದ 11 ನೇಯ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಶಾರೀರಿಕ ರೋಗಗಳನ್ನು ತಡೆಗಟ್ಟಲು ಬಹಳಷ್ಟು ಸಂಶೋಧನೆಯನ್ನು ಮಾಡಿ ಯೋಗ ಒಂದು ದಿವ್ಯ ಜೌಷಧ ಎಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಚಿಕ್ಕವರಿಂದ ದೊಡ್ಡವರು ಯೋಗ ಪ್ರಾಣಾಯಮ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು.

ಭಾರತದಿಂದ ಬಂದ ಪ್ರಾಚೀನ ಅಭ್ಯಾಸವಾದ ಯೋಗವನ್ನು ಈಗ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಪಂಚದಾದ್ಯಂತ ಅನುಸರಿಸಲಾಗುತ್ತಿದೆ. ಇದು ದೇಹ ಮತ್ತು ಮನಸ್ಸು ಎರಡಕ್ಕೂ ಸಹಾಯ ಮಾಡುತ್ತದೆ, ಇದು ವ್ಯಾಯಾಮದ ಸಂಪೂರ್ಣ ರೂಪವಾಗಿದೆ. ಪ್ರತಿ ವರ್ಷ ಜೂನ್ 21 ರಂದು, ಪ್ರಪಂಚದಾದ್ಯಂತ ಜನರು ದೈನಂದಿನ ಜೀವನದಲ್ಲಿ ಅದರ ಪ್ರಯೋಜನಗಳನ್ನು ಗುರುತಿಸಲು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಾರೆ ಎಂದು ಹೇಳಿದರು.

ಈ ವರ್ಷದ ಘೋಷವಾಕ್ಯ "ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ", ಇದು ಮಾನವರು, ಪ್ರಕೃತಿ ಮತ್ತು ಒಟ್ಟಾರೆ ಯೋಗಕ್ಷೇಮದ ನಡುವೆ ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಯೋಗದ ಪಾತ್ರವನ್ನು ಒತ್ತಿಹೇಳುತ್ತದೆ. ಈ ಜಾಗತಿಕ ಆಚರಣೆಯ 11 ನೇ ವಾರ್ಷಿಕೋತ್ಸವವನ್ನು ಗುರುತಿಸುವುದರಿಂದ 2025 ವರ್ಷವು ವಿಶೇಷವಾಗಿ ವಿಶೇಷವಾಗಿದೆ ಎಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಿಲ್ಪಾ ಅಲ್ಲದ ವಹಿಸಿದ್ದರು ಉಪನ್ಯಾಸಕರಾದ ಚಂದ್ರಶೇಖರ ಪಟ್ಟಣಕರ, ಅಶ್ವಿನಿ ಪಾಟೀಲ್, ಮಧುಶ್ರೀ ಘಂಟಿ, ಶ್ವೇತಾ ಶೆಟ್ಟಿ,, ಮಲಕಮ್ಮ ಪಾಟೀಲ್ ಉಪಸ್ಥಿತರಿದ್ದರು.