ಜಮಖಂಡಿ ಗ್ರಾಮ ರಸ್ತೆಯ ದುಸ್ಥಿತಿಗೆ: – ಜೆ ಎನ್ ಪೂಜಾರಿ ಆಗ್ರಹ

ಜಮಖಂಡಿ ಗ್ರಾಮ ರಸ್ತೆಯ ದುಸ್ಥಿತಿಗೆ:  – ಜೆ ಎನ್ ಪೂಜಾರಿ ಆಗ್ರಹ

ಜಮಖಂಡಿ ಗ್ರಾಮ ರಸ್ತೆಯ ದುಸ್ಥಿತಿಗೆ: – ಜೆ ಎನ್ ಪೂಜಾರಿ ಆಗ್ರಹ 

ಯಡ್ರಾಮಿ:ಯಡ್ರಾಮಿ ತಾಲೂಕಿನ ಜಮಖಂಡಿ ಗ್ರಾಮಕ್ಕೆ ಮುನ್ನಡೆಸುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ದಿನಸಿ, ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯವೂ ಅಪಾಯದ ಜತೆ ಸಂಚರಿಸುತ್ತಿದ್ದಾರೆ. ತಗ್ಗು ಗುಂಡಿಗಳು, ಮಣ್ಣಿನ ಎತ್ತಡ, ನೀರಿನ ನಿಲ್ಲಿಕೆ ಮುಂತಾದ ಸಮಸ್ಯೆಗಳು ವಾಹನ ಸವಾರರ ಜೀವಕ್ಕೆ ಸಂಕುಲ ಸೃಷ್ಟಿಸಿವೆ.

ಈ ರಸ್ತೆಯಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ಅಪಘಾತಗಳಿಂದಾಗಿ ಕೆಲವರು ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದರೆ, ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಸ್ಥಳೀಯ ಮೂಲಗಳಿಂದ ಲಭ್ಯವಾಗಿದೆ. 

ಇಂತಹ ಭೀಕರ ಸ್ಥಿತಿಯ ಕುರಿತು ಪ್ರತಿಕ್ರಿಯೆ ನೀಡಿರುವ ಸಮಾಜಮುಖಿ ಚಿಂತಕರಾದ ಜೆ ಎನ್ ಪೂಜಾರಿ ಅವರು, "ಸಾಮಾನ್ಯ ಜನರ ಬಾಳಿಗೆ ಬೆಲೆ ಇಲ್ಲವೇ? ಪ್ರತಿನಿಧಿಗಳು ಕೇವಲ ಚುನಾವಣೆಯಲ್ಲಿ ಕಾಣಿಸಿಕೊಳ್ಳಲು ಮಾತ್ರನಾ?" ಎಂದು ಕಿಡಿಕಾರಿದ್ದಾರೆ.

ಅವರು ಮುಂದುವರಿಸಿ, "ಜಮಖಂಡಿಯ ರಸ್ತೆದ್ವಾರ ನಿತ್ಯ ಸಂಚರಿಸಬೇಕು. ಇದೇ ಮೂಲಕ ಶಾಸಕ ಡಾ. ಅಜೇಯ ಸಿಂಗ್ ಅವರು ಜನಸಾಮಾನ್ಯರ ನೋವು ಅರಿಯಲಿ," ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

ಸ್ಥಳೀಯರು ಈ ರಸ್ತೆ ಸುಧಾರಣೆಯಾಗುವ ದಿನದತ್ತ ನೋಟ ಹರಿಸುತ್ತಿದ್ದಾರೆ.

ವರದಿ: ಜೆಟ್ಟೆಪ್ಪ ಎಸ. ಪೂಜಾರಿ